ಟೋಕಿಯೊ: ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ಅಮೆರಿಕದ ಸಿಮೋನ್ ಬೈಲ್ಸ್ಗೆ ಕ್ರೀಡಾಜಗತ್ತು ಬೆಂಬಲ ಸೂಚಿಸಿದೆ.

ಸಾಮಾಜಿಕ ತಾಣಗಳಲ್ಲಿ ಸಂದೇಶಗಳ ಹೊಳೆ ಹರಿದಿದ್ದು ಕ್ರೀಡಾಪಟುವಿಗೆ ಮಾನಸಿಕ ಆರೋಗ್ಯ ಎಷ್ಟು ಅಗತ್ಯ ಎಂಬುದರ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಕೋವಿಡ್ನಿಂದಾಗಿ ಉಂಟಾಗಿರುವ ವಿಷಯ ಸ್ಥಿತಿಯಲ್ಲಿ ಇದು ಹೆಚ್ಚು ಮಹತ್ವ ಪಡೆದುಕೊಂಡಿದೆ.

24 ವರ್ಷದ ‘ಸೂಪರ್ ಸ್ಟಾರ್’ ಒಲಿಂಪಿಕ್ಸ್ ಸ್ಪರ್ಧೆಗಳಿಂದ ದೂರ ಉಳಿಯಲುಮಂಗಳವಾರ ಏಕಾಏಕಿ ನಿರ್ಧರಿಸಿದ್ದರು. ಆದರೆ ಇದಕ್ಕೆ ಕಾರಣ ತಿಳಿಸಿರಲಿಲ್ಲ. ಬುಧವಾರ, ತಮ್ಮ ನಿರ್ಧಾರಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಇದು ತಿಳಿಯುತ್ತಿದ್ದಂತೆ ತಂಡದ ಸಹ ಕ್ರೀಡಾಪಟುಗಳು, ನಿವೃತ್ತ ಕ್ರೀಡಾಪಟುಗಳು ಮತ್ತು ಒಲಿಂಪಿಯನ್ನರು ಬೆಂಬಲದ ಮಾತುಗಳನ್ನಾಡಿದ್ದಾರೆ.

‘ಅವರ ನಿರ್ಧಾರ ಮೊದಲು ಆಘಾತ ತಂದಿತ್ತು. ಆದರೆ ವಿಷಯ ತಿಳಿದ ನಂತರ ಅದು ಸರಿಯಾದ ತೀರ್ಮಾನ ಎಂದೆನಿಸಿತು. ಕಳೆದ 18 ತಿಂಗಳಿಂದ ಜನರು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಮಾತನಾಡಲು ತೊಡಗಿದ್ದಾರೆ’ ಎಂದು ಅಮೆರಿಕದ ದಾಖಲೆವೀರ ಈಜುಪಟು ಮೈಕೆಲ್ ಫೆಲ್ಪ್ಸ್ ಹೇಳಿದ್ದಾರೆ. ಮಾನಸಿಕ ‘ಆರೋಗ್ಯಕ್ಕೆ ಸಂಬಂಧಿಸಿ ಸಹೋದರಿಯಿಂದ ನೆರವು ಪಡೆದುಕೊಳ್ಳುತ್ತಿದ್ದೆ’ ಎಂದು ಅಮೆರಿಕದ ಈಜುಪಟು ಎರಿಕಾ ಸುಲಿವಾನ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ರೋವಿಂಗ್ ಪಟು ಸ್ಯಾಲಿ ರಾಬಿನ್ಸನ್, ಅಮೆರಿಕದ ಈಜುಪಟು ಕ್ಯಾಟಿ ಲಡೆಕಿ, ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದಿರುವ ಸೆಬಾಸ್ಟಿಯನ್ ಕೂ ಮುಂತಾದವರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಿಂದೆ ಸರಿದ ಕೆನಡಾ ಜಿಮ್ನಾಸ್ಟ್

ಈ ನಡುವೆ ಕೆನಡಾದ ಎಲಿ ಬ್ಲ್ಯಾಕ್ ಕೂಡ ಒಲಿಂಪಿಕ್ಸ್ನಿಂದ ಹಿಂದೆ ಸರಿದಿದ್ದಾರೆ. ಸೂಕ್ತ ಕಾರಣ ತಿಳಿಸಲಿಲ್ಲ. ಮೂರನೇ ಬಾರಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು ಅರ್ಹತಾ ಸುತ್ತಿನಲ್ಲಿ 24ನೇ ಸ್ಥಾನ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.