ಬೆಂಗಳೂರು: ವಿಡಿಯೊ ಚಿತ್ರೀಕರಣ, ಕಣ್ಗಾವಲು ಹಾಗೂ ಕೃಷಿಯಲ್ಲಿ ಸ್ಪ್ರೇಯರ್ ಆಗಿ ಹೆಚ್ಚಾಗಿ ಬಳಕೆಯಲ್ಲಿದ್ದ ಡ್ರೋನ್ಗಳನ್ನು ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಬಳಕೆ ಮಾಡುವ ಹೊಸ ತಂತ್ರಜ್ಞಾನದ ಅನಾವರಣ ಬೆಂಗಳೂರು ಟೆಕ್ ಸಮಿಟ್ನಲ್ಲಿ ಕಾಣಬಹುದಾಗಿದೆ.

ಅದರಂತೆಯೇ ರೊಬೊಗಳ ನಿರ್ಮಾಣ ಹಾಗೂ ಭವಿಷ್ಯದ ಬಳಕೆ ಕುರಿತು ಸ್ಥೂಲ ಪರಿಚಯದ ಜತೆಗೆ, ಹೊಸ ಅವಕಾಶಗಳ ಸಾಧ್ಯತೆಗಳೂ ಇಲ್ಲಿವೆ.

ಪ್ರದರ್ಶನ ಮಳಿಗೆಯಲ್ಲಿರುವ ಆರ್ಟ್ಪಾರ್ಕ್ ಎಂಬ ಪ್ರತ್ಯೇಕ ಮಳಿಗೆಯಲ್ಲಿ ವಿಮಾನ ಮಾದರಿಯ ಕಾರ್ಗೊ ಡ್ರೋನ್, ಆರೋಗ್ಯ ಕ್ಷೇತ್ರದಲ್ಲಿ ಬಳಸುವ ರೊಬೊಗಳ ಬಿಡಿಭಾಗಗಳು, ಪುಟ್ಟ ಡ್ರೋನ್ಗಳು, ಅವುಗಳನ್ನು ಚಾರ್ಜ್ ಮಾಡುವ ನೂತನ ಮಾದರಿಯ ವ್ಯವಸ್ಥೆಗಳು ಲಭ್ಯ.
.Bengaluru Tech Summit 2023: ಹೃದಯ, ಶ್ವಾಸಕೋಶದ ಶಬ್ದ ಆಲಿಸುವ ಎಐ ಸ್ಟೆಥಸ್ಕೋಪ್.Bengaluru Tech Summit: ಬೆಂಗಳೂರು ಅರಮನೆ ಆವರಣದಲ್ಲಿ ಚಂದ್ರಯಾನ ಯೋಜನೆಯ ಅನಾವರಣ.
ಯುವ ತಂತ್ರಜ್ಞರ ತಂಡಗಳೇ ತುಂಬಿರುವ ಆರ್ಟ್ಪಾರ್ಕ್ನ ಬಹಳಷ್ಟು ಉಪಕರಣಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನೆರವಾಗುತ್ತಿದೆ. ಅಲ್ಲಿನ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಉಪಕರಣಗಳು ದೇಶ ಹಾಗೂ ವಿದೇಶದಿಂದ ಬಂದ ವೀಕ್ಷಕರ ಗಮನ ಸೆಳೆಯುತ್ತಿವೆ.

ಬೆಂಗಳೂರಿನಂತ ಮಹಾನಗರದಲ್ಲಿ ಹಾಗೂ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ತ್ವರಿತವಾಗಿ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಡ್ರೋನ್ಗಳನ್ನು ಪರಿಣಾಮಕಾರಿಯಾಗಿ ಬಳಸುವ ತಂತ್ರಜ್ಞಾನ ಇಲ್ಲಿನ ಕಾಮ್ರ್ಯಾಡೊ ಏರೋಸ್ಪೇಸ್ ಮಳಿಗೆಯಲ್ಲಿದೆ. ಬ್ಯಾಟರಿ ಚಾಲಿತ ಡ್ರೋನ್ ಇದಾಗಿದ್ದು, 25 ಕೆ.ಜಿ. ತೂಕವನ್ನು ಹೊತ್ತೊಯ್ಯಬಲ್ಲದು. 2.5 ಕಿ.ಮೀ. ಎತ್ತರದಲ್ಲಿ ಹಾರುವ ಸಾಮರ್ಥ್ಯ ಇರುವ ಇದು ಸುಮಾರು 100ರಿಂದ 200 ಕಿ.ಮೀ. ವರೆಗೂ ದೂರ ಕ್ರಮಿಸಬಲ್ಲದು.

ಯುವ ತಂತ್ರಜ್ಞರನ್ನು ಸೆಳೆಯುತ್ತಿರುವ ಆರ್ಟ್ಪಾರ್ಕ್ನಲ್ಲಿ ಆಕ್ಯುಟಾಟರ್ಸ್, ಸಾಫ್ಟ್ ಗ್ರಿಪ್ಪರ್, ಆಕ್ಯುಟಾಡರ್ ಟೆಸ್ಟಿಂಗ್ ರಿಗ್ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ರೊಬೊಗಳು ಹಾಗೂ ಅವುಗಳ ಬಿಡಿ ಭಾಗಗಳು ಲಭ್ಯ.

ಮತ್ತೊಂದೆಡೆ ಹವೇಲಿ ಎಂಬ ದೆಹಲಿ ಮೂಲದ ಕಂಪನಿಯು ಚಹಾ ಹಾಗೂ ಕಾಫಿ ಎಸ್ಟೇಟ್ಗಳಿಗಾಗಿಯೇ ಡ್ರೋನ್ ಅಭಿವೃದ್ಧಿಪಡಿಸಿದೆ. ಇದು 15ರಿಂದ 25 ಕೆ.ಜಿ. ತೂಕ ಹೊತ್ತು ಸಾಗಬಲ್ಲದು. ಆದರೆ ಇದರಲ್ಲಿರುವ ವಿಶೇಷವೆಂದರೆ ಕೃತಕ ಬುದ್ಧಿಮತ್ತೆ ಅಳವಡಿಸಲಾಗಿದ್ದು, ಸಾಧನ ಖರೀದಿಸುವ ತೊಟದ ಮಾಲೀಕರ ತೋಟವನ್ನು ಒಮ್ಮೆ ಡಿಜಟಲ್ ಮೂಲಕ ಪರಿಚಯಿಸಿದರೆ ಸಾಕು, ಇದು ಅದರಾಚೆ ಒಂದಿಂಚೂ ಹೋಗದು.

ಬೆಳೆಗಳ ಮೇಲೆ ಕಣ್ಗಾವಲು, ಔಷಧ ಸಿಂಪರಣೆಯಿಂದ ಹಿಡಿದು, ಮೋಡ ಬಿತ್ತನೆಗೂ ಇದನ್ನು ಬಳಸಲು ಸಾಧ್ಯ. ಬಳಕೆ ಹೆಚ್ಚಾದಂತೆಲ್ಲಾ, ಡ್ರೋನ್ನ ಬುದ್ಧಿಮತ್ತೆಯೂ ಹೆಚ್ಚುತ್ತಲೇ ಸಾಗುತ್ತದೆ. ಆಗ ತೊಟದ ಮಾಲೀಕರ ಕೆಲಸ ಇನ್ನಷ್ಟು ಹಗುರವಾಗುತ್ತಲೇ ಸಾಗುತ್ತದೆ ಎನ್ನುತ್ತಾರೆ ಸಂಸ್ಥಾಪಕ ಕೆ.ವೈ.ಅರವಿಂದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.