ತಿರುವನಂತಪುರ: ಕೇರಳದಲ್ಲಿ ಗುರುವಾರ 84 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದು ದಿನವೊಂದರಲ್ಲಿ ಪತ್ತೆಯಾದ ಪ್ರಕರಣಗಳ ಈ ವರೆಗಿನ ದಾಖಲೆಯ ಸಂಖ್ಯೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೈರಸ್‌ನ ‘ಸಮುದಾಯ ಪ್ರಸರಣೆ’ಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

‘ಆರೋಗ್ಯದ ಮಾರ್ಗಸೂಚಿಗಳನ್ನು ಜನ ಅನುಸರಿಸದೇ ಹೋದರೆ ರಾಜ್ಯವು ಸಮುದಾಯ ಪ್ರಸರಣ ಹಂತಕ್ಕೆ ಜಾರುತ್ತದೆ. ಮತ್ತು ಈ ವರೆಗೆ ಸಾಧಿಸಿಕೊಂಡಿದ್ದನ್ನೆಲ್ಲ ರಾಜ್ಯ ಕಳೆದುಕೊಳ್ಳುವ ಅಪಾಯಗಳಿವೆ,’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ರಾಜ್ಯದಲ್ಲಿ ಇದುವರೆಗೆ ಸೋಂಕಿನ ಸಮುದಾಯ ಪ್ರಸರಣೆ ಕಂಡು ಬಂದಿಲ್ಲ. ಆದರೆ ಅದು ಎಂದಿಗೂ ಸಂಭವಿಸುವುದಿಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಸಂಬಂಧಿಸಿದಂತೆ ನಾವು ಐಸಿಎಂಆರ್ ನಿರ್ದೇಶನಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇವೆ. ಐಸಿಎಂಆರ್ ಪ್ರತಿಕಾಯ (ಆ್ಯಂಟಿ ಬಾಡಿ) ಪರೀಕ್ಷೆಗೆ ಸೂಚನೆ ನೀಡಿದೆಯಾದರೂ, ಅದು ಒದಗಿಸಿರುವ ಪರೀಕ್ಷಾ ಕಿಟ್‌ಗಳು ಉತ್ತಮವಾಗಿಲ್ಲ,’ ಎಂದು ಅವರು ಹೇಳಿದ್ದಾರೆ.

‘ರಾಜ್ಯದಲ್ಲಿ ಕೋವಿಡ್ ಕಣ್ಗಾವಲು ವ್ಯವಸ್ಥೆ ಉತ್ತಮವಾಗಿದೆ. ಹೀಗಾಗಿ ಸಮುದಾಯ ಪ್ರಸರಣೆ ಹಂತಕ್ಕೆ ರಾಜ್ಯ ಜಾರಿಲ್ಲ,’ ಎಂದು ಪಿಣರಾಯಿ ಇದೇ ವೇಳೆ ಹೇಳಿದ್ದಾರೆ.

ಇನ್ನೊಂದೆಡೆ, ರಾಜ್ಯದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣೆ ಹಂತಕ್ಕೆ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.