ಗ್ರೇಡ್ ಆ್ಯಪ್- grade up

ಸರ್ಕಾರಿ ನೌಕರಿ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಗ್ರೇಡ್‍ಅಪ್ ಆ್ಯಪ್ ಅಸ್ತಿತ್ವಕ್ಕೆ ಬಂದಿದ್ದು, ಉದ್ಯೋಗ ಆಧಾರಿತ ಪರೀಕ್ಷೆಗಳ ಪೂರ್ವ ತಯಾರಿಗಾಗಿ ಸಾಕಷ್ಟು ಸ್ಟಡಿ ಮೆಟಿರಿಯಲ್ ಅನ್ನು ಒದಗಿಸಿ ಪರೀಕ್ಷೆಗೆ ಸಜ್ಜುಗೊಳ್ಳಲು ಇದು ಸಹಾಯ ಮಾಡಲಿದೆ.

ಈ ಆ್ಯಪ್‌ನಲ್ಲಿ ಬ್ಯಾಂಕಿಂಗ್, ಐಬಿಪಿಎಸ್, ಎಸ್‍ಎಸ್‍ಸಿ, ಸಿಎಚ್‍ಎಸ್‍ಎಲ್, ಜೆಇಇ, ಯುಪಿಎಸ್‍ಸಿ, ಗೇಟ್, ಸಿಐಇಟಿ, ಕೆವಿಎಸ್, ಎಂಬಿಎ ಸಿಇಟಿ ಪರೀಕ್ಷೆಗಳಿಗೆ ಸಂಬಂಧಿತ ವಿಷಯವಾರು ಅಧ್ಯಯನ ಮಾಹಿತಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯ.

ಈಗಾಗಲೇ ಆ್ಯಪ್ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳ ಗುಂಪನ್ನು ಸೃಷ್ಟಿಸಿ ಅವರಿಗೆಲ್ಲಾ ಪ್ರಾಯೋಗಿಕ ಪರೀಕ್ಷೆಗಳನ್ನು ನೀಡಿ ಮುಖ್ಯಪರೀಕ್ಷೆಗೆ ತಯಾರಿ ನಡೆಸುವಲ್ಲಿ ಬೆಂಬಲ ನೀಡುತ್ತದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವುದರ ಮೂಲಕ ತಮ್ಮ ಗೊಂದಲಗಳಿಗೆ ಸುಲಭ ಮತ್ತು ಸಿದ್ಧ ಉತ್ತರಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ನಿಗದಿ ಸಮಯದಲ್ಲಿ ಕೋರ್ಸ್‍ಗಳನ್ನು ಪೂರ್ಣಗೊಳಿಸಿ ವಿಷಯವಾರು ಜ್ಞಾನ ಹೆಚ್ಚಿಸಿಕೊಳ್ಳಲು ಸ್ಟಡಿ ಪ್ಲಾನ್‍ಗಳ ಮೂಲಕ ಸಲಹೆ ನೀಡುತ್ತದೆ.

ಅಧ್ಯಯನದ ಮಟ್ಟವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ದಿನಕ್ಕೊಂದು ಕಿರುಪರೀಕ್ಷೆ ನೀಡುವುದರೊಂದಿಗೆ, ಬದಲಾದ ಪರೀಕ್ಷೆಗಳ ಪ್ಯಾಟ್ರನ್, ಹೊಸ ಮಾದರಿಯ ಪ್ರಶ್ನಪತ್ರಿಕೆಗಳ ಕುರಿತು ಮಾಹಿತಿ ನೀಡುತ್ತದೆ.

ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರವಾಗಿ ಅಪ್‍ಡೇಟ್ ಆಗುವುದರೊಂದಿಗೆ, ರೀಸನಿಂಗ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಕುರಿತಾದ ಪ್ರಶ್ನೆಗಳ ಕ್ವಿಜ್ ನೀಡಿ, ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪ್ರೇರೆಪಿಸುತ್ತದೆ.

