ನವದೆಹಲಿ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಭಾರತದ ಶಿವ ಥಾಪಾ ಅವರು ಏಷ್ಯನ್ ಎಲೀಟ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿದರು.

ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ 63.5 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಶಿವ, ಪ್ರೀಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಶುಕ್ರವಾರ 3–2ರಿಂದ ಮಂಗೋಲಿಯಾದ ಬ್ಯಾಂಬಾತ್ಸೊಗ್ ತುಗುಲ್ದೂರ್ ಅವರನ್ನು ಮಣಿಸಿದರು.

ಐದು ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತ ಶಿವ ಮತ್ತುಬ್ಯಾಂಬಾತ್ಸೊಗ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಇಬ್ಬರೂ ಪರಸ್ಪರ ಪ್ರಬಲ ಪಂಚ್‌ಗಳನ್ನು ಮಾಡಿದರು. ಅಂತಿಮವಾಗಿ ಭಾರತದ ಬಾಕ್ಸರ್ ತಮ್ಮ ಅನುಭವ ಮತ್ತು ಚುರುಕಿನ ನಡೆಗಳ ಮೂಲಕ ಗೆಲುವು ಒಲಿಸಿಕೊಂಡರು.

ಶಿವ ಅವರು ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ, ಹೈದರ್ ಅಲಾಸಲಿ ಮತ್ತು ಮಿನ್ಸು ಚೊಯಿ ನಡುವಣ ಪಂದ್ಯದ ವಿಜೇತರನ್ನು ಎದುರಿಸುವರು.

ಶನಿವಾರ ನಡೆಯುವ ಮಹಿಳೆಯರ ಕ್ವಾರ್ಟರ್‌ಫೈನಲ್ ಬೌಟ್‌ಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಬೊರ್ಗೊಹೈನ್ (75 ಕೆಜಿ ವಿಭಾಗ) ಸೇರಿದಂತೆ ಭಾರತದ ಏಳು ಮಂದಿ ಕಣಕ್ಕಿಳಿಯಲಿದ್ದಾರೆ. ಮೀನಾಕ್ಷಿ (52 ಕೆಜಿ), ಸಾಕ್ಷಿ (54 ಕೆಜಿ), ಪ್ರೀತಿ (57 ಕೆಜಿ), ಪರ್ವೀನ್ (63 ಕೆಜಿ), ಅಂಕುಷಿತಾ (66 ಕೆಜಿ) ಮತ್ತು ಪೂಜಾ (70 ಕೆಜಿ) ಅವರು ಎಂಟರಘಟ್ಟದಲ್ಲಿ ಆಡಲಿರುವ ಇನ್ನುಳಿದ ಬಾಕ್ಸರ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.