ಮೊಂಟ್ಮೆಲೊ, ಸ್ಪೇನ್: ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದವಾಲ್ಟೇರಿ ಬೊತಾಸ್ ಅವರು ಸ್ಪ್ಯಾನಿಷ್ ಗ್ರ್ಯಾನ್ ಪ್ರಿಫಾರ್ಮುಲಾ ವನ್ನ ಮೊದಲ ಸುತ್ತಿನ ಅಭ್ಯಾಸದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.

ಶುಕ್ರವಾರ ನಡೆದ ತಾಲೀಮಿನಲ್ಲಿ ಫಿನ್ಲೆಂಡ್ನ ಬೊತಾಸ್ ಅವರು ತಮ್ಮದೇ ಮರ್ಸಿಡಿಸ್ ತಂಡದ ಹ್ಯಾಮಿಲ್ಟನ್ ಅವರಿಗಿಂತ .039 ಸೆಕೆಂಡುಗಳ ಅಂತರದಲ್ಲಿ ಗುರಿ ಸೇರಿದರು. ಮೂರನೇ ಸ್ಥಾನ ಗಳಿಸಿದ ರೆಡ್ ಬುಲ್ ರೇಸಿಂಗ್ ಹೋಂಡಾದ ಮ್ಯಾಕ್ಸ್ ವರ್ಸ್ಟ್ಯಾಪನ್ ಅವರು ಬೊತಾಸ್ ಅವರಿಗಿಂತ ಒಂದು ಸೆಕೆಂಡ್ ಹಿಂದುಳಿದರು. ಸಿಲ್ವರ್ಸ್ಟೋನ್ನಲ್ಲಿ ನಡೆದಿದ್ದ ರೇಸ್ನಲ್ಲಿವರ್ಸ್ಟ್ಯಾಪನ್ ಅವರು ಬೊತಾಸ್ ಅವರನ್ನು ಹಿಂದಿಕ್ಕಿ ಚಾಂಪಿಯನ್ ಆಗಿದ್ದರು.

ಫರಾರಿ ತಂಡದ ಚಾರ್ಲ್ಸ್ ಲೆಕ್ಲೆರ್ಕ್ ನಾಲ್ಕನೇ ಸ್ಥಾನ ಗಳಿಸಿದರೆ, ಅದೇ ತಂಡದ ಸೆಬಾಸ್ಟಿಯನ್ ವೆಟಲ್ ಐದನೇ ಸ್ಥಾನ ತಮ್ಮದಾಗಿಸಿಕೊಂಡರು.

ಕೋವಿಡ್–19ರಿಂದ ಗುಣಮುಖರಾಗಿ ಕಣಕ್ಕಿಳಿದಿದ್ದ ರೇಸಿಂಗ್ ಪಾಯಿಂಟ್ನ ಸೆರ್ಜಿಯೊ ಪೆರೇಜ್ ಏಳನೇ ಸ್ಥಾನ ಗಳಿಸಿದರು. ಇಂಗ್ಲೆಂಡ್ನ ಸಿಲ್ವರ್ಸ್ಟೋನ್ನಲ್ಲಿ ನಡೆದಿದ್ದ ಎರಡೂ ರೇಸ್ಗಳಲ್ಲಿ ಸೆರ್ಜಿಯೊ ಭಾಗವಹಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.