ಫಿಟ್ನೆಸ್ ಸಮಸ್ಯೆಯಿಂದಾಗಿ ಸೆರೆನಾ ವಿಲಿಯಮ್ಸ್ ದೂರ ಸರಿದಾಗ ಮತ್ತು ಮೂರನೇ ಸುತ್ತಿನಲ್ಲಿ ನವೊಮಿ ಒಸಾಕ ಹಾಗೂ ಆ್ಯಶ್ಲಿ ಬಾರ್ಟಿ ಹೊರಬಿದ್ದಾಗ ಈ ಬಾರಿಯ ಟೂರ್ನಿ ಮೇಲೆ ಟೆನಿಸ್ ಪ್ರಿಯರು ಅಸಕ್ತಿಯನ್ನೇ ಕಳೆದುಕೊಂಡಿದ್ದರು. ಆದರೆ ಯುವ ತಾರೆಯರಾದ ಎಮಾ ರಡುಕಾನು ಮತ್ತು ಲೆಯ್ಲಾ ಫರ್ನಾಂಡಸ್ ಆರಂಭದಿಂದಲೇ ಗಮನಾರ್ಹ ಆಟವಾಡುತ್ತ ಅಮೆರಿಕ ಓಪನ್ ಟೆನಿಸ್ ಟೂರ್ನಿಗೆಬಣ್ಣ ತುಂಬಿದರು.

2002ರಲ್ಲಿ ಎರಡು ತಿಂಗಳ ಅಂತರದಲ್ಲಿ ಜನಿಸಿದ ಲೆಯ್ಲಾ ಮತ್ತು ಎಮಾ ಮಹಿಳಾ ಸಿಂಗಲ್ಸ್ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದರು. ಫೈನಲ್ ಪಂದ್ಯ ವೀಕ್ಷಿಸಲು ಆರ್ಥರ್ ಆ್ಯಶೆ ಕ್ರೀಡಾಂಗಣದಲ್ಲಿ 23,000 ಪ್ರೇಕ್ಷಕರು ತುಂಬಿದ್ದರು. ಅದಕ್ಕಿಂತ ಎಷ್ಟೋ ಪಟ್ಟು ಕ್ರೀಡಾಪ್ರಿಯರು ಯುವ ಆಟಗಾರ್ತಿಯರ ಹಣಾಹಣಿಯಲ್ಲಿ ಜಯಿಸುವವರು ಯಾರು ಎಂಬ ಕುತೂಹಲದಿಂದ ಜಗತ್ತಿನಾದ್ಯಂತ ಪಂದ್ಯ ವೀಕ್ಷಿಸುತ್ತಿದ್ದರು.

ಈ ತಿಂಗಳಲ್ಲಿ 40ನೇ ವಯಸ್ಸಿಗೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್ ಎರಡು ದಶಕಗಳಿಂದ ಅಮೆರಿಕ ಓಪನ್ ಟೂರ್ನಿಯಲ್ಲಿ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರು ಕಣಕ್ಕೆ ಇಳಿಯುವುದಿಲ್ಲ ಎಂದು ಘೋಷಿಸಿದಾಗ ಪ್ರೇಕ್ಷಕರು ನಿರಾಸೆಗೆ ಒಳಗಾಗಿದ್ದರು.

ಆದರೆ ಎರಡು ಬಾರಿ ಅಮೆರಿಕ ಓಪನ್ ಚಾಂಪಿಯನ್ ಆಗಿದ್ದ ನವೊಮಿ ಒಸಾಕ ಅವರನ್ನು ಲೆಯ್ಲಾ ಮೂರನೇ ಸುತ್ತಿನಲ್ಲಿ ಮಣಿಸಿದ್ದರು. 2019ರ ಅಮೆರಿಕ ಓಪನ್ ಚಾಂಪಿಯನ್ ಬಿಯಾಂಕ ಆ್ಯಂಡ್ರುಸ್ಕು ಮತ್ತು 2020ರ ಫ್ರೆಂಚ್ ಓಪನ್ ವಿಜೇತೆ ಇಗಾ ಸ್ವಾಟೆಕ್ ಅವರು ಚಾಂಪಿಯನ್ ಪಟ್ಟಕ್ಕೇರುವಾಗ ಅವರಿಗೆ 19 ವರ್ಷ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.