ನವದೆಹಲಿ: ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪದಲ್ಲಿ ಕಾಣಿಸುತ್ತಿವೆ.

ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಪರಸ್ಪರ ಹಾದುಹೋಗಲಿವೆ. ಶನಿ ಮತ್ತು ಗುರು ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗುತ್ತವೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗುತ್ತಿರುವುದರಿಂದ ಈ ವಿದ್ಯಮಾನ ಗೋಚರಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಇದನ್ನು ‘ಮಹಾ ಸಂಯೋಗ’ ಎಂದೂ ಖಗೋಳ ವಿಜ್ಞಾನಿಗಳು ಕರೆದಿದ್ದಾರೆ.

ಉಭಯ ಗ್ರಹಗಳು ಅತ್ಯಂತ ಸಮೀಪದಲ್ಲಿ ಇರುವುದು ಯಾವ್ಯಾವ ದೇಶಗಳ ನಗರಗಳಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ ಎಂಬುದನ್ನು ಗ್ರಹ ಖಗೋಳಶಾಸ್ತ್ರಜ್ಞ ಡಾ. ಜೇಮ್ಸ್ ಒ'ಡೊನೊಘ್ಯೂ ಟ್ವೀಟ್ ಮಾಡಿದ್ದಾರೆ. ಕೆಲವೆಡೆ ನಾಳೆಯೂ (ಮಂಗಳ ವಾರ) ಗೋಚರಿಸಲಿದೆ.

* ಲಾಸ್ ಏಂಜಲೀಸ್ 9.43
* ನ್ಯೂಯಾರ್ಕ್ 12.43
* ರಿಯೋ ಡಿ ಜನೈರೊ – 2.43
* ಲಂಡನ್ – 5.43
* ಪ್ಯಾರಿಸ್ – 6.43
* ಇಸ್ತಾಂಬುಲ್ – 8.43
* ದುಬೈ – 9.43
* ನವದೆಹಲಿ – 11.13 (ರಾತ್ರಿ)
* ಟೋಕಿಯೊ – 2.43 (ಡಿಸೆಂಬರ್ 22ರ ಮುಂಜಾನೆ)
* ಸಿಡ್ನಿ – 04.43 (ಡಿಸೆಂಬರ್ 22ರ ಮುಂಜಾನೆ)

ಹೇಗೆ ನೋಡಬಹುದು?

ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’ವನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆಯೂ ನೋಡಬಹುದು. ಬಾಲ್ಕನಿ ಅಥವಾ ತಾರಸಿಯ ಮೇಲೆ ನಿಂತು ನೋಡಬಹುದು. ಕ್ಯಾಮರಾ ಇದ್ದರೆ ಉಭಯ ಗ್ರಹಗಳ ಸಾಮೀಪ್ಯವನ್ನು ಸೆರೆಹಿಡಿದಿಟ್ಟುಕೊಳ್ಳಬಹುದು. ಮೊಬೈಲ್ ಫೋನ್ ಕ್ಯಾಮರಾ ಮೂಲಕವೂ ಅಪರೂಪದ ವಿದ್ಯಮಾನವನ್ನು ಸೆರೆಹಿಡಿಯಬಹುದು.

ಇನ್ನಷ್ಟು...

ಖಗೋಳವಿಜ್ಞಾನ ಅಪರೂಪದ ವಿದ್ಯಮಾನ: ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’

ಗುರು, ಶನಿ ಗ್ರಹಗಳ ಅಪೂರ್ವ ಸಮಾಗಮ

21ರಂದು ಗುರು, ಶನಿಯ ಸಾಮೀಪ್ಯ ಗೋಚರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.