ಬೆಂಗಳೂರು: ಆಂಬ್ರೇನ್ ಇಂಡಿಯಾ ಕಂಪನಿಯು ಯುವ ಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು (ಜೆನ್ ಜೆಡ್) ‘ಮಾರ್ಬಲ್’ (Ambrane Marble) ಎಂಬ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಇದರ ಎಂಆರ್‌ಪಿ ₹2,799 ಇದ್ದು, ಬಿಡುಗಡೆಯ ವಿಶೇಷ ಕೊಡುಗೆಯ ಭಾಗವಾಗಿ ₹1,999ರ ಬೆಲೆಗೆ ಫ್ಲಿಪ್‌ಕಾರ್ಟ್ ಮತ್ತು ಆಂಬ್ರೇನ್ ಜಾಲತಾಣದಲ್ಲಿ ಖರೀದಿಗೆ ಲಭ್ಯವಿದೆ.

ಮೆಟಾಲಿಕ್ ಬ್ಲಾಕ್, ಬ್ಲಾಕ್, ಗ್ರೀನ್, ಆಲ್ಪೈನ್ ಗ್ರೀನ್ ಮ್ಯಾಗ್ನೆಟಿಕ್ ಮತ್ತು ಬ್ರೌನ್ ಬಣ್ಣಗಳಲ್ಲಿ ಲಭ್ಯವಿದೆ. 1.43 ಅಮೊಎಲ್‌ಇಡಿ ಪರದೆ, 466*466 ಸ್ಕ್ರೀನ್ ರೆಸಲ್ಯೂಷನ್ ಹೊಂದಿದ್ದು, ಸೂರ್ಯನ ಬೆಳಕಿನಲ್ಲಿಯೂ ವಾಚ್‌ನ ಪರದೆಯಲ್ಲಿನ ಮಾಹಿತಿಗಳು ಸ್ಪಷ್ಟವಾಗಿ ಕಾಣಿಸುತ್ತವೆ. 1000 ನಿಟ್ಸ್ ಬ್ರೈಟ್‌ನೆಸ್, 60 ಹರ್ಟ್ಸ್ ರಿಫ್ರೆಷ್ ರೇಟ್ಸ್, 2.5ಡಿ ಕಾರ್ವ್ಡ್ ಗ್ಲಾಸ್ ಒಳಗೊಂಡಿದೆ ಎಂದು ಕಂಪನಿ ಹೇಳಿದೆ.

ಹಾರ್ಟ್ ರೇಟ್ ಮಾನಿಟರ್, ವೆದರ್, ಬ್ಲಡ್ ಫ್ರೆಷರ್, ರಿಮೈಂಡ್ ಟು ಡ್ರಿಂಕ್, ರಿಮೈಂಡ್ ಟು ಮೂವ್, ಸ್ಟಾಪ್‌ವಾಚ್, ಮ್ಯೂಸಿಕ್ ಕಂಟ್ರೊಲ್, ಬ್ರೈಟ್‌ನೆಸ್ ಅಡ್ಜೆಸ್ಟ್‌ಮೆಂಟ್, ಡುನಾಟ್ ಡಿಸ್ಟರ್ಬ್ ಹೀಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 100ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳೂ ಇದರಲ್ಲಿವೆ. ಬ್ಲುಟೂತ್ ಕಾಲಿಂಗ್ ಸೌಲಭ್ಯಕ್ಕಾಗಿ ಇನ್‌ಬಿಲ್ಟ್ ಮೈಕ್, ಸ್ಪೀಕರ್ ಮತ್ತು ಡಯಲರ್ ವ್ಯವಸ್ಥೆ ಇದೆ. ಸ್ಮಾರ್ಟ್‌ವಾಚ್ ಮೂಲಕವೇ ಕರೆ ಸ್ವೀಕರಿಸುವ ಮತ್ತು ಮಾಡುವುದು ಸುಲಭವಾಗಿದೆ. ಕ್ವಿಕ್ ರಿಪ್ಲೇ, ಇನ್‌ಬಿಲ್ಟ್ ಗೇಮ್ ಮತ್ತು ವಾಯ್ಸ್ ಅಸಿಸ್ಟಂಟ್ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ 7 ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ನೀರಿನಿಂದ ರಕ್ಷಣೆ ಒದಗಿಸಲು ಐಪಿ68 ರೇಟಿಂಗ್ಸ್ ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.