ಬೆಂಗಳೂರು: ಭಾರತದಲ್ಲಿ 'ನೋಕಿಯಾ ಸ್ಮಾರ್ಟ್ ಟಿವಿ' ಬಿಡುಗಡೆಯಾಗುತ್ತಿರುವುದಾಗಿ ಫ್ಲಿಪ್ಕಾರ್ಟ್ ಗುರುವಾರ ಪ್ರಕಟಿಸಿದೆ. ಜೆಬಿಎಲ್ ಸೌಂಡ್ ಹೊಂದಿರುವ ನೋಕಿಯಾ ಟಿವಿ ಡಿಸೆಂಬರ್ 10ರಿಂದ ಖರೀದಿಗೆ ಲಭ್ಯವಾಗಲಿದೆ.

55 ಇಂಚು ಅಲ್ಟ್ರಾ ಎಚ್ಡಿ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿಯು 24 ವ್ಯಾಟ್ ಬಿಲ್ಟ್–ಇನ್ ಸ್ಪೀಕರ್, ಡಿಟಿಎಸ್ ಟ್ರೂಸರೌಂಡ್ ಮತ್ತು ಡಾಲ್ಬಿ ಆಡಿಯೊ ವ್ಯವಸ್ಥೆ ಒಳಗೊಂಡಿದೆ. ಜೆಬಿಎಲ್ನಿಂದ ಆಡಿಯೊ ಉತ್ತಮ ಪಡಿಸುವ ವ್ಯವಸ್ಥೆ ಪಡೆದಿದೆ. ಇಂಟೆಲಿಜೆಂಟ್ ಡಿಮ್ಮಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ನೋಕಿಯಾ ಟಿವಿ ಬೆಲೆ ₹41,999 ನಿಗದಿಯಾಗಿದೆ.

2.25 ಜಿಬಿ ರ್ಯಾಮ್ ಮತ್ತು 16 ಜಿಬಿ ಸಂಗ್ರಹ ಸಾಮರ್ಥ್ಯ, ಕ್ವಾಡ್–ಕೋರ್ ಪ್ರೊಸೆಸರ್ ಹೊಂದಿದೆ. ಆ್ಯಂಡ್ರಾಯ್ಡ್ 9.0 ಆಪರೇಟಿಂಗ್ ಸಿಸ್ಟಮ್ನ ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಆ್ಯಂಡ್ರಾಯ್ಡ್ ಟಿವಿ ಪ್ಲೇ ಸ್ಟೋರ್ ಮೂಲಕ ಆ್ಯಪ್ಗಳ ಬಳಕೆಗೆ ಅವಕಾಶವಿದೆ.

ಟಿವಿ ಸುರಕ್ಷತೆಗೆ ಸಂಬಂಧಿಸಿದ ಸ್ಕೀಮ್ನ್ನು ಫ್ಲಿಪ್ಕಾರ್ಟ್ ₹999ಕ್ಕೆ ಒದಗಿಸುತ್ತಿದೆ. ಆಕಸ್ಮಿಕವಾಗಿ ಟಿವಿಗೆ ಉಂಟಾಗುವ ಅಪಾಯ ಮತ್ತು ತಯಾರಿಕೆಯಲ್ಲಿ ಆಗಿರುವ ಲೋಪಗಳಿಗೆ 3 ವರ್ಷದ ವರೆಗೂ ಭದ್ರತೆ ಹಾಗೂ ಮೂರು ವರ್ಷಗಳ ನಂತರ ಟಿವಿ ಮರು ಖರೀದಿಗೆ ನಿಗದಿತ ಬೆಲೆನೀಡುವುದನ್ನು ಸ್ಕೀಮ್ ಒಳಗೊಂಡಿರಲಿದೆ. ಎಂಇಎಂಸಿ(Motion Estimation, Motion Compensation) ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಅತ್ಯುತ್ತಮ ವೀಕ್ಷಣೆಯ ಅನುಭವ ಪಡೆಯಬಹುದಾಗಿದೆ.

ಫ್ಲಿಪ್ಕಾರ್ಟ್ ದೇಶದಲ್ಲಿ ಹೊಸ ಸ್ಮಾರ್ಟ್ ಟಿವಿಗಳ ಬಿಡುಗಡೆಗೆ ವೇದಿಕೆಯಾಗುತ್ತಿದ್ದು, ಇತ್ತೀಚೆಗೆ ಮೋಟೊರೋಲಾ ಬ್ರ್ಯಾಂಡ್ನ ಸ್ಮಾರ್ಟ್ ಟಿವಿ ಅನಾವರಣಗೊಳಿಸಿತ್ತು. 32 ಇಂಚು, 43, 50, 55 ಹಾಗೂ 65 ಇಂಚಿನ ಮೋಟೊರೋಲಾ ಟಿವಿಗಳು ಲಭ್ಯವಿದ್ದು, ಬೆಲೆ ₹13,999 ರಿಂದ ₹64,999 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.