ಬೆಂಗಳೂರು: ಗಗನಯಾತ್ರಿಗಳನ್ನು ಒಳಗೊಂಡ 'ಗಗನಯಾನ'ಕ್ಕೂ ಮುನ್ನ ಇಸ್ರೊ ಮಾನವ ರಹಿತ ಗಗನಯಾತ್ರೆಗೆ 'ರೊಬೋಟ್ ಮಹಿಳೆ'ಯನ್ನು ಕಳುಹಿಸಲು ಸಿದ್ಧತೆ ನಡೆಸಿದೆ.

ಬುಧವಾರ ನಡೆದ 'ಮಾನವ ಗಗನಯಾನ ಮತ್ತು ಪರಿಶೋಧನೆ– ಪ್ರಸ್ತುತ ಸವಾಲುಗಳು ಮತ್ತು ಮುಂದಿನ ಒಲವು' ಕಾರ್ಯಕ್ರಮದ ಉದ್ಘಾಟನೆಯಲ್ಲಿ 'ವ್ಯೋಮಮಿತ್ರ' ರೊಬೋಟ್ ಪ್ರಮುಖ ಆಕರ್ಷಣೆಯಾಯಿತು. 2021ರ ಡಿಸೆಂಬರ್ಗೆ ಗಗನಯಾತ್ರಿಗಳ ಗಗನಯಾನ ನಡೆಯಲಿದ್ದು, ಅದನ್ನೂ ಮುನ್ನ 'ವ್ಯೋಮಮಿತ್ರ' ಬಾಹ್ಯಾಕಾಶ ಯಾನ ಕೈಗೊಳ್ಳಲಿದೆ.

ಸಂಸ್ಕೃತದ ವ್ಯೋಮ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳನ್ನು ಕೂಡಿಸಿ ರೊಬೋಟ್ಗೆ ವ್ಯೋಮಮಿತ್ರ ಎಂದು ನಾಮಕರಣ ಮಾಡಲಾಗಿದೆ. ಮಹಿಳಾ ರೊಬೋಟ್ ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ನೆರೆದವರಲ್ಲಿ ಅಚ್ಚರಿ ಉಂಟು ಮಾಡಿತು.

'ಹಲೋ.... ನಾನು ವ್ಯೋಮಮಿತ್ರ, ಮೊದಲ ಮಾನವ ರಹಿತ ಗಗನಯಾತ್ರೆ ಯೋಜನೆಗಾಗಿ ನನ್ನನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ನೀಡುವುದು ಹಾಗೂ ಜೀವ ರಕ್ಷಣ ಕಾರ್ಯಗಳಲ್ಲಿ ಸಹಕರಿಸುತ್ತೇನೆ. ಸ್ವಿಚ್ ಪ್ಯಾನಲ್ ಕಾರ್ಯ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಬಲ್ಲೆ...' ಎಂದು ರೊಬೋಟ್ ವಿವರ ನೀಡಿತು.

ಗಗನಯಾತ್ರಿಗಳಿಗೆ ಒಡನಾಡಿಯಂತೆ ವರ್ತಿಸಬಹುದಾದ ರೊಬೋಟ್, ಅವರನ್ನು ಗುರುತಿಸುವುದು ಹಾಗೂ ಅವರೊಂದಿಗೆ ಸಂಭಾಷಣೆ ನಡೆಸಬಲ್ಲದು. ಅವರು ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದೆ. 'ಮಾನವನಂತೆಯೇ ಕಾಣುವ ರೊಬೋಟ್ ಬಾಹ್ಯಾಕಾಶದಲ್ಲಿ ಮನುಷ್ಯ ರೀತಿಯೇ ಕಾರ್ಯ ನಿರ್ವಹಣೆಯನ್ನು ಅನುಕರಿಸುತ್ತದೆ' ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದರು.

ದೇಶದ ಮೊದಲ ಮಾನವ ಸಹಿತ ಗಗನಯಾತ್ರೆಗೂ ಮುನ್ನವೇ ಅಂದರೆ, 2020ರ ಡಿಸೆಂಬರ್ ಹಾಗೂ 2021ರ ಜೂನ್ನಲ್ಲಿ ಎರಡು ಬಾರಿ ಇಸ್ರೊ ಮಾನವ ರಹಿತ ಬಾಹ್ಯಾಕಾಶ ಯಾನ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.