ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇದೇ 7ರಂದು ತನ್ನ ಅತಿ ಸಣ್ಣ ವಾಣಿಜ್ಯ ರಾಕೆಟ್ ಎಸ್ಎಸ್ಎಲ್ವಿಯ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಿಗ್ಗೆ 9.18ಕ್ಕೆ ಎಸ್ಎಸ್ಎಲ್ವಿ ಡಿ-1 ರಾಕೆಟ್ ಗಗನಕ್ಕೆ ಚಿಮ್ಮಲಿದೆ. 13.2 ನಿಮಿಷಗಳ ಪಯಣದ ನಂತರ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಇಸ್ರೊದ ಅತೀ ಕಡಿಮೆ ವೆಚ್ಚದ, ಎಸ್ಎಸ್ಎಲ್ವಿ ತನ್ನ ಮೊದಲ ಉಡಾವಣೆಯಲ್ಲಿ 145 ಕೆ.ಜಿ ತೂಕದ, ಭೂವೀಕ್ಷಣೆ-2 ಉಪಗ್ರಹ ಮತ್ತು 8 ಕೆ.ಜಿ ತೂಕದ ಕ್ಯೂಬ್ಸ್ಯಾಟ್ (ಅಜಾದಿಸ್ಯಾಟ್) ಉಪಗ್ರಹವನ್ನು ಇದು ಕಕ್ಷೆಗೆ ಕೊಂಡೊಯ್ಯಲಿದೆ. ಈ ಉಪಗ್ರಹವನ್ನು 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ದೇಶದಾದ್ಯಂತ ಸರ್ಕಾರಿ ಶಾಲೆಗಳ ಆಯ್ದ 750 ವಿದ್ಯಾರ್ಥಿನಿಯರು ಸೇರಿ ವಿನ್ಯಾಸಗೊಳಿಸಿದ್ದರು.

34 ಮೀಟರ್ ಎತ್ತರ ಮತ್ತು 2 ಮೀಟರ್ ಸುತ್ತಳತೆಯ ಸಣ್ಣ ಉಪಗ್ರಹ ಉಡಾವಣಾ ವಾಹಕವು ಇಸ್ರೊದ ಪ್ರಮುಖ ರಾಕೆಟ್ ಪಿಎಸ್ಎಲ್ವಿಗಿಂತ 10 ಮೀಟರ್ ಚಿಕ್ಕದು, 500 ಕೆ.ಜಿಯವರೆಗಿನ ಭಾರದ ಉಪಗ್ರಹವನ್ನು 500 ಕಿ.ಮೀ ಕಕ್ಷೆಗೆಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.