ಬ್ಯಾಂಕಿಂಗ್ ಮತ್ತು ಎಸ್‍ಎಸ್‍ಸಿ ಪರೀಕ್ಷೆಗಳಿಗೆ ಅನುಕೂಲವಾಗುವಂತಹ, ಸಾಕಷ್ಟು ವಿಡಿಯೊ ಟ್ಯುಟೋರಿಯಲ್‍ಗಳ ಅಕ್ಸಸ್ ನೀಡಿವುದರೊಂದಿಗೆ, ಮುಂಬರುವ ಸರ್ಕಾರಿ ಉದ್ಯೋಗದ ಪರೀಕ್ಷೆಗಳ ಕುರಿತಾದ ಮಾಹಿತಿಯನ್ನೂ ಇದು ನೀಡಲಿದೆ.

ಡ್ಯುಲಿಂಗೊ – Duolingo

ಭಾಷಾ ಕಲಿಕೆಗಾಗಿಯೇ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಮಾತನಾಡುವ, ಓದುವ, ಕೇಳಿಸಿಕೊಳ್ಳುವ ಮತ್ತು ಬರೆಯುವ ಕೌಶಲವನ್ನು ಈ ಆ್ಯಪ್‌ನಲ್ಲಿರುವ ಗೇಮ್ಸ್‌ನ ಮೂಲಕ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ರಷ್ಯನ್, ಪೋರ್ಚುಗಿಸ್, ಟರ್ಕಿಶ್, ಡಚ್, ಐರಿಷ್, ಡ್ಯಾನಿಶ್, ಸ್ವೀಡಿಷ್, ಉಕ್ರೇನಿಯನ್, ಎಸ್ಪೆರಾಂಟೊ, ಪೋಲಿಷ್, ಗ್ರೀಕ್, ಹಂಗೇರಿಯನ್, ನಾರ್ವೇಜಿಯನ್, ಹೀಬ್ರೂ, ವೆಲ್ಷ್, ಸ್ವಹಿಲಿ, ರೊಮೇನಿಯನ್ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕಾ ಸಾಮಾಗ್ರಿಗಳು ಇದರಲ್ಲಿವೆ.

ದೈನಂದಿನ ಬಳಕೆಗೆ ಅಗತ್ಯವಿರುವಷ್ಟು ಭಾಷೆಯ ಜ್ಞಾನದೊಂದಿಗೆ ಅದರ ವ್ಯಾಕರಣ, ದಿನಕ್ಕೊಂದು ಪದ ಕಲಿಯಿರು ಎಂಬುವ ಆಯ್ಕೆಗಳೂ ಹೆಚ್ಚು ಆಕರ್ಷಕವಾದಿವೆ.

ಕೊರ್ಸೆರಾ: ಆನ್‌ಲೈನ್ ಕೋರ್ಸ್ Coursera: Online courses

ಪೈಥಾನ್ ಮತ್ತು ಡೆಟಾ ಸೈನ್ಸ್, ಮ್ಯೂಸಿಕ್ ವಿಷಯಗಳಲ್ಲಿ ಮಾಸ್ಟರ್ ಆಗಲು ಈ ಆ್ಯಪ್‌ನಲ್ಲಿ ಸಾವಿರಕ್ಕೂ ಹೆಚ್ಚಿನ ಕೋರ್ಸ್‌ಗಳಿವೆ. 140ಕ್ಕೂ ಹೆಚ್ಚಿನ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರು ಇಲ್ಲಿ ಬೋಧಿಸಲಿದ್ದು, ವೃತ್ತಿಪರ ತರಬೇತಿಯ ಕೋರ್ಸ್‌ಗಳಿವೆ. ಕಂಪ್ಯೂಟರ್ ಸೈನ್ಸ್, ಪ್ರೊಗ್ರಾಮಿಂಗ್, ಮೊಬೈಲ್ ಮತ್ತು ವೆಬ್ ಡೆವಲಪ್‌ಮೆಂಟ್, ಡೆಟಾ ಸೈನ್ಸ್ ಮಷಿನ್ ಲರ್ನಿಂಗ್, ನ್ಯೂಟ್ರಿಷನ್, ರೊಬೊಟಿಕ್ಸ್, ಕೆಮಿಸ್ಟ್ರಿ, ಮೆಡಿಸಿನ್, ಕಲೆ, ಫೋಟೋಗ್ರಾಫಿ, ಕಲಾತ್ಮಕ ಬರವಣಿಗೆ ಸಂಬಂಧಿತ ವಿವಿಧ ಕೋರ್ಸ್‌ಗಳು ಇದರಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.