ಇಸ್ಲಾಮಾಬಾದ್:ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ವಿಚಾರಣೆ ನಡೆಸುತ್ತಿರುವ ಎರಡು ವಿಡಿಯೊ ತುಣುಕುಗಳನ್ನು ಪಾಕಿಸ್ತಾನ ಸೇನೆಯ ವಕ್ತಾರರು ಬಿಡುಗಡೆ ಮಾಡಿದ್ದಾರೆ. ಇವುಗಳ ಜತೆಯಲ್ಲಿ ಕೆಲವು ಚಿತ್ರಗಳನ್ನೂ ಬಿಡುಗಡೆ ಮಾಡಿದ್ದಾರೆ.

‘ಇವು ಅಸಲಿ ವಿಡಿಯೊಗಳು ಎಂದು ಪಾಕಿಸ್ತಾನ ಸೇನೆಯ ಮೂಲಗಳು ಹೇಳಿವೆ. ಆದರೆ ಸೇನೆಯು ಅಧಿಕೃತವಾಗಿ ಇವನ್ನು ದೃಢಪಡಿಸಿಲ್ಲ’ ಎಂದು ಎಎಫ್ಪಿ ವರದಿ ಮಾಡಿದೆ.

ಮೂರನೇ ವಿಡಿಯೊ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೊ ಮೂಲ ಯಾವುದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೊ 1
ಈ ವಿಡಿಯೊದಲ್ಲಿ ಅಭಿನಂದನ್ ಅವರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವರ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿತ್ತು. ಅವರ ಮೂಗು ಮತ್ತು ಬಾಯಿಯ ಭಾಗದಲ್ಲಿ ರಕ್ತಸೋರಿ, ಹೆಪ್ಪುಗಟ್ಟಿತ್ತು. ಅವರ ಸುತ್ತ ಪಾಕಿಸ್ತಾನದ ಸೈನಿಕರು ನಿಂತಿದ್ದರು. ಕೆಲವರು ಅಭಿನಂದನ್ ಅವರ ಸಮವಸ್ತ್ರದಲ್ಲಿ ಇರಬಹುದಾದ ವಸ್ತುಗಳಿಗಾಗಿ ಹುಡುಕಾಡುತ್ತಿದ್ದರು.

‘ನನಗೆ ಗಾಯವಾಗಿದೆ. ಆದರೆ ಆ ಗುಂಪಿನ ದಾಳಿಯಿಂದ ಪಾಕ್ ಸೈನಿಕರು ನನ್ನನ್ನು ರಕ್ಷಿಸಿದರು’ ಎಂಬ ಅಭಿನಂದನ್ ಅವರ ಮಾತಿನಿಂದ ವಿಡಿಯೊ ಆರಂಭವಾಗುತ್ತದೆ.

ಪಾಕ್ ಸೈನಿಕ:ಮತ್ತೆ ಮೊದಲಿನಿಂದ ಹೇಳಿ
ಅಭಿನಂದನ್: ನಾನು ವಿಂಗ್ ಕಮಾಂಡರ್ ಅಭಿನಂದನ್. ನನ್ನ ಗುರುತು ಸಂಖ್ಯೆ 27981. ನಾನು ಪೈಲಟ್. ನಾನು ಹಿಂದೂ.
ಪಾಕ್ ಸೈನಿಕ:....?
ಅಭಿನಂದನ್: ನಾನು ಆ ಮಾಹಿತಿಯನ್ನು ನೀಡುವಂತಿಲ್ಲ
ಪಾಕ್ ಸೈನಿಕ: ಸ್ಕ್ವಾಡ್ರನ್?
ಅಭಿನಂದನ್: ನಾನು ಆ ಮಾಹಿತಿಯನ್ನು ನೀಡುವಂತಿಲ್ಲ.
ಅಭಿನಂದನ್: ನನಗೆ ಕೊಂಚ ಮಾಹಿತಿ ಸಿಗಬಹುದೇ? ನಾನು ಪಾಕಿಸ್ತಾನ ಸೇನೆಯ ವಶದಲ್ಲಿದ್ದೇನೇಯೇ?
ವಿಡಿಯೊ ಅಂತ್ಯ

