ಅಡಿಲೇಡ್: ಭಾರತದ ರೋಹನ್ ಬೋಪಣ್ಣ ಹಾಗೂ ರಾಮ್ಕುಮಾರ್ ರಾಮನಾಥನ್ ಜೋಡಿ, ಅಡಿಲೇಡ್ ಇಂಟರ್ನ್ಯಾಷನಲ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ಸೆಂಟರ್ ಕೋರ್ಟ್ನಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್ ಮುಖಾಮುಖಿಯಲ್ಲಿ ಬೋಪಣ್ಣ-ರಾಮ್ಕುಮಾರ್ ಜೋಡಿ, ಅಗ್ರಶ್ರೇಯಾಂಕದ ಕ್ರೊವೇಷ್ಯಾದ ಇವಾನ್ ದೊಡಿಗ್ ಹಾಗೂ ಬ್ರೆಜಿಲ್ನ ಮಾರ್ಸೆಲೊ ಮೆಲೊ ಜೋಡಿ ವಿರುದ್ಧ 7-6, 6-1ರ ನೇರ ಅಂತರದಲ್ಲಿ ಗೆಲುವು ದಾಖಲಿಸಿದರು.

ಇದನ್ನೂ ಓದಿ:ಲಸಿಕೆ ಹಾಕಿಸಿಕೊಳ್ಳದೇ ಆಡಲು ಬಂದಿದ್ದ ಜೊಕೊವಿಚ್ಗೆ ಸೋಂಕು ಇತ್ತು

ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದ ಭಾರತೀಯ ಜೋಡಿಗೆ ಮೊದಲ ಸೆಟ್ನಲ್ಲಿ ಕಠಿಣ ಸವಾಲು ಎದುರಾಗಿತ್ತು. ಆದರೆ 7-6ರ ಅಂತರದಲ್ಲಿ ಮೊದಲ ಸೆಟ್ ವಶಪಡಿಸಿಕೊಳ್ಳುವಲ್ಲಿಯಶಸ್ವಿಯಾದರು.

ಮುಂದೆನಿರ್ಣಾಯಕ ಸೆಟ್ನಲ್ಲಿ ಅಮೋಘ ಪ್ರದರ್ಶನಮುಂದುವರಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಮೊದಲು ಅಂತಿಮ ನಾಲ್ಕರ ಘಟ್ಟದಲ್ಲಿ ಭಾರತದ ಜೋಡಿ, ನಾಲ್ಕನೇ ಶ್ರೇಯಾಂಕಿತರಾದ ಬೋಸ್ನಿಯಾದ ತೊಮಿಸ್ಲಾವ್ ಬ್ರಕಿಕ್ ಮತ್ತು ಮೆಕ್ಸಿಕೊದ ಸ್ಯಾಂಟಿಯಾಗೊ ಗೊಂಜಾಲೆ ವಿರುದ್ಧ 6-2, 6-4ರ ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.