ರಾಯ್ಪುರ: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಗೆಲುವಿನ ಹಳಿಗೆ ಮರಳಿದ್ದಾರೆ. ಬುಧವಾರ ಇಲ್ಲಿ ನಡೆದ ಬೌಟ್ನಲ್ಲಿ ಅವರು ಘಾನಾದ ಎಲಿಯಾಸು ಸುಲ್ಲಿ ಅವರಿಗೆ ಸೋಲಿನ ಪಂಚ್ ನೀಡಿದರು.

ಬಾಕ್ಸಿಂಗ್ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಶ್ರೇಯ ಪಡೆದಿರುವ ವಿಜೇಂದರ್, ಆರು ಸುತ್ತುಗಳನ್ನು ಹೊಂದಿದ್ದ ಸ್ಪರ್ಧೆಯ ಎರಡನೇ ಸುತ್ತಿನಲ್ಲೇ ಜಯದ ಸಿಹಿ ಸವಿದರು.

2008ರ ಬೀಜಿಂಗ್ ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತದ ಬಾಕ್ಸರ್ ಐದು ನಿಮಿಷ ಏಳು ಸೆಕೆಂಡುಗಳಲ್ಲಿ ಎದುರಾಳಿಯನ್ನು ಸೋಲಿಸಿದರು. ಇದು ಅವರಿಗೆ ವೃತ್ತಿಪರ ಬಾಕ್ಸಿಂಗ್ನಲ್ಲಿ 13ನೇ ಜಯ. ಕಳೆದ ವರ್ಷ ಮಾರ್ಚ್ನಲ್ಲಿ ನಡೆದಿದ್ದ ಬೌಟ್ನಲ್ಲಿ ರಷ್ಯಾದ ಆರ್ಟಿಶ್ ಲೊಪ್ಸನ್ ಎದುರು ಸೋತಿದ್ದರು. ಅದೊಂದೇ ಅವರು ಸೋತಿರುವ ಬೌಟ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.