ಬೆಂಗಳೂರು: ಮುಖ್ಯ ಸುತ್ತು ಪ್ರವೇಶಿಸುವ ಮೂಲಕ ಅರ್ಜುನ್ ಖಾಡೆ, ತವರಿನ ಟೆನಿಸ್ ಪ್ರಿಯರಿಗೆ ಮುದ ನೀಡಿದರೆ ಇಟಲಿಯ ಜಿಯಾನ್ ಮಾರ್ಕೊ ಮೊರೊನಿಗೆ ಮಣಿದ ಸಾಕೇತ್ ಮೈನೇನಿ ನಿರಾಶೆ ಮೂಡಿಸಿದರು.

ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳ ಮೊದಲ ದಿನ ಭಾರತದ ಭರವಸೆಯಾಗಿ ಸಾಕೇತ್ ಕಣಕ್ಕೆ ಇಳಿದಿದ್ದರು. ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಯಾನ್ಗೆ 1–6, 1–6ರಲ್ಲಿ ಮಣಿದರು.

ಆರಂಭದಿಂದಲೇ ತಪ್ಪುಗಳನ್ನು ಎಸಗಿದ ಸಾಕೇತ್ಗೆ ಜಿಯಾನಿ ಯಾವ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಸಾಕೇತ್ ಅವರ ದೌರ್ಬಲ್ಯದ ಸಂಪೂರ್ಣ ಲಾಭ ಪಡೆದುಕೊಂಡ ಅವರು ಸುಲಭವಾಗಿ ಪಂದ್ಯ ಗೆದ್ದುಕೊಂಡರು.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಅಲೆಕ್ಸಾಂಡರ್ ವುಕಿಚ್ ಮತ್ತು ನಾಲ್ಕನೇ ಶ್ರೇಯಾಂಕಿತ, ಫ್ರಾನ್ಸ್ ಆಟಗಾರ ಹ್ಯೂಗೊ ಗ್ರೀನಿಯರ್ ಅವರು ಪ್ರೀ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದರು.

ಅಲೆಕ್ಸಾಂಡರ್7-5, 6-4ರಲ್ಲಿ ತಮ್ಮದೇ ದೇಶದ ಜೇಸನ್ ಕುಬ್ಲೆರ್ ಎದುರು ಜಯ ಗಳಿಸಿದರೆ ಚೆಕ್ ಗಣರಾಜ್ಯದ ವೀಟ್ ಕೊಪ್ರಿವಾ ಎದುರು ಹ್ಯೂಗೊ 6-1, 2-6, 6-4ರಲ್ಲಿ ಗೆಲುವು ಸಾಧಿಸಿದರು.

ಅರ್ಜುನ್ ಮುಖ್ಯ ಸುತ್ತಿಗೆ

ಅರ್ಹತಾ ಸುತ್ತಿನ ಮೊದಲ ದಿನವಾದ ಭಾನುವಾರ ಅಮೋಘ ಜಯದೊಂದಿಗೆ ಮಿಂಚಿದ್ದ ಭಾರತದ ಅರ್ಜುನ್ ಖಾಡೆ ಸೋಮವಾರವೂ ಜಯ ಸಾಧಿಸಿ ಮುಖ್ಯ ಸುತ್ತು ಪ್ರವೇಶಿಸಿದರು. ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್ ಎದುರಿನ ಪಂದ್ಯದಲ್ಲಿ ಅವರು6-3, 6-4ರಲ್ಲಿ ಜಯ ಸಾಧಿಸಿದರು. ಆದರೆ ಭಾರತದ ಮುಕುಂದ್ ಶಶಿಕುಮಾರ್ ಕ್ರೊವೇಷಿಯಾದ ಬೋರ್ನ ಗೋಜೊಗೆ 3–6, 2–6ರಲ್ಲಿ ಮಣಿದರು.

ಮೊದಲ ಸುತ್ತಿನ ಫಲಿತಾಂಶಗಳು: ಇಟಲಿಯ ಜಿಯಾನ್ ಮಾರ್ಕೊ ಮೊರೊನಿಗೆ ಭಾರತದ ಸಾಕೇತ್ ಮೈನೇನಿ ಎದುರು 6-1, 6-1ರಲ್ಲಿ ಗೆಲುವು; ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ಗೆ ಆಸ್ಟ್ರೇಲಿಯಾದ ಹೇಸನ್ ಕುಬ್ಲೆರ್ ಎದುರು 7-5, 6-4ರಲ್ಲಿ ಜಯ; ಫ್ರಾನ್ಸ್ನ ಹ್ಯೂಗೊ ಗ್ರೀನಿಯರ್ಗೆ ಜೆಕ್ ಗಣರಾಜ್ಯದ ವೀಟ್ ಕೊಪ್ರಿವಾ ವಿರುದ್ಧ 6-1, 2-6, 6-4ರಲ್ಲಿ ಜಯ; ಚೀನಾ ತೈಪೆಯ ಚುನ್ ಶಿನ್ ಸೆಂಗ್ಗೆ ಬ್ರಿಟನ್ನ ಜೇ ಕ್ಲಾರ್ಕ್ ವಿರುದ್ಧ 6-3, 6-1ರಲ್ಲಿ ಗೆಲುವು; ಬೆಲ್ಜಿಯಂನ ಕಿಮ್ಮರ್ ಕೊಪೆಜನ್ಸ್ಗೆ ಆಸ್ಟ್ರೇಲಿಯಾದ ಮಾರ್ಕ್ ಪೋಲ್ಮನ್ಸ್ ಎದುರು 1-6, 6-2, 6-4ರಲ್ಲಿ ಜಯ.

ಅರ್ಹತಾ ಹಂತದ ಎರಡನೇ ಸುತ್ತು: ಬ್ರೆಜಿಲ್ನ ಗ್ಯಾಬ್ರಿಯಲ್ ಡಿಕಾಂಪ್ಸ್ಗೆ ಪೋರ್ಚುಗಲ್ನ ಫ್ರೆಡೆರಿಕೊ ಸಿಲ್ವಾ ವಿರುದ್ಧ 7-5, 6-4ರಲ್ಲಿ, ಸ್ವಿಟ್ಜರ್ಲೆಂಡ್ನ ಆ್ಯಂಟೊನಿ ಬಿಲಿಯೆರ್ಗೆ ಕೆನಡಾದ ಸ್ಟೀವನ್ ಡೀಜ್ ವಿರುದ್ಧ 6-1, 6-3ರಲ್ಲಿ, ಕ್ರೊವೇಷಿಯಾದ ಬೋರ್ನಾ ಗೋಜೊಗೆ ಭಾರತದ ಮುಕುಂದ್ ಶಶಿಕುಮಾರ್ ವಿರುದ್ಧ 6-3, 6-2ರಲ್ಲಿ, ಜಪಾನ್ನ ರಿಯೊ ನೊಗುಚಿಗೆ ಇಟಲಿಯ ರೌಲ್ ಬ್ರಂಕಾಸಿಯೊ ಎದುರು 5-7, 7-6 (7), 7-5ರಲ್ಲಿ, ಟುನೀಷಿಯಾದ ಮಲೆಕ್ ಜಜಿರಿಗೆ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹ್ಯಾರಿಸ್ ಎದುರು 6-4, 6-4ರಲ್ಲಿ, ಭಾರತದ ಅರ್ಜುನ್ ಖಾಡೆಗೆ ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್ ವಿರುದ್ಧ 6-3, 6-4ರಲ್ಲಿ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.