ಟ್ರೂ ಕಾಲರ್ ಆ್ಯಪ್ ತಮ್ಮ ಬಳಕೆದಾರರಿಗೆ ಕರೆ ರೆಕಾರ್ಡ್ ಮಾಡುವ ಹೊಸ ಫೀಚರ್ ಅನ್ನುಪರಿಚಯಿಸಿದೆ. ಅನಗತ್ಯ ಕರೆಗಳ ಕಿರಿಕಿರಿ ತಪ್ಪಿಸಲು ಈ ಹೊಸ ಸೌಲಭ್ಯ ಸಹಕಾರಿಯಾಗಲಿದೆ. ಕೆಲವು ಸ್ಮಾರ್ಟ್ ಫೋನ್‌ಗಳಲ್ಲಿ ಕರೆ ರೆಕಾರ್ಡ್ ಮಾಡುವ ಸೌಲಭ್ಯವಿದ್ದರೂ, ಇನ್ನು ಕೆಲವು ಫೋನ್‌ಗಳಲ್ಲಿ ಕರೆ ರೆಕಾರ್ಡ್ ಮಾಡಲು ಬೇರೆ ಆ್ಯಪ್‍ಗಳನ್ನು ಬಳಸಬೇಕಾಗುತ್ತದೆ. ಪ್ಲೇ ಸ್ಟೋರ್‌ನಲ್ಲಿ ಹಲವಾರು ರೀತಿಯ ಕಾಲ್ ರೆಕಾರ್ಡಿಂಗ್ ಆ್ಯಪ್‌ಗಳು ಲಭ್ಯವಿವೆ. ಈ ಎಲ್ಲ ಆ್ಯಪ್‌ಗಳಿಗೆ ಹೋಲಿಸಿದರೆ ಟ್ರೂ ಕಾಲರ್‌ನಲ್ಲಿ ನಿರಾತಂಕವಾಗಿ ಕರೆ ರೆಕಾರ್ಡ್ ಮಾಡಬಹುದಾಗಿದೆ. ಈ ಸೌಲಭ್ಯ ಅಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯ.
ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ?

* ಮೊಬೈಲ್‌ನಲ್ಲಿ ಟ್ರೂ ಕಾಲರ್ ಆ್ಯಪ್ ಓಪನ್ ಮಾಡಿ. ಎಡಭಾಗದಲ್ಲಿರುವ ಮೆನು ಕ್ಲಿಕ್ ಮಾಡಿ.

*ಕಾಲ್ ರೆಕಾರ್ಡಿಂಗ್ಸ್ ಆಪ್ಶನ್ ಕ್ಲಿಕ್ ಮಾಡಿ

* Try for 14 days for free ಎಂಬ ಸಂದೇಶ ಕಾಣಿಸುತ್ತದೆ. ಅದರ ಬಳಿ ಇರುವ Start ಬಟನ್ ಕ್ಲಿಕ್ಕಿಸಿ.

* Start Free Trial ಕ್ಲಿಕ್ ಮಾಡಿದರೆ 14 ದಿನಗಳವರೆಗೆ ಕರೆ ರೆಕಾರ್ಡಿಂಗ್ ಸೌಲಭ್ಯ ಬಳಸಬಹುದು.

* ಯಾವ ಕರೆಗಳನ್ನು ನಾವು ರೆಕಾರ್ಡ್ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸಬಹುದು. ನಮಗೆ ಬರುವ ಮತ್ತು ನಾವು ಕರೆ ಮಾಡುವ ಎಲ್ಲ ಸಂಭಾಷಣೆಗಳು ರೆಕಾರ್ಡ್ ಆಗಬೇಕಿಂದಿದ್ದರೆ Auto ಎಂಬ ಅಪ್ಶನ್ ಸೆಲೆಕ್ಟ್ ಮಾಡಿದರೆ ಸಾಕು. ನಾವು ಆಯ್ಕೆ ಮಾಡುವ ಕರೆಗಳನ್ನು ಮಾತ್ರ ರೆಕಾರ್ಡ್ ಮಾಡಬೇಕೆಂದಿದ್ದರೆ Manual ಎಂಬ ಆಪ್ಶನ್ ಕ್ಲಿಕ್ ಮಾಡಬೇಕು.

* ಈ ಕಾಲಾವಧಿ ಮುಗಿದ ನಂತರ ಈ ಸೌಲಭ್ಯ ಬಳಸಬೇಕಾದರೆ ಪ್ರೀಮಿಯಮ್ ಬಳಕೆದಾರರಾಗಿ ಅಪ್‍ಡೇಟ್ ಆಗಬೇಕಿದೆ.

* ಪ್ರೀಮಿಯಮ್ ಬಳಕೆದಾರರಾಗಬೇಕಿದ್ದರೆ ತಿಂಗಳಿಗೆ 49 ಅಥವಾ ವರ್ಷಕ್ಕೆ 449 ಪಾವತಿಸಬೇಕು.

* ಪ್ರೀಮಿಯಮ್ ಬಳಕೆದಾರರಾದರೆ ಕರೆ ರೆಕಾರ್ಡಿಂಗ್ ಸೌಲಭ್ಯ ಮಾತ್ರವಲ್ಲದೆ ಯಾರೆಲ್ಲಾ ನಮ್ಮ ಪ್ರೊಫೈಲ್‍ನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿಯೂ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.