ವಿಡಿಯೊ 2
ಇದರಲ್ಲಿ ಅಭಿನಂದನ್ ಅವರು ಟೀ ಕುಡಿಯುತ್ತಿದ್ದಾರೆ. ಪಾಕಿಸ್ತಾನ ಸೇನೆಯ ಮೇಜರ್ ಒಬ್ಬರು ಅವರನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆ ಮೇಜರ್ ಈ ವಿಡಿಯೊದಲ್ಲಿ ಕಾಣುವುದಿಲ್ಲ
ಪಾಕ್ ಮೇಜರ್: ನೀವು ಭಾರತದ ಯಾವ ಭಾಗದವರು?
ಅಭಿನಂದನ್: ನಾನು ಆ ಮಾಹಿತಿ ನೀಡುವಂತಿಲ್ಲ. ಆದರೆ ನಾನು ದಕ್ಷಿಣ ಭಾರತದವನು
ಪಾಕ್ ಮೇಜರ್: ನೀವು ವಿವಾಹಿತರಾ?
ಅಭಿನಂದನ್: ಹೌದು
ಪಾಕ್ ಮೇಜರ್: ಟೀ ಹೇಗಿದೆ?
ಅಭಿನಂದನ್: ಚೆನ್ನಾಗಿದೆ...
ಪಾಕ್ ಮೇಜರ್: ನೀವು ಚಲಾಯಿಸುತ್ತಿದ್ದ ವಿಮಾನ ಯಾವುದು?
ಅಭಿನಂದನ್: ನಾನು ಆ ಬಗ್ಗೆ ಮಾಹಿತಿ ನೀಡುವಂತಿಲ್ಲ. ಅವಶೇಷಗಳನ್ನು ಬೇಕಾದರೆ ತೋರಿಸಬಲ್ಲೆ
ಪಾಕ್ ಮೇಜರ್: ನೀವು ಯಾವ ಕಾರ್ಯಾಚರಣೆ ಮೇಲೆ ಪಾಕಿಸ್ತಾನಕ್ಕೆ ಬಂದಿದ್ದಿರಿ?
ಅಭಿನಂದನ್: ಸಾರಿ ಮೇಜರ್. ನಾನು ಆ ಬಗ್ಗೆ ಮಾಹಿತಿ ನೀಡುವಂತಿಲ್ಲ
ವಿಡಿಯೊ ಅಂತ್ಯ

ವಿಡಿಯೊ 3
ನದಿಪಾತ್ರದಲ್ಲಿ ಹಲವು ನಾಗರಿಕರು ವ್ಯಕ್ತಿಯೊಬ್ಬರನ್ನು ಹಿಡಿದು ಥಳಿಸುತ್ತಿದ್ದಾರೆ. ವಿಡಿಯೊ ಚಿತ್ರೀಕರಿಸುತ್ತಿರುವವರು ಹತ್ತಿರ ಹೋದಾಗ, ಏಟು ತಿನ್ನುತ್ತಿರುವ ವ್ಯಕ್ತಿ ಭಾರತೀಯ ವಾಯುಪಡೆಯ ಪೈಲಟ್ ಎಂಬುದು ಗೊತ್ತಾಗುತ್ತದೆ. ನಂತರ ಸೈನಿಕನೊಬ್ಬ ಗುಂಪನ್ನು ತಡೆಯುವುದು ವಿಡಿಯೊದಲ್ಲಿ ದಾಖಲಾಗಿದೆ. ಆದರೆ ಆ ಸೈನಿಕ ಮುಖ ಅದರಲ್ಲಿ ಕಾಣುವುದಿಲ್ಲ. ಆದರೆ, ‘ಹೊಡೆಯಬೇಡಿ’ ಎಂದು ಆತ ಕೂಗುತ್ತಿರುವುದು ಕೇಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.