ಬೆಂಗಳೂರು: ಮಂಗಳ ಗ್ರಹದ ನಿಗೂಢ ಚಂದ್ರನೆಂದೇ ಹೇಳಲಾಗುವ ಫೋಬೊಸ್‌ನ ಇತ್ತೀಚಿನ ಚಿತ್ರಗಳು ಭಾರತದ ಮಾರ್ಸ್ ಆರ್ಬಿಟರ್ ಮಿಷನ್‌ನ (ಎಂಒಎಂ) ಕ್ಯಾಮೆರಾವೊಂದರಲ್ಲಿ ಸೆರೆಯಾಗಿವೆ.

ಮಂಗಳ ಗ್ರಹದ ಎರಡು ಉಪಗ್ರಹಗಳಲ್ಲಿ ಫೋಬೊಸ್ ಒಂದಾಗಿದ್ದು, ಜುಲೈ 1ರಂದು ಅತಿದೊಡ್ಡ ಚಂದ್ರನೆಂದೇ ಗುರುತಿಸ್ಪಡುವ ಫೋಬೋಸ್ ಅನ್ನು ಚಿತ್ರಿಸುವಲ್ಲಿ ಎಂಒಎಂನ ಬಣ್ಣದ ಕ್ಯಾಮರಾ ಯಶಸ್ವಿಯಾಗಿದೆ.

ಮಂಗಳದಿಂದ 7200 ಕಿ.ಮೀ ಮತ್ತು ಫೋಬೋಸ್‌ನಿಂದ 4200 ಕಿ.ಮೀ ದೂರದಲ್ಲಿದ್ದಾಗ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ಸಂಸ್ಥೆ ಸ್ಪಷ್ಟಪಡಿಸಿದೆ.

ಇದು 6 ಎಂಸಿಸಿ ಫ್ರೇಮ್‌ಗಳಿಂದ ಉತ್ಪತ್ತಿಯಾದ ಸಂಯೋಜಿತ ಚಿತ್ರವಾಗಿದ್ದು, 210 ಮೀ ರೆಸಲ್ಯೂಶನ್ ಹೊಂದಿದೆ. ಇದರ ಬಣ್ಣವನ್ನು ಸರಿಪಡಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಫೋಬೋಸ್ ಹೆಚ್ಚಾಗಿ ಕಾರ್ಬೊನೇಸಿಯಸ್ ಕೊಂಡ್ರೈಟ್‌ಗಳಿಂದ ಕೂಡಿದೆ ಎಂದು ನಂಬಲಾಗಿದೆ.

ಫೋಬೊಸ್ ಎದುರಿಸಿದ ಹಿಂದಿನ ಘರ್ಷಣೆಯು (ಸ್ಟಿಕ್ನಿ ಕುಳಿ) ಈ ಚಿತ್ರಗಳಲ್ಲಿ ದೊಡ್ಡದಾಗಿ ಕಂಡುಬಂದಿದೆ.

ಸ್ಟಿಕ್ನಿ ಫೋಬೊಸ್‌ನ ಅತಿದೊಡ್ಡ ಕುಳಿಯಾಗಿದ್ದು, ಇತರ ಕುಳಿಗಳಾದ ಶ್ಕ್ಲೋವಸ್ಕಿ, ರೋಚೆ ಮತ್ತು ಗ್ರಿಲ್‌ಡ್ರಿಗ್‌ಗಳನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.