ಪ್ಯಾರಿಸ್: ನಿಗದಿತ ಮಿತಿಗಿಂತ 100 ಗ್ರಾಂನಷ್ಟು ತೂಕ ಹೆಚ್ಚಿದ್ದರಿಂದ ಮಹಿಳೆಯರ 50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಆಡುವ ಅವಕಾಶದಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ವಂಚಿತರಾಗಿದ್ದರು.

ಇದರೊಂದಿಗೆ ಭಾರತಕ್ಕೆ ಪದಕ ನಷ್ಟವಾಗಿತ್ತು. ಇದರ ಬೆನ್ನಲ್ಲೇ ಕ್ರೀಡಾ ನ್ಯಾಯಮಂಡಳಿಗೆ (ಸಿಎಎಸ್) ವಿನೇಶ್ ಮೇಲ್ಮನವಿ ಸಲ್ಲಿಸಿದ್ದು, ತೀರ್ಪು ಇನ್ನಷ್ಟೇ ಬರಬೇಕಿದೆ.

ಆದರೆ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಕೇವಲ ವಿನೇಶ್ ಮಾತ್ರವಲ್ಲದೆ ಇಟಲಿಯ ಇಮ್ಯಾನುಯೆಲಾ ಲಿಯುಜಿ ಕೂಡ ಅನರ್ಹಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ತೂಕ ಹೆಚ್ಚಿದ್ದರಿಂದ ಲಿಯುಜಿ ಅವರಿಗೆ ಪ್ರಾಥಮಿಕ ಬೌಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯಡಬ್ಲ್ಯು)ನಿಯಮದ ಪ್ರಕಾರ ಸ್ಪರ್ಧೆಯ ದಿನ ಬೆಳಿಗ್ಗೆ ತೂಕ ಪರೀಕ್ಷೆ ನಡೆಸಲಾಗುತ್ತದೆ. ಕುಸ್ತಿಪಟು ತೂಕ ಮಾಪನಕ್ಕೆ ಹಾಜರಾಗದಿದ್ದರೆ ಸ್ಪರ್ಧೆಯಿಂದ ಹೊರಹಾಕಲಾಗುತ್ತದೆ. ಅಲ್ಲದೆ ಕೊನೆಯ ಸ್ಥಾನ ನೀಡಲಾಗುತ್ತದೆ.

ತೂಕ ಇಳಿಸುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯಬೇಕು. ವಿನೇಶ್ ತಮ್ಮ ತೂಕ ಇಳಿಸಲು ಸಕಲ ಪ್ರಯತ್ನಗಳನ್ನು ಮಾಡಿದ್ದರು ಎಂದು ತಿಳಿದು ಬಂದಿದೆ.

ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಆಹ್ವಾನಿತ ಟೂರ್ನಿಗಳಲ್ಲಿ 2 ಕೆ.ಜಿವರೆಗೂ ರಿಯಾಯಿತಿ ನೀಡಲಾಗುತ್ತದೆ. ಆದರೆ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿದ್ದು, ಯಾವುದೇ ರಿಯಾಯಿತಿ ಇರುವುದಿಲ್ಲ.

ನಿಯಮಿತ ತೂಕ ಕಾಯ್ದುಕೊಳ್ಳಲು ಕ್ರೀಡಾಪಟುಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇದು ಅತ್ಯಂತ ಕಠಿಣ ಪ್ರಕ್ರಿಯೆ ಆಗಿದೆ. ವಿನೇಶ್ ಅವರ ದೇಹದ ಸಹಜ ತೂಕ 56ರಿಂದ 57 ಕೆ.ಜಿ ಆಗಿದೆ. ಆದರೂ ಬೌಟ್‌ನಲ್ಲಿ ಉಳಿಯಲು 50 ಕೆ.ಜಿಯ ನಿಗದಿ ಕಾಪಾಡಿಕೊಳ್ಳುವುದು ಅನಿವಾರ್ಯವೆನಿಸಿತ್ತು.

ತೂಕದ ಮಿತಿ ಕಾಯ್ದುಕೊಳ್ಳಲು ಎರಡು ದಿನಗಳವರೆಗೆ ಆಹಾರ ಅಥವಾ ನೀರನ್ನು ಸೇವಿಸಿರಲಿಲ್ಲ ಎಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋಲಿನ ಬಳಿಕ ಬಾಕ್ಸರ್ ನಿಕತ್ ಜರೀನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.