ನವದೆಹಲಿ: ಬಾಹ್ಯ ಗೌಜು–ಗದ್ದಲ ಕೇಳಿಸದಂತಹ ನೈಜ ವೈರ್ಲೆಸ್ ಇಯರ್ಬಡ್ ಡಬ್ಲ್ಯುಎಫ್–ಎಲ್ಎಸ್900ಎನ್ (WF-LS900N) ‘ಅರ್ಥ್ ಬ್ಲ್ಯೂ’ (Earth Blue) ಹೆಸರಿನ ಹೊಸ ಬಣ್ಣದಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಸೋನಿ ಕಂಪನಿಯು ಪ್ರಕಟಿಸಿದೆ.

ಮರುಬಳಕೆಯ ನೀರಿನ ಬಾಟಲಿಗಳಿಂದ ಉತ್ಪತ್ತಿಯಾಗುವ ಮರುಬಳಕೆಯ ಅಂಟಿನ ಪದಾರ್ಥ ಬಳಸಿ ತಯಾರಿಸಿರುವ ಡಬ್ಲ್ಯುಎಫ್–ಎಲ್ಎಸ್900ಎನ್ , ‘ಅರ್ಥ್ ಬ್ಲ್ಯೂ’ ಬಣ್ಣದಲ್ಲಿ ಲಭ್ಯ ಇರಲಿದೆ.

ಈ ಇಯರ್ಬಡ್ನ ಬಿಡಿ ಭಾಗಗಳು ಮತ್ತು ಡಬ್ಲ್ಯುಎಫ್–ಎಲ್ಎಸ್900ಎನ್ ಪುಟ್ಟ ಪೆಟ್ಟಿಗೆಯನ್ನು ಮರುಬಳಕೆಯ ನೀರಿನ ಬಾಟಲ್ನ ಪದಾರ್ಥಗಳಿಂದ ತಯಾರಿಸಲಾಗಿದೆ. ಇದು ವಿಶಿಷ್ಟ ಬಗೆಯ ಅಮೃತಶಿಲೆಯ ಮಾದರಿ ಒದಗಿಸುತ್ತದೆ. ನೀರಿನ ಬಾಟಲಿಗಳಿಂದ ಮರುಬಳಕೆಯ ಪದಾರ್ಥಗಳ ಸಂಭಾವ್ಯ ಬಳಕೆ ಹೆಚ್ಚಿಸುವ ಗುರಿಯೊಂದಿಗೆ ಹೊಸ ವಿನ್ಯಾಸ ಅಭಿವೃದ್ಧಿಪಡಿಸುವ ಅನ್ವೇಷಣೆಯಲ್ಲಿ ಇದನ್ನು ಮೂಲತಃ ಸೋನಿ ಕಂಪನಿಯೇ ಅಭಿವೃದ್ಧಿಪಡಿಸಿದೆ.

ನೀರಿನ ಬಾಟಲ್ಗಳ ಮರುಬಳಕೆಯ ಪದಾರ್ಥಗಳ ಅಂಟಿಕೊಳ್ಳುವ ಗುಣಲಕ್ಷಣಗಳ ಪ್ರಯೋಜನ ಪಡೆಯುವ ಮೂಲಕ ಈ ಉತ್ಪನ್ನಕ್ಕಾಗಿಯೇ ವಿಶಿಷ್ಟ ಪದಾರ್ಥವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಅಮೃತಶಿಲೆಯ ಮಾದರಿಯ ವಿನ್ಯಾಸವನ್ನು ನಂತರ ರೂಪಿಸಲಾಗಿದೆ. ಪ್ರತಿ ಉತ್ಪನ್ನವು ವಿಭಿನ್ನ ಮಾದರಿ ಒಳಗೊಂಡಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಡಬ್ಲ್ಯುಎಫ್–ಎಲ್ಎಸ್900ಎನ್,– ಮಲ್ಟಿಪಾಯಿಂಟ್ ಸಂಪರ್ಕ ಕಾರ್ಯ ಸಕ್ರಿಯಗೊಳಿಸಲು ಸಾಫ್ಟ್ವೇರ್ ಅಪ್ಡೇಟ್ ಅನ್ನು ಸಹ ಸ್ವೀಕರಿಸಲಿದೆ. ಇದು ಬಳಕೆದಾರರಿಗೆ ಏಕ ಕಾಲಕ್ಕೆ ಎರಡು ಸಾಧನಗಳಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನಲ್ಲಿ ಸಂಗೀತ ಪ್ಲೇ ಮಾಡುತ್ತಿದ್ದರೆ ಮತ್ತು ನಿಮ್ಮ ಸ್ಮಾರ್ಟ್ಫೋನ್, ಕರೆ ಸ್ವೀಕರಿಸಿದರೆ, ಅದು ಸ್ವಯಂಚಾಲಿತವಾಗಿ ಸ್ಮಾರ್ಟ್ಫೋನ್ ಕರೆಗೆ ಬದಲಾಗುತ್ತದೆ ಮತ್ತು ನೀವು ಸಂಪರ್ಕಗಳನ್ನು ಬದಲಾಯಿಸದೆಯೇ ಹ್ಯಾಂಡ್ಸ್-ಫ್ರೀ ಕರೆ ಮಾಡಬಹುದು.

‘ಅರ್ಥ್ ಬ್ಲ್ಯೂ’ ಬಣ್ಣದಲ್ಲಿರುವ ಡಬ್ಲ್ಯುಎಫ್–ಎಲ್ಎಸ್900ಎನ್ , 2023ರ ಮೇ 17 ರಿಂದ ಭಾರತದಲ್ಲಿ ಅಮೆಜಾನ್ (Amazon) ತಾಣದಲ್ಲಿ ಮಾತ್ರ ಲಭ್ಯ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.