ಬೆಂಗಳೂರು: ಪಿಟ್ರಾನ್ ಕಂಪನಿಯು ಹಬ್ಬದ ಋತುವನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ಮಾರುಕಟ್ಟೆಗೆ ವಯರ್ಲೆಸ್ ಮಿನಿ ಸ್ಪೀಕರ್ ‘ಮ್ಯೂಸಿಕ್ಬಾಟ್ ಲೈಟ್’ ಮತ್ತು ‘ಬಾಸ್ಬಡ್ಸ್ ಸ್ಪೋರ್ಟ್ಸ್ ವಿ2 ಟಿಡಬ್ಲ್ಯುಎಸ್’ ಇಯರ್ ಬಡ್ಸ್ ಬಿಡುಗಡೆ ಮಾಡಿದೆ.

ಈ ಎರಡೂ ಉತ್ಪನ್ನಗಳು ಅಮೆಜಾನ್ ಇಂಡಿಯಾದಲ್ಲಿ ಗುರುವಾರದಿಂದಲೇ ಖರೀದಿಗೆ ಲಭ್ಯ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯೂಸಿಕ್ಬಾಟ್ ಲೈಟ್ನ ಆಡಿಯೊ ಗುಣಮಟ್ಟ ಉತ್ತಮವಾಗಿದೆ. 5ಡಬ್ಲ್ಯು ಸ್ಪೀಕರ್ ಮತ್ತು 1,200 ಎಂಎಎಚ್ ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಆರು ಗಂಟೆಯವರೆಗೆ ತಡೆರಹಿತವಾಗಿ ಸಂಗೀತ ಕೇಳಬಹುದು ಎಂದು ಕಂಪನಿಯು ಹೇಳಿದೆ.

ಬಾಸ್ಬಡ್ಸ್ ಸ್ಪೋರ್ಟ್ಸ್ ವಿ2 ಇಯರ್ಬಡ್ಸ್, ಸಂಗೀತ ಕೇಳುವ ಅನುಭವವನ್ನು ಇನ್ನಷ್ಟು ಆರಾಮದಾಯಕ ಆಗಿಸುತ್ತದೆ. 48 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಇಯರ್ ಬಡ್ಸಸ್ ಐಪಿಎಕ್ಸ್4 ರೇಟಿಂಗ್ ಹೊಂದಿದೆ.

ಬೆಲೆ: ಮ್ಯೂಸಿಕ್ಬಾಟ್ ಲೈಟ್ ಬೆಲೆ ₹1,600. ಬಿಡುಗಡೆಯ ವಿಶೇಷ ದರ ₹499. ಬಾಸ್ಬಡ್ಸ್ ಸ್ಪೋರ್ಟ್ಸ್ ವಿ2 ಇಯರ್ಬಡ್ಸ್ ಬೆಲೆ ₹3,199, ಬಿಡುಗಡೆಯ ವಿಶೇಷ ಬೆಲೆ ₹799 ಆಗಲಿದೆ ಎಂದು ಕಂಪನಿಯು ತಿಳಿಸಿದೆ.

ಈ ಬಾರಿಯ ಹಬ್ಬದ ಮಾರಾಟವು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಉತ್ತಮವಾಗಿ ಇರುವ ನಿರೀಕ್ಷೆ ಇದೆ. ಈ ಎರಡು ಹೊಸ ಉತ್ಪನ್ನಗಳು ನಮ್ಮ ಮಾರುಕಟ್ಟೆ ಪಾಲನ್ನು ಇನ್ನಷ್ಟು ಹೆಚ್ಚಿಸುವ ವಿಶ್ವಾಸ ಇದೆ. ಇನ್ನೂ ಕೆಲವು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಕಂಪನಿಯ ಸ್ಥಾಪಕ ಅಮೀನ್ ಖ್ವಾಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.