ಬೆಂಗಳೂರು: ಅನುಭವಿ ಆಟಗಾರ್ತಿ ಮತ್ತು ಮಾಜಿ ನಾಯಕಿ ರಾಣಿ ರಾಂಪಾಲ್ ಅವರನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿರುವ ಸಂಭವನೀಯರ ತಂಡಕ್ಕೆ ಆಯ್ಕೆ ಮಾಡಿಲ್ಲ.

ಚೀನಾದ ಹ್ಯಾಂಗ್ಝೌನಲ್ಲಿ ಸೆ. 23ರಿಂದ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಭಾರತ ಮಹಿಳೆಯರ ಹಾಕಿ ತಂಡದ ಆಯ್ಕೆ ಶಿಬಿರದಲ್ಲಿ 34 ಮಂದಿ ಪಾಲ್ಗೊಳ್ಳಲಿದ್ದಾರೆ.

ಭಾರತ ತಂಡದ ಮಾಜಿ ನಾಯಕಿಯೂ ಆಗಿರುವ ರಾಣಿ, ಈಚೆಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಯಾನೆಕ್ ಶೋಪ್ಮನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಉತ್ತಮ ಪ್ರದರ್ಶನದ ಹೊರತಾಗಿಯೂ ಎರಡು ವರ್ಷಗಳಿಂದ ತನ್ನನ್ನು ರಾಷ್ಟ್ರೀಯ ತಂಡಕ್ಕೆ ಯಾಕೆ ನಿರ್ಲಕ್ಷಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.

ಈ ಮಧ್ಯೆ ಪ್ರತಿಕ್ರಿಯಿಸಿರುವ ಶೋಪ್ಮನ್, ‘ನಾವು ಇತ್ತೀಚಿನ ಸ್ಪರ್ಧೆಗಳಲ್ಲಿ ತಂಡವಾಗಿ ಬೆಳೆಯುತ್ತಿದ್ದೇವೆ ಮತ್ತು ನಿರಂತರವಾಗಿ ಕಲಿಯುತ್ತಿದ್ದೇವೆ. ಏಷ್ಯನ್ ಗೇಮ್ಸ್ಗೆ ತಯಾರಿಯ ನಿಟ್ಟಿನಲ್ಲಿ ಮುಂಬರುವ ಶಿಬಿರ ಮಹತ್ವವದ್ದಾಗಿದೆ. ಅಲ್ಲದೆ, 2024ರ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಸ್ಥಾನ ಪಡೆಯುವಲ್ಲಿಯೂ ಈ ಟೂರ್ನಿ ನಮಗೆ ಪ್ರಮುಖವಾದುದು. ಶಿಬಿರದಲ್ಲಿ ಆಟಗಾರರು ಸುಧಾರಿಸಬೇಕಾದ ಕ್ಷೇತ್ರಗಳ ಬಗ್ಗೆ ಆದ್ಯತೆ ನೀಡಲಾಗುತ್ತದೆ’ ಎಂದಿದ್ದಾರೆ.

ರಾಷ್ಟ್ರೀಯ ಶಿಬಿರವು ಭಾನುವಾರದಿಂದ ಸೆ. 18ರವರೆಗೆ ನಡೆಯಲಿದೆ. ಸೆ.27ರಂದು ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅಭಿಯಾನ ಆರಂಭಿಸಲಿದೆ. ‘ಎ’ ಗುಂಪಿನಲ್ಲಿರುವ ಭಾರತವು ಕೊರಿಯಾ, ಮಲೇಷ್ಯಾ, ಹಾಂಗ್ಕಾಂಗ್, ಚೀನಾ, ಸಿಂಗಪುರ ವಿರುದ್ಧ ಆಡಲಿದೆ.

ಭಾರತದ ತಂಡವು ಈಚೆಗೆ ಸ್ಪ್ಯಾನಿಷ್ ಹಾಕಿ ಫೆಡರೇಷನ್ನ 100ನೇ ವರ್ಷದ ಅಂಗವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಹಾಕಿ ಟೂರ್ನಿಯನ್ನು ಗೆದ್ದು, ಆತ್ಮವಿಶ್ವಾಸದಲ್ಲಿದೆ.

ಸಂಭವನೀಯರ ಪಟ್ಟಿ:

ಗೋಲ್ಕೀಪರ್ಸ್: ಸವಿತಾ ಪೂನಿಯಾ, ರಜನಿ ಎತಿಮಾರ್ಪು, ಬಿಚು ದೇವಿ ಖರಿಬಮ್, ಬನ್ಸಾರಿ ಸೋಲಂಕಿ

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ ಅಬಾಸೊ ಧೇಕಲೆ, ಜ್ಯೋತಿ ಚೆಟ್ರಿ, ಮಹಿಮಾ ಚೌಧರಿ

ಮಿಡ್ಫೀಲ್ಡರ್ಸ್: ನಿಶಾ, ಸಲೀಮಾ ಟೆಟೆ, ಸುಶೀಲಾ ಚಾನು ಪುಖ್ರಂಬಾಮ್, ಜ್ಯೋತಿ, ನವಜ್ಯೋತ್ ಕೌರ್, ಮೋನಿಕಾ, ಮರಿಯಾನಾ ಕುಜೂರ್, ಸೋನಿಕಾ, ನೇಹಾ, ಬಲಜೀತ್ ಕೌರ್, ರೀನಾ ಖೋಖರ್, ವೈಷ್ಣವಿ ಫಾಲ್ಕೆ, ಅಜ್ಮಿನಾ ಕುಜೂರ್

ಫಾರ್ವರ್ಡ್ಸ್: ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಜ್ ಖಾನ್, ಸುನೆಲಿಟಾ ಟೊಪ್ಪೊ, ಬ್ಯೂಟಿ ಡಂಗ್ಡಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.