ಟುರಿನ್, ಇಟಲಿ: ಸರ್ಬಿಯಾದ ನೊವಾಕ್ ಜೊಕೊವಿಚ್ ದಾಖಲೆಯ ಆರನೇ ಬಾರಿ ಎಟಪಿ ಫೈನಲ್ಸ್ ಟೆನಿಸ್ ಟೂರ್ನಿಯ ಕಿರೀಟ ಧರಿಸಿದರು. ಇದರೊಂದಿಗೆ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರ ಸಾಧನೆ ಸರಿಗಟ್ಟಿದರು.

ಭಾನುವಾರ ರಾತ್ರಿ ಇಲ್ಲಿ ನಡೆದ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಅವರು7-5, 6-3ರಿಂದ ನಾರ್ವೆಯ ಕಾಸ್ಪರ್ ರೂಡ್ ಅವರನ್ನು ಪರಾಭವಗೊಳಿಸಿದರು.

ಏಳು ವರ್ಷಗಳ ಬಳಿಕ ಎಟಿಪಿ ಫೈನಲ್ಸ್ ಕಿರೀಟ, 35 ವರ್ಷದ ಜೊಕೊವಿಚ್ ಅವರಿಗೆ ಒಲಿದಿದೆ. 2015ರಲ್ಲಿ ಕೊನೆಯ ಬಾರಿ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಈ ಪ್ರತಿಷ್ಠಿತ ಟ್ರೋಫಿ ಗೆದ್ದ ಅತಿ ಹಿರಿಯ ಎಂಬ ಶ್ರೇಯವೂ ಅವರದಾಗಿದೆ. ಅಲ್ಲದೆ ಹೊಸ ಮಾದರಿಯಲ್ಲಿ, ಸೋಲಿಲ್ಲದೆ ಚಾಂಪಿಯನ್ (ಅನ್‌ಡಿಫೀಟೆಡ್) ಆಗುವ ಆಟಗಾರನಿಗೆ ನೀಡುವ ₹ 38 ಕೋಟಿ ಬಹುಮಾನವನ್ನು ಜೇಬಿಗಿಳಿಸಿದರು.

ರಾಜೀವ್– ಸ್ಯಾಲಿಸ್ಬರಿಗೆ ಪ್ರಶಸ್ತಿ: ಡಬಲ್ಸ್ ವಿಭಾಗದಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್‌ನ ಜೊ ಸ್ಯಾಲಿಸ್ಬರಿ ಜೋಡಿ ಪ್ರಶಸ್ತಿ ಜಯಿಸಿತು. ಈ ಆಟಗಾರರ ಬಹುಮಾನ ಮೊತ್ತವಾಗಿ

ಫೈನಲ್‌ನಲ್ಲಿ ರಾಮ್ ಮತ್ತಿ ಸ್ಯಾಲಿಸ್ಬರಿ 7–6, 6–4ರಿಂದ ಕ್ರೊವೇಷ್ಯಾದ ನಿಕೊಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಚ್ ಅವರನ್ನು ಮಣಿಸಿದರು.

ಇದನ್ನೂ ಓದಿ:ಫುಟ್ಬಾಲ್ ವಿಶ್ವಕಪ್: ಈಕ್ವೆಡಾರ್ ಶುಭಾರಂಭ, ಕತಾರ್ಗೆ ಸೋಲು

ಜೊಕೊವಿಚ್ ಎಟಿಪಿ ಫೈನಲ್ಸ್ ಗೆಲುವು:2008, 2012, 2013, 2014, 2015, 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.