ಇತ್ತ ನಮ್ಮಲ್ಲಿ ಪ್ರತೀಕಾರ ಪ್ರವಾಸೋದ್ಯಮ ಉಕ್ಕೇರಿ ಹರಿದಂತೆ ಅತ್ತ ಪಶ್ಚಿಮದಲ್ಲಿ ಪ್ರತೀಕ್ಷೆಯಲ್ಲಿದ್ದ ಬಾಹ್ಯಾಕಾಶ ಪ್ರವಾಸೋದ್ಯಮವೂ (ಸ್ಪೇಸ್ ಟೂರಿಸಂ) ಗರಿ ಬಿಚ್ಚಿದೆ. ಹೆಸರೇ ಸೂಚಿಸುವ ಹಾಗೆ ಬಾಹ್ಯಾಕಾಶಕ್ಕೆ ಪ್ರವಾಸ ಹೋಗಬಯಸುವವರಿಗಾಗಿ ಮಾಡಿದ ವ್ಯವಸ್ಥೆ ಇದು. ವರ್ಜಿನ್ ಗೆಲಾಕ್ಟಿಕ್ ಕಂಪನಿಯ ಸ್ಥಾಪಕ ರಿಚರ್ಡ್ ಬ್ರಾನ್ಸನ್ ಕಳೆದ ವಾರ ಸ್ವತಃ ಬಾಹ್ಯಾಕಾಶದಲ್ಲಿ ಇಣುಕಿ ಬಂದರೆ, ಬ್ಲೂ ಒರಿಜಿನ್ ಕಂಪನಿಯ ಮಾಲೀಕ ಜೆಫ್ ಬೆಜೋಸ್, ‘ಮುಂದಿನ ವಾರ ಬಾಹ್ಯಾಕಾಶ ಪ್ರವೇಶಿಸಿ ಮರಳುವೆ’ ಎಂದು ಘೋಷಿಸಿದ್ದಾರೆ. ಖಾಸಗಿ ಕಂಪನಿಗಳು ವಿಮಾನದ ಟಿಕೆಟ್‌ಗಳಂತೆ ಬಾನ ಪ್ರವಾಸದ ಟಿಕೆಟ್‌ಗಳನ್ನು ಮಾರುವ ದಿನಗಳು ದೂರವಿಲ್ಲ.

ಬಾನಿನಲ್ಲಿ ತೇಲಾಡಿ ನೀಲಿ ಭೂಮಿಯನ್ನು ನೋಡಿ, ಕಿರು ಗುರುತ್ವದ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಓಲಾಡಿ ಬರುವ ಪ್ರವಾಸ ಅದು. ಹೊತ್ತೊಯ್ಯುವ ವಾಹನ ಬಹಳಷ್ಟು ಸವಾಲುಗಳನ್ನು ಎದುರಿಸಿ, ಅಪಾರ ಹಣವನ್ನೂ ವ್ಯಯಿಸಿ ತಯಾರಾಗಬೇಕಾದ ಕಾರಣ ಅದು ಸಹಜವಾಗಿಯೇ ಸದ್ಯಕ್ಕೆ ಸಿರಿವಂತರಲ್ಲಿ ಸಿರಿವಂತರಾಗಿರುವವರ ಸೊತ್ತಾಗಿದೆ. ರಿಚರ್ಡ್ ಬ್ರಾನ್ಸನ್, ಜೆಫ್ ಬೆಜೋಸ್ ಹಾಗೂ ಈಗಾಗಲೇ ಹೆಸರು ಮಾಡಿರುವ ಖಾಸಗಿ ಕಂಪನಿ ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ಈ ಮೂವರೂ ಕೋಟ್ಯಧಿಪತಿಗಳೇ. ಮೂರು ದಿನಗಳ ತರಬೇತಿ ಪಡೆದು ಹಾರಹೊರಟಿರುವ, ಈಗಾಗಲೇ ಆರುನೂರು ಸೀಟುಗಳು ಭರ್ತಿಯಾಗಿರುವ ವರ್ಜಿನ್ ಗೆಲಾಕ್ಟಿಕ್ ಕಂಪನಿಯ 90 ನಿಮಿಷ ಪಯಣದ ಮುಂದಿನ ಬಾನಗಾಡಿಗಳ ಒಂದೊಂದೂ ಸೀಟಿನ ದರ ಎಷ್ಟು ಗೊತ್ತೆ? ಬರೋಬ್ಬರಿ ಎರಡೂವರೆ ಲಕ್ಷ ಡಾಲರ್ – ಅಂದರೆ ಹತ್ತಿರ ಹತ್ತಿರ ಎರಡು ಕೋಟಿ ರೂಪಾಯಿ!

ಭೂಮಿಯ ಆಚೆ 300 ಕಿ.ಮೀ. ಆಸುಪಾಸಿನಲ್ಲಿ ಹಾರಾಟ ನಡೆಸಿರುವ ನೌಕೆ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’ (ಐಎಸ್‌ಎಸ್) ಪ್ರವಾಸ ಮತ್ತು ಅಧ್ಯಯನಕ್ಕೆ ನೆಚ್ಚಿನ ತಾಣವಾಗಿದೆ. 2001ರಲ್ಲಿ ಅಮೆರಿಕದ ಡೆನಿಸ್ ಟಿಟೊ ಎನ್ನುವ ವ್ಯಾಪಾರಿ ರಷ್ಯಾದ ಮನವೊಲಿಸಿ ತಾನೇ ಹಣ ಹಾಕಿ ಸೋಯುಝ್ ನೌಕೆಯಲ್ಲಿ ಕುಳಿತು ಐಎಸ್‌ಎಸ್‌ಅನ್ನು ತಲುಪಿ ಅಲ್ಲಿ ಆರು ದಿನ ತಂಗಿದ್ದು, ಬಳಿಕ ಮರಳಿದ್ದ. ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ಪ್ರವಾಸಿಗ ಆತ.

ಭೂಮಿಯ ಸುತ್ತಲ ಸುಮಾರು ನೂರು ಕಿ.ಮೀ. ಎತ್ತರದ ಬಾನ ಪರಿಧಿಯ ಆಚೆಗಿನ ವಿಶ್ವವನ್ನು ಸಾಮಾನ್ಯವಾಗಿ ವಿಜ್ಞಾನಿಗಳು ಬಾಹ್ಯಾಕಾಶ ಎನ್ನುವುದಾದರೂ 80 ಕಿ.ಮೀ. ವೃತ್ತದ ಆಚೆ ಭೂಮಿಯ ಗುರುತ್ವದ ಪ್ರಭಾವವೂ, ವಾತಾವರಣದ ವಾಯು ಪ್ರಮಾಣವೂ ಗಣನೀಯವಾಗಿ ಕಡಿಮೆ ಆಗುವುದರಿಂದ ಅಲ್ಲಿಂದಲೇ ಬಾಹ್ಯಾಕಾಶದ ಬೌಂಡರಿ ಎನ್ನೋಣ ಎಂದು ಅಮೆರಿಕದ ನಾಸಾ ಹಾಗೂ ಇತರ ಕೆಲವು ಸಂಸ್ಥೆಗಳ ಖಗೋಳ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

1984ರಲ್ಲಿ ರೊನಾಲ್ಡ್ ರೀಗನ್ ಆಡಳಿತದಡಿಯಲ್ಲಿ ಭವಿಷ್ಯದ ಖಗೋಳಾಸಕ್ತರನ್ನು ಸಿದ್ಧಪಡಿಸಲು ಶಿಕ್ಷಕರನ್ನು ಮೊದಲು ತಯಾರುಗೊಳಿಸಬೇಕು ಎಂಬ ಆಶಯದಲ್ಲಿ ‘ಟೀಚರ್ ಇನ್ ಸ್ಪೇಸ್’ ಯೋಜನೆಯಲ್ಲಿ ಕ್ರಿಸ್ಟಾ ಮೆಕಲಿಫ್ ಎಂಬ ಶಿಕ್ಷಕಿಯನ್ನು (ಆಕೆ ಗಗನಯಾನ ತಜ್ಞೆಯೂ ಆಗಿದ್ದರು) ಕೊಲಂಬಿಯ ಬಾನನೌಕೆಯಲ್ಲಿ ಮೊಟ್ಟಮೊದಲ ಬಾರಿ ಬಾಹ್ಯಬಾನಿನ ವೀಕ್ಷಣೆಗೆಂದು ನಾಸಾ ಕಳುಹಿಸಿತ್ತು. ಜೊತೆಜೊತೆಗೇ ಮುಂದೆ ಬಾನಿಗೆ ಕಳುಹಿಸಬೇಕಾದವರ ಪಟ್ಟಿಯನ್ನೂ ತಯಾರಿಸಿತ್ತು. ಆದರೆ ಮರಳಿ ಬರುವಾಗ ಕೊಲಂಬಿಯ ನೌಕೆ ಅವಘಡಕ್ಕೀಡಾಗಿ ಭಸ್ಮಗೊಂಡಾಗ ನಾಸಾದ ಚರಿತ್ರೆಯಲ್ಲಿ ಕಪ್ಪುಚುಕ್ಕೆ ಉಂಟಾಗಿ ಅದರ ಮುಂದಿನ ಸ್ಪೇಸ್ ಶಟಲ್‌ಗಳ ಹೆಚ್ಚಿನ ಕಾರ್ಯಗಳೆಲ್ಲವೂ ರದ್ದುಗೊಂಡವು.

ಅದೇ ಸಮಯಕ್ಕೆ ಖಾಸಗಿ ವಲಯದಿಂದ ಬಾಹ್ಯಾಕಾಶ ಉದ್ಯಮಕ್ಕೆ ಪದಾರ್ಪಣೆ ಮಾಡಿದ್ದು ಅಮೆರಿಕದ ಎಲಾನ್ ಮಸ್ಕ್ ಅವರ ಖಾಸಗಿ ಕಂಪನಿ ಸ್ಪೇಸ್ ಎಕ್ಸ್. ಅದು ತಯಾರಿಸಿದ ಫಾಲ್ಕನ್ ರಾಕೆಟ್‌ಗಳು ಉಡ್ಡಯನ ವಾಹನಗಳಾದರೆ, ಡ್ರಾಗನ್ ಕ್ಯಾಪ್ಸೂಲ್ ನೌಕೆ ಐಎಸ್‌ಎಸ್‌ಗೆ ತಂತ್ರಜ್ಞರನ್ನು ಮತ್ತು ಸಾಮಾನು-ಸರಂಜಾಮುಗಳನ್ನು ನಾಸಾದಿಂದ ಒಯ್ಯುವ ಮರುಬಳಕೆಯ ವಾಹನವಾಯಿತು. 2021ರ ಕೊನೆಯಲ್ಲಿ ಸ್ಪೇಸ್ ಎಕ್ಸ್ ತಯಾರಿಸಿದ 230 ಅಡಿ ಎತ್ತರದ ಕ್ರ್ಯೂ ಡ್ರಾಗನ್ ಬಾನನೌಕೆಯಲ್ಲಿ ನಾಲ್ಕು ಪ್ರವಾಸಿಗರನ್ನು ಐಎಸ್‌ಎಸ್‌ಗಿಂತ ಎತ್ತರದ ಕಕ್ಷೆಯಲ್ಲಿ ಐದು ದಿನಗಳ ಕಾಲ ಭೂಪ್ರದಕ್ಷಿಣೆ ಮಾಡಿಸುವುದಾಗಿ ಸ್ಪೇಸ್ ಎಡ್ವೆಂಚರ್ ಎಂಬ ಬಾಹ್ಯಾಕಾಶ ಸಂಸ್ಥೆ ಹೇಳಿಕೊಂಡಿದೆ. ಮಂಗಳನಲ್ಲಿಗೆ ಮತ್ತೆ ಮತ್ತೆ ಪಯಣಿಗರನ್ನು ಕೊಂಡೊಯ್ಯಬಹುದಾದ ಮರುಬಳಕೆಯ ವಾಹನ ತಯಾರಿಕೆ ತನ್ನ ಮೂಲ ಉದ್ದೇಶ, ಅದಕ್ಕಾಗಿ ಇದೆಲ್ಲ ತಯಾರಿ ಎಂದಿದ್ದಾರೆ ಎಲಾನ್ ಮಸ್ಕ್.

ರಿಚರ್ಡ್ ಬ್ರಾನ್ಸನ್ ವರ್ಜಿನ್ ಗೆಲಾಕ್ಟಿಕ್ ಕಂಪನಿಯ ಒಡೆಯ. 17 ವರ್ಷಗಳಿಂದ ಮರುಬಳಕೆಯ ವಾಹನಕ್ಕೆಂದು ಸಂಶೋಧನೆಗಳು ನಡೆದು, ಈಗ ತನ್ನ 71ನೆಯ ವಯಸ್ಸಿನಲ್ಲಿ ಕಂಪನಿಯ ಆರು ಸಹವರ್ತಿಗಳೊಡನೆ (ಅವರಲ್ಲೊಬ್ಬಳು ಭಾರತೀಯ ಸಂಜಾತೆ ಶಿರೀಷಾ ಬಾಂಡ್ಲ) ಬಾನಿಗೆ 89 ಕಿ.ಮೀ. ಎತ್ತರಕ್ಕೆ ಹಾರಿ ಮರಳಿ ಸುರಕ್ಷಿತವಾಗಿ ಬಂದಿಳಿದಿದ್ದಾನೆ. ಯುನಿಟಿ 22 ವರ್ಜಿನ್ ಕಂಪನಿಯ ಬಾನಗಾಡಿಯ ಹೆಸರು. ಅವಳಿ ಜೆಟ್ ವಿಮಾನಗಳ ಹೆಗಲ ಮೇಲೇರಿ ಅದರ ಉಡ್ಡಯನ. ಬಾನಗಾಡಿ 15 ಕಿ.ಮೀ. ಎತ್ತರದಲ್ಲಿ (ಸಾಮಾನ್ಯ ವಿಮಾನಗಳ ಹಾರಾಟ ಸುಮಾರು 12 ಕಿ.ಮೀ. ಎತ್ತರದಲ್ಲಿ) ವಿಮಾನದಿಂದ ಕಳಚಿ, ಅದರ ರಾಕೆಟ್ ಎಂಜಿನ್‌ಗಳು ಉರಿದು ಅದು ಮೇಲೆ ನಭಕ್ಕೆ ಚಿಮ್ಮಿ ಭೂಮಿಯ ಹೊರಮೈನ ಬಾಗುವಿಕೆಯ ನೋಟವನ್ನೂ, ಕಿರುಗುರುತ್ವದ ಅನುಭವವನ್ನೂ ತೋರಿಸಿ ಮತ್ತೆ ಭೂಮಿಗೆ ಮರಳಿದೆ. ಅದು ಸಬ್ ಆರ್ಬಿಟಲ್ ಫ್ಲೈಟ್, ಅಂದರೆ ಭೂಮಿಯನ್ನು ಪ್ರದಕ್ಷಿಣೆ ಹಾಕದೆ ಗೋಲಾಕಾರದ ಪಥದಲ್ಲಿ ಮೇಲೆ ಸುಮಾರು 89 ಕಿ.ಮೀ. ಎತ್ತರದವರೆಗೆ ಹಾರಿ ಮರಳಿ ಭೂಮಿಯನ್ನು ಸೇರುವ ಯಾನ. 90 ನಿಮಿಷಗಳ ಹಾರಾಟ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ‘ನನ್ನ ಬಾಯಿಂದ ಏನು ಹೊರಬರುತ್ತದೋ ಗೊತ್ತಿಲ್ಲ, ಏಕೆಂದರೆ ನಾನಿನ್ನೂ ಬಾಹ್ಯಾಕಾಶದಲ್ಲಿ ಇದ್ದೇನೆ ಅನಿಸ್ತಾ ಇದೆ…’ ಎಂದು ಬ್ರಾನ್ಸನ್ ಉದ್ಗರಿಸಿದ್ದಾನೆ. ಯಶಸ್ವೀ ಹಾರಾಟದ ನಂತರ ವರ್ಜಿನ್ ಗೆಲಾಕ್ಟಿಕ್ ಕಂಪನಿಗೆ ಕಮರ್ಷಿಯಲ್ ಹಾರಾಟಕ್ಕೆ ಅಮೆರಿಕದ ವಾಯುಯಾನ ಇಲಾಖೆಯಿಂದ ಹಸಿರು ನಿಶಾನೆಯೂ ದೊರೆತಿದೆ.

2004ರಲ್ಲಿ ಸರ್ಕಾರೇತರ ಸಂಸ್ಥೆಯೊಂದು ಎರಡು ವಾರದೊಳಗೆ ಮರುಬಳಕೆಯ ಬಾನವಾಹನದ ಎರಡು ಉಡಾವಣೆಯ ಸವಾಲನ್ನೊಡ್ಡಿ ನೂರು ಲಕ್ಷ ಡಾಲರ್ ಮೊತ್ತದ ಅನ್ಸಾರಿ ಎಕ್ಸ್ ಬಹುಮಾನವನ್ನು ಘೋಷಿಸಿದಾಗ ಅದನ್ನು ಪಡೆದಿದ್ದು ಇದೇ ವರ್ಜಿನ್ ಗೆಲಾಕ್ಟಿಕ್‌ನ ಸ್ಪೇಸ್‌ಶಿಪ್ ಒನ್ ಹೆಸರಿನ ಬಾನಗಾಡಿ.

ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಮತ್ತೊಂದು ಪ್ರಮುಖ ಎಂಟ್ರಿ ಎಂದರೆ ಜೆಫ್ ