ಪುಣೆ:ರೇಡರ್ ನರೇಂದರ್ ಅವರ ಸೊಗಸಾದ ಆಟದ ನೆರವಿನಿಂದ ತಮಿಳ್ ತಲೈವಾಸ್ ತಂಡದವರು ಪ್ರೊ ಕಬಡ್ಡಿ ಲೀಗ್ನ ಪುಣೆ ಲೆಗ್ನ ಮೊದಲ ಪಂದ್ಯದಲ್ಲಿ ಗೆಲುವು ಪಡೆದರು.

ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ತಲೈವಾಸ್ 38–27 ಪಾಯಿಂಟ್ಗಳಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ನರೇಂದರ್ 13 ಪಾಯಿಂಟ್ಸ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ಅಜಿಂಕ್ಯಾ ಪವಾರ್ ಆರು ಪಾಯಿಂಟ್ಸ್ ತಂದಿತ್ತರು.

ಮೊದಲಾರ್ಧ ಕೊನೆಗೊಂಡಾಗ ತಲೈವಾಸ್ 20–8 ರಲ್ಲಿ ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ಮತ್ತೆ 18 ಪಾಯಿಂಟ್ಸ್ ಕಲೆಹಾಕಿ ಭರ್ಜರಿ ಗೆಲುವು ಪಡೆಯಿತು. ಮೊದಲ ಆರು ನಿಮಿಷಗಳಲ್ಲೇ ಎದುರಾಳಿಗಳನ್ನು ಆಲೌಟ್ ಮಾಡಿದ ತಲೈವಾಸ್ 12–1 ರಲ್ಲಿ ಮುನ್ನಡೆ ಗಳಿಸಿತು.

ಜೈಪುರ ತಂಡ ದ್ವಿತೀಯಾರ್ಧದಲ್ಲಿ ಮರುಹೋರಾಟಕ್ಕೆ ಪ್ರಯತ್ನಿಸಿತು. 37ನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿತು. ಆದರೆ ತಲೈವಾಸ್ ಉತ್ತಮ ಮುನ್ನಡೆ ಹೊಂದಿದ್ದರಿಂದ ಗೆಲುವು ಸಾಧ್ಯವಾಗಲಿಲ್ಲ.

ಪಂದ್ಯ ಟೈ: ಪುಣೇರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವಣ ದಿನದ ಎರಡನೇ ಪಂದ್ಯ 27–27 ರಲ್ಲಿ ‘ಟೈ’ನಲ್ಲಿ ಕೊನೆಗೊಂಡಿತು.

ಇಂದಿನ ಪಂದ್ಯಗಳು

ಬೆಂಗಳೂರು ಬುಲ್ಸ್– ದಬಾಂಗ್ ಡೆಲ್ಲಿ (ರಾತ್ರಿ 7.30)

ತೆಲುಗು ಟೈಟನ್ಸ್– ಗುಜರಾತ್ ಜೈಂಟ್ಸ್ (ರಾತ್ರಿ 8.30)

ಬೆಂಗಾಲ್ ವಾರಿಯರ್ಸ್– ಯು ಮುಂಬಾ (ರಾತ್ರಿ 9.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.