ಚರಕೀ ದಾದರೀ (ಹರಿಯಾಣ):ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿ ಹರಿಯಾಣದ ರೈತರಿಗೆ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಹರಿಯಾಣದ ರೈತರಿಗೆ ದೊರೆಯಬೇಕಾದ ನೀರು ಕಳೆದ 70 ವರ್ಷಗಳಿಂದ ಪಾಕಿಸ್ತಾನಕ್ಕೆ ಹರಿದುಹೋಗುತ್ತಿದೆ. ಆದರೆ, ಈ ಮೋದಿ ಅದನ್ನು ನಿಲ್ಲಿಸಿ ನಿಮ್ಮ ಮನೆಗೆ ಹರಿಯುವಂತೆ ಮಾಡಲಿದ್ದಾನೆ. ನಾನು ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಈ ನೀರು ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ್ದು. ಅದಕ್ಕಾಗಿಯೇ ಮೋದಿ ನಿಮಗಾಗಿ ಈ ಹೋರಾಟ ಮಾಡುತ್ತಿದ್ದಾನೆ’ ಎಂದು ಹೇಳಿದ್ದಾರೆ.

ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಸಂದರ್ಭ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸಿದರು. ದೇಶದಲ್ಲಿ ಮತ್ತು ವಿಶ್ವದಾದ್ಯಂತ ವದಂತಿಗಳನ್ನು ಹಬ್ಬಿಸಿಸಿದರು ಎಂದು ಮೋದಿ ಆರೋಪಿಸಿದ್ದಾರೆ.

ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದಾಗಿ ಜಮ್ಮು–ಕಾಶ್ಮೀರವು ದೇಶದ ಇತರ ಪ್ರದೇಶಗಳ ಜತೆ ಒಂದಾಗಿದೆ ಎಂದು ಸಮರ್ಥಿಸಿದ ಮೋದಿ, ಇನ್ನು ಆ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ಕಾಣಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.