ಬೆಂಗಳೂರು:ನಿತ್ಯೋತ್ಸವ ಕವಿ ನಿಸಾರ್ ಅಹಮದ್ (84) ಪದ್ಮನಾಭಗರದಲ್ಲಿರುವ ಸ್ವಗೃಹದಲ್ಲಿ ಭಾನುವಾರ ನಿಧನರಾದರು.ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕೆಲ ಸಮಯ ಆಸ್ಪತ್ರೆಗೂ ದಾಖಲಾಗಿದ್ದರು. ಅಮೆರಿಕದಲ್ಲಿದ್ದ ಅವರ ಪುತ್ರ ಈಚೆಗಷ್ಟೇ ಮೃತಪಟ್ಟಿದ್ದರು.

ನಿತ್ಯೋತ್ಸವ ಕವಿ

‘ಜೋಗದ ಸಿರಿ ಬೆಳಕಿನಲ್ಲಿ...’ ನಿಸಾರ್ ಅಹಮದ್ ಅವರ ಜನಪ್ರಿಯ ಕೃತಿ. ಮನೆಮನೆ ತಲುಪಿದ ಈ ಕೃತಿ ಅವರಿಗೆ ಸಾಕಷ್ಟು ಜನಮನ್ನಣೆಯನ್ನೂ ತಂದುಕೊಟ್ಟಿತ್ತು. ಜನರು ಅವರನ್ನು ಪ್ರೀತಿಯಿಂದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಎಂದೇ ಗುರುತಿಸಿದರು.

ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಪೂರ್ಣ ಹೆಸರು ಕೊಕ್ಕರೆ ಹೊಸಳ್ಳಿ ಶೇಖ್ ಹೈದರ ನಿಸಾರ್ ಅಹಮದ್. ಬೆಂಗಳೂರು ಗ್ರಾಮಾಂತರಜಿಲ್ಲೆದೇವನಹಳ್ಳಿಯಲ್ಲಿ ಫೆಬ್ರುವರಿ 5, 1936ರಲ್ಲಿ ಜನಿಸಿದರು. 1959ರಲ್ಲಿಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರವರೆಗೆ ವಿವಿಧ ಸರ್ಕಾರಿಕಾಲೇಜುಗಳಲ್ಲಿ ಅಧ್ಯಾಪಕ ಹಾಗೂಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

10 ವರ್ಷದವರಿದ್ದಾಗಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. 21ಕವನ ಸಂಕಲನಗಳು, 14 ವೈಚಾರಿಕಕೃತಿಗಳು, 5ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳು ಪ್ರಕಟವಾಗಿವೆ.

ಅವುಗಳಲ್ಲಿ ಮನಸು ಗಾಂಧಿಬಜಾರು,ನಿತ್ಯೋತ್ಸವ ಹಾಗೂ ಕುರಿಗಳು ಸಾರ್ ಕುರಿಗಳುಪ್ರಸಿದ್ಧವಾಗಿವೆ.

1978ರಲ್ಲಿ ನಿಸಾರ್ ಅವರ ಮೊದಲ ಕ್ಯಾಸೆಟ್ ‘ನಿತ್ಯೋತ್ಸವ’ಹೊರಬಂತು.ಸುಗಮ ಸಂಗೀತಕ್ಷೇತ್ರದಲ್ಲಿ ಅವರ ರಚನೆಯ ಗೀತೆಗಳುಯಶಸ್ಸು ಪಡೆಯಿತು. ನಿಸಾರ್ ರಚನೆಯ ಕವನಗಳನ್ನು ಹೊತ್ತು 13 ಆಡಿಯೊ ಆಲ್ಬಂಗಳು ಪ್ರಕಟವಾಗಿವೆ.

ಪ್ರಶಸ್ತಿ, ಗೌರವಗಳು

2006ರ ಮಾಸ್ತಿಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಗೊರೂರು ಪ್ರಶಸ್ತಿ,ಅನಕೃ ಪ್ರಶಸ್ತಿ,ಕೆಂಪೇಗೌಡ ಪ್ರಶಸ್ತಿ,ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (1981), ನಾಡೋಜ ಪ್ರಶಸ್ತಿ (2003),ಅರಸು ಪ್ರಶಸ್ತಿ (2006)
ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪ್ರಮುಖ ಕೃತಿಗಳು

ಕವನ ಸಂಕಲನಗಳು:ಮನಸು ಗಾಂಧಿ ಬಜಾರು,ನೆನೆದವರ ಮನದಲ್ಲಿ,ಸುಮಹೂರ್ತ,ಸಂಜೆ ಐದರ ಮಳೆ,ನಾನೆಂಬ ಪರಕೀಯ, ಆಯ್ದ ಕವಿತೆಗಳು,ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು,ಅನಾಮಿಕ ಆಂಗ್ಲರು,ಬರಿರಂತರ,ಸಮಗ್ರ ಕವಿತೆಗಳು,ನವೋಲ್ಲಾಸ,
ಆಕಾಶಕ್ಕೆ ಸರಹದ್ದುಗಳಿಲ್ಲ,ಅರವತ್ತೈದರ ಐಸಿರಿ,ಸಮಗ್ರ ಭಾವಗೀತೆಗಳು,ಪ್ರಾತಿನಿಧಿಕ ಕವನಗಳು,ನಿತ್ಯೋತ್ಸವ ಕವಿತೆ,

ಗದ್ಯ ಸಾಹಿತ್ಯ:ಅಚ್ಚುಮೆಚ್ಚು,ಇದು ಬರಿ ಬೆಡಗಲ್ಲೊ ಅಣ್ಣ,ಷೇಕ್ಸ್ಪಿಯರ್ನಒಥೆಲ್ಲೊದ ಕನ್ನಡಾನುವಾದ,ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಕೃತಿಯ ಕನ್ನಡಾನುವಾದ.

ನಿಸಾರ್ ಅಹಮದ್ ನಿವಾಸದ ಎದುರು ಅಭಿಮಾನಿಗಳು

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಕೆ.ಎಸ್.ನಿಸಾರ್ ಅಹಮದ್ ನಿವಾಸದ ಎದುರು ಅಭಿಮಾನಿಗಳು. (ಪ್ರಜಾವಾಣಿ ಚಿತ್ರ, ರಂಜು ಪಿ.)

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಕೆ.ಎಸ್.ನಿಸಾರ್ ಅಹಮದ್ ನಿವಾಸಕ್ಕೆ ಸಚಿವ ಆರ್.ಅಶೋಕ್ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಕೆ.ಎಸ್.ನಿಸಾರ್ ಅಹಮದ್ ನಿವಾಸದ ಎದುರು ಅಭಿಮಾನಿಗಳು. (ಪ್ರಜಾವಾಣಿ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.