ಟೋಕಿಯ: ಜಪಾನಿನ ‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯ ಕ್ಯಾಪ್ಸೂಲ್‌ಅನ್ನು (ಗಗನನೌಕೆ) ಆಸ್ಟ್ರೇಲಿಯಾದಿಂದ ಜಪಾನ್‌ಗೆ ಮಂಗಳವಾರ ತರಲಾಯಿತು.

ಕ್ಷುದ್ರಗ್ರಹಗಳ ಮಣ್ಣು, ಕಲ್ಲುಗಳಂಥ ಮಾದರಿಗಳನ್ನು ಹೊತ್ತುತಂದಜಪಾನಿನ ‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯ ಕ್ಯಾಪ್ಸೂಲ್ ಆಸ್ಪ್ಟ್ರೇಲಿಯಾದಲ್ಲಿ ಭೂ ಸ್ಪರ್ಶಿಸಿತ್ತು.

ಈ ಕ್ಯಾಪ್ಸೂಲ್ ಮಂಗಳವಾರ ವಿಮಾನದ ಮೂಲಕ ಆಸ್ಟ್ರೇಲಿಯಾದಿಂದ ಜಪಾನಿಗೆ ತರಲಾಗಿದೆ. ಕ್ಷುದ್ರಗ್ರಹಗಳ ಮಾದರಿಯನ್ನು ಎಚ್ಚಕೆರಿಯಿಂದ ಕಂಟೇನರ್‌ನಲ್ಲಿ ಸಂಗ್ರಹಿಸಲಾಗಿದೆ. ಅದನ್ನು ಬಿಗಿಯಾಗಿ ಮುಚ್ಚಲಾಗಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜೆಎಇಎ) ತಿಳಸಿದೆ.

‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯು ಶನಿವಾರ 2,20,000 ಕಿ.ಮೀ. ದೂರದಲ್ಲಿ ಕ್ಯಾಪ್ಸೂಲ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿ, ಭೂಮಿಯತ್ತ ಕಳುಹಿಸಿತ್ತು.

ಟೋಕಿಯಾದಲ್ಲಿರುವ ಜೆಎಇಎ ಸಂಶೋಧನಾ ಕೇಂದ್ರಕ್ಕೆ ಕ್ಷುದ್ರಗ್ರಹದ ಮಾದರಿಯನ್ನು ಒಳಗೊಂಡ ಪೆಟ್ಟಿಗೆಯನ್ನು ಕಳುಹಿಸಲಾಗಿದೆ.

ಜಪಾನ್ 2014ರಲ್ಲಿ ‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಇದು ಕಳೆದ ವರ್ಷ ಎರಡು ಬಾರಿ ರ‍್ಯುಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.