ನವದೆಹಲಿ: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿರುವ ರೋಹನ್ ಬೋಪಣ್ಣ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಕನ್ನಡಿಗ ರೋಹನ್ ಅವರನ್ನು ಅಭಿನಂದಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರೋಹನ್ ಸಾಧನೆಯನ್ನು ಕೊಂಡಾಡಿದ್ದಾರೆ.

'ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಪ್ರತಿಭಾವಂತ ರೋಹನ್ ಬೋಪಣ್ಣ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆಲುವಿಗಾಗಿ ಅವರಿಗೆ ಅಭಿನಂದನೆಗಳು. ಈ ಅಧ್ಬುತ ಪಯಣವು ಕಠಿಣ ಪರಿಶ್ರಮವನ್ನು ವ್ಯಾಖ್ಯಾನಿಸುತ್ತದೆ' ಎಂದು ಹೇಳಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ರೋಹನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ ಯುವ ಕ್ರೀಡಾಪಟುಗಳಿಗೆ ತಮ್ಮ ಸಯಮಕ್ಕಾಗಿ ಕಾಯುವಂತೆ ಸಲಹೆ ನೀಡಿದ್ದಾರೆ.

'43ರ ಹರೆಯದಲ್ಲೂ ಆಸ್ಟ್ರೇಲಿಯನ್ ಓಪನ್ನಂತಹ ದೊಡ್ಡ ವೇದಿಕೆಯಲ್ಲಿ ಬೋಪಣ್ಣ ಸಾಧನೆ ಮಾಡಿದ್ದಾರೆ. ನಿಮ್ಮ ಸಮಯ ಯಾವಾಗ ಬೇಕಾದರೂ ಬರಬಹುದು. ನಿರಂತರ ತರಬೇತಿಯನ್ನು ಮುಂದುವರಿಸಿ, ಕನಸು ಕಾಣುತ್ತೀರಿ' ಎಂದು ಹೇಳಿದ್ದಾರೆ.

ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಇಟಲಿಯ ಸಿಮೊನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಾಸೊರಿ ಅವರನ್ನು 7–6, 7–5ರಿಂದ ಮಣಿಸಿ ಕಿರೀಟಕ್ಕೆ ಮುತ್ತಿಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.