ಅಹಮದಾಬಾದ್: ಖ್ಯಾತ ಜ್ಯೋತಿಷಿ ಬೆಜನ್ ದಾರುವಾಲ ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 89ರ ಹರೆಯದ ದಾರುವಾಲ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದು ಕಳೆದ ವಾರದಿಂದ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದರು.

ಅವರ ಅಂತ್ಯಸಂಸ್ಕಾರವು ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ನಸ್ತೂರ್ ಮತ್ತು ಫರ್ದೂನ್ ಮತ್ತು ನಾಜೀನ್ ಎಂಬ ಮೂರು ಮಕ್ಕಳನ್ನು ಇವರು ಅಗಲಿದ್ದಾರೆ.

ದಾರುವಾಲ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಅವರ ಕುಟುಂಬ ಮತ್ತು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಕುಟುಂಬದ ಸದಸ್ಯರ ಗೌಪ್ಯತೆಯ ದೃಷ್ಟಿಯಲ್ಲಿ ನಾವು ಸಾವಿನ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಅಪೋಲೊ ಆಸ್ಪತ್ರೆಯ ವಕ್ತಾರ ಹೇಳಿದ್ದಾರೆ.

ಕಳೆದ ವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಕೊನೆಯುಸಿರೆಳಿದಿದ್ದಾರೆ ಎಂದು ಆಸ್ಪತ್ರೆಯ ವಕ್ತಾರ ಹೇಳಿದ್ದಾರೆ.

ದಾರುವಾಲ ಅವರಿಗೆ ಕೊರೊನಾ ಸೋಂಕು ಇತ್ತು ಎಂಬುದನ್ನು ಅವರ ಕುಟುಂಬದ ಗೆಳೆಯ ಉದ್ಯಮಿ ಬೆಹರಮ್ ಮೆಹ್ತಾ ಅಲ್ಲಗೆಳೆದಿದ್ದಾರೆ. ಈ ಪರಿಸ್ಥಿತಿಯಲ್ಲಿ ಮೃತದೇಹವನ್ನು ಸುಡುವುದೇ ಸುರಕ್ಷಿತ ಎಂದು ಅವರು ಹೇಳಿದ್ದಾರೆ.

ದಾರುವಾಲನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂತಾಪ ಸೂಚಿಸಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.