ನವದೆಹಲಿ: ಎಂ3 ಚಿಪ್ಸೆಟ್ ಹೊಂದಿರುವ ಆ್ಯಪಲ್ನ ಹೊಸ ಮ್ಯಾಕ್ಬುಕ್ ಪ್ರೊ ಲ್ಯಾಪ್ಟಾಪ್ ಮತ್ತು ಐಮ್ಯಾಕ್ ಪಿಸಿ ನವೆಂಬರ್ 7ರಿಂದ ಭಾರತವನ್ನೂ ಒಳಗೊಂಡು 27 ದೇಶಗಳಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿಯು ತಿಳಿಸಿದೆ.

14 ಇಂಚು ಮತ್ತು 16 ಇಂಚು ಡಿಸ್ಪ್ಲೇ ಇರುವ ಮ್ಯಾಕ್ಬುಕ್ ಪ್ರೊ ಲ್ಯಾಪ್ಟಾಪ್ಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಬೆಲೆಯು ಕ್ರಮವಾಗಿ ₹1.69 ಲಕ್ಷ ಮತ್ತು ₹2.49 ಲಕ್ಷದಿಂದ ಆರಂಭ ಆಗುತ್ತದೆ.

ಹೊಸ ಲ್ಯಾಪ್ಟಾಪ್ಗಾಗಿ ಸೋಮವಾರದಿಂದಲೇ ಬುಕಿಂಗ್ ಆರಂಭ ಆಗಿದೆ. ಆ್ಯಪಲ್ ಇಂಡಿಯಾ ಸ್ಟೋರ್ ಮತ್ತು ಆ್ಯಪಲ್ಸ್ಟೋರ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು ಎಂದು ತಿಳಿಸಿದೆ.

ಹೊಸ ಐಮ್ಯಾಕ್ ಡೆಸ್ಕ್ಟಾಪ್ 8–ಕೋರ್ ಜಿಪಿಯು ಹೊಂದಿದ್ದು ಬೆಲೆಯು ₹1.29 ಲಕ್ಷದಿಂದ ಆರಂಭ ಆಗುತ್ತದೆ. 10–ಜಿಪಿಯು ಇರುವ ಡೆಸ್ಕ್ಟಾಪ್ ಬೆಲೆಯು ₹1.44 ಲಕ್ಷದಿಂದ ಆರಂಭ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.