ಯುಫಾ, ರಷ್ಯಾ: ಎದುರಾಳಿಗಳನ್ನು ಸುಲಭವಾಗಿ ಮಣಿಸಿದ ಭಾರತದ ಮಹಿಳಾ ಕುಸ್ತಿಪಟುಗಳಾದ ಸಿಮ್ರನ್ ಮತ್ತು ಬಿಪಾಶಾ ಅವರು ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಸಿಮ್ರನ್ 18–8ರಿಂದ ಅಜರ್‌ಬೈಜಾನ್‌ನ ಗುಲ್ತಕಿನ್ ಶಿರಿನೊವಾ ಅವರನ್ನು ಪರಾಭಗೊಳಿಸಿದರು. ಇದಕ್ಕೂ ಮೊದಲು ಅವರು ರುಮೇನಿಯಾದ ಜಾರ್ಜಿಯಾನಾ ಲಾವಿನಿಯಾ ಅಂಟುಕಾ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಸಾಧಿಸಿದ್ದರು.

76 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಿಪಾಶಾ ಎಂಟರಘಟ್ಟದ ಹಣಾಹಣಿಯಲ್ಲಿ 6–3ರಿಂದ ಕಜಕಸ್ತಾನದ ದಿಲ್‌ನಾಜ್ ಮುಲ್ಕಿನೊವಾ ಎದುರು ಗೆದ್ದರು.

ಭಾರತದ ಇನ್ನುಳಿದ ಮಹಿಳಾ ಕುಸ್ತಿಪಟುಗಳಾದ ಸೀತೊ (55 ಕೆಜಿ), ಕುಸುಮ್ (59 ಕೆಜಿ), ಅರ್ಜು (68 ಕೆಜಿ) ಕ್ವಾರ್ಟರ್‌ಫೈನಲ್ ಬೌಟ್‌ಗಳಲ್ಲಿ ಎಡವಿದರು.

ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಯಶ್ (74 ಕೆಜಿ) ಅವರು 9–2ರಿಂದ ಅರ್ಮೆನಿಯಾದ ಅರ್ಮೆನ್ ಮುಸಿಕಿಯಾನ್ ಅವರನ್ನು ಸೋಲಿಸಿ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದರು. ಪೃಥ್ವಿರಾಜ್ ಪಾಟೀಲ್ (92 ಕೆಜಿ) ಹಾಗೂ ಅನಿರುದ್ಧ ಕೂಡ ಕಂಚಿನ ಪದಕದ ಸುತ್ತಿಗೆ ಲಗ್ಗೆಯಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.