ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ 50 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾರತದ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ನೂತನ ದಾಖಲೆ ಬರೆದಿದ್ದಾರೆ.

ಆ ಮೂಲಕ ವೆಸ್ಟ್ಇಂಡೀಸ್ನ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
.ICC Rankings: ಸಿರಾಜ್ಗೆ ನಂ.1 ಸ್ಥಾನ ನಷ್ಟ, ಅಗ್ರಸ್ಥಾನ ಕಾಪಾಡಿಕೊಂಡ ಗಿಲ್.ICC World Cup 2023: IND vs NZ- ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್ಗೆ ಲಗ್ಗೆ.
ಈ ಪೈಕಿ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ 27 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಇಲ್ಲೂ ಗೇಲ್ ದಾಖಲೆ ಮುರಿದಿರುವ ರೋಹಿತ್, ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ. 2015ರಲ್ಲಿ ಗೇಲ್ 26 ಸಿಕ್ಸರ್ಗಳನ್ನು ಗಳಿಸಿದ್ದರು.

ಏಕದಿನ ವಿಶ್ವಕಪ್ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ಬ್ಯಾಟರ್ಗಳ ಪಟ್ಟಿ:

ರೋಹಿತ್ ಶರ್ಮಾ - 50

ಕ್ರಿಸ್ ಗೇಲ್ - 49

ಗ್ಲೆನ್ ಮ್ಯಾಕ್ಸ್ವೆಲ್ - 43

ಎಬಿ ಡಿವಿಲಿಯರ್ಸ್ - 37

ಡೇವಿಡ್ ವಾರ್ನರ್ - 37

ಕೇವಲ 29 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್ ಇನಿಂಗ್ಸ್ನಲ್ಲಿ ತಲಾ ನಾಲ್ಕು ಸಿಕ್ಸರ್ ಹಾಗೂ ಬೌಂಡರಿಗಳು ಸೇರಿದ್ದವು. ಆದರೂ ಕೇವಲ ಮೂರು ರನ್ ಅಂತರದಿಂದ ಅರ್ಧಶತಕದಿಂದ ವಂಚಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.