ವುಹಾನ್: ಅಮೆರಿಕದ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು ವುಹಾನ್ ಓಪನ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲೇ ಸೋತರು.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 39 ವರ್ಷ ವಯಸ್ಸಿನ ವೀನಸ್ 5–7, 6–7 ನೇರ ಸೆಟ್ಗಳಿಂದ ಅಮೆರಿಕದವರೇ ಆದ ಡೇನಿಯೆಲೆ ಕಾಲಿನ್ಸ್ ಎದುರು ಮಣಿದರು.

ವಿಶ್ವ ರ್ಯಾಂಕಿಂಗ್ನಲ್ಲಿ 59ನೇ ಸ್ಥಾನದಲ್ಲಿರುವ ವೀನಸ್, ಮೊದಲ ಸೆಟ್ನಲ್ಲಿ 5–3ರಿಂದ ಮುಂದಿದ್ದರು. ಈ ಹಂತದಲ್ಲಿ ಕಾಲಿನ್ಸ್ ಸತತ ಒಂಬತ್ತು ಗೇಮ್ಗಳನ್ನು ಗೆದ್ದರು.

ಎರಡನೇ ಸೆಟ್ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ವಿಶ್ವ ರ್ಯಾಂಕಿಂಗ್ನಲ್ಲಿ 35ನೇ ಸ್ಥಾನ ಹೊಂದಿರುವ ಕಾಲಿನ್ಸ್ ‘ಟೈ ಬ್ರೇಕರ್’ನಲ್ಲಿ ಪರಿಣಾಮಕಾರಿಯಾಗಿ ಆಡಿ ಸಂಭ್ರಮಿಸಿದರು.

ಇತರ ಪಂದ್ಯಗಳಲ್ಲಿ ಸ್ಲೋನ್ ಸ್ಟೀಫನ್ಸ್ 7–5, 6–4ರಲ್ಲಿ ಜಾಂಗ್ ಶೂಯಿ ಎದುರೂ, ಬಾರ್ಬರ ಸ್ಟ್ರೈಕೋವಾ 6–4, 6–2ರಲ್ಲಿ ಕ್ಸಿಯು ವಾಂಗ್ ಮೇಲೂ, ಆರ್ಯನಾ ಸಬಲೆಂಕಾ 6–1, 6–2ರಲ್ಲಿ ಅಲಿಯಾಕ್ಸಾಂಡ್ರ ಸಸನೊವಿಚ್ ವಿರುದ್ಧವೂ ಗೆದ್ದರು.

ಸೋಮವಾರ ನಡೆದ ಪಂದ್ಯಗಳಲ್ಲಿ ಮೋನಿಕಾ ಪುಯಿಗ್ 7–6, 5–7, 6–1ರಲ್ಲಿ ಏಂಜಲಿಕ್ ಕೆರ್ಬರ್ ಎದುರೂ, ಎಲಿಸೆ ಮರ್ಟೆನ್ಸ್ 6–4, 6–0ರಲ್ಲಿ ಕ್ಯಾಥರಿನಾ ಸಿನಿಯಾಕೊವಾ ಮೇಲೂ, ಅಮಂಡಾ ಅನಿಸಿಮೊವಾ 6–3, 3–6, 6–3ರಲ್ಲಿ ಸಮಂತಾ ಸೊಸುರ್ ವಿರುದ್ಧವೂ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.