ಬೆಂಗಳೂರು: ಬಜೆಟ್ಗೆ ವಿವಿಧ ಕ್ಷೇತ್ರಗಳ ಜನರ ಪ್ರತಿಕ್ರಿಯೆ.

* ಇದೊಂದು ಜನಪರ ಬಜೆಟ್. ಮಹಿಳೆಯರಿಗೂ ಆದ್ಯತೆ ಒದಗಿಸಿದ್ದಾರೆ. ಸಂಚಾರ ದಟ್ಟಣೆಯೂ ಸೇರಿದಂತೆ ನಗರದ ಪ್ರಮುಖ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿಯವರು ಅವುಗಳ ನಿವಾರಣೆಗೆ ದೂರಗಾಮಿ ಯೋಜನೆಗಳನ್ನು ಪ್ರಕಟಿಸಿದ್ದಾರೆ.

– ಗಂಗಾಂಬಿಕೆ, ಮೇಯರ್

* ಈ ಹಿಂದೆ ಪ್ರಕಟಿಸಿದ್ದ ಯೋಜನೆಗಳನ್ನೇ ಮುಖ್ಯಮಂತ್ರಿ ಮತ್ತೆ ಬಜೆಟ್ನಲ್ಲಿ ಸೇರಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಯೋಜನೆಗಳ ಅನುದಾನವೇ ಬಿಡುಗಡೆ ಆಗಿಲ್ಲ. ಮೊದಲು ಅದನ್ನು ಬಿಡುಗಡೆ ಮಾಡಲಿ

– ಪದ್ಮನಾಭ ರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

* ಇದೊಂದು ಚುನಾವಣಾ ಬಜೆಟ್. ಸಾರ್ವಜನಿಕ ಸಾರಿಗೆ ಬಲಪಡಿಸಲು, ಕಸ ನಿರ್ವಹಣೆಗೆ ಇನ್ನಷ್ಟು ಮಹತ್ವ ನೀಡಬೇಕಿತ್ತು. ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಜನ ವಿರೋಧಿಸಿದ್ದರೂ ಮತ್ತೆ ಅನುದಾನ ನೀಡಿದ್ದು ಸರಿಯಲ್ಲ

– ಡಿ.ಎಸ್.ರಾಜಶೇಖರ್, ಸಿಟಿಜನ್ಸ್ ಆಕ್ಷನ್ ಫೋರಂ

* ಚಲನಶೀಲ ಬೆಂಗಳೂರು ಯೋಜನೆ ಚೆನ್ನಾಗಿದೆ. ಅದಕ್ಕೆ ಪೂರಕವಾಗಿ ಬಿಎಂಟಿಸಿ ಬಸ್ಗಳ ಸಂಖ್ಯೆ ಹೆಚ್ಚಿಸುವುದಕ್ಕೂ ಅಧಿಕ ಅನುದಾನ ನೀಡಬೇಕಿತ್ತು. ಉಪನಗರ ರೈಲು ಯೋಜನೆಯ ಉಲ್ಲೇಖ ಮಾತ್ರವೇ, ಅನುಷ್ಠಾನಗೊಳ್ಳುತ್ತದೆಯೇ?

ಶ್ರೀನಿವಾಸ ಅಲವಿಲ್ಲಿ, ಸಿಟಿಜನ್ಸ್ ಫಾರ್ ಬೆಂಗಳೂರು

*‘ಮತ್ತೊಂದು ಕಾವೇರಿ’ ಯೋಜನೆ ಒಳ್ಳೆಯ ಹೆಜ್ಜೆ. ಕೊಳಚೆ ನೀರು ಮರುಬಳಕೆ ಸಾಧ್ಯವಾಗುವಂತೆ ಮಾಡಲು ಎರಡು ರೀತಿಯ ಕೊಳವೆ ಬಳಸುವುದೂ ಸ್ವಾಗತಾರ್ಹ. ಎಲಿವೇಟೆಡ್ ಕಾರಿಡಾರ್ನಿಂದ ಖಾಸಗಿ ವಾಹನ ಕೇಂದ್ರಿತ ಯೋಜನೆ

– ವಿ.ರವಿಚಂದರ್, ನಗರ ಯೋಜನಾ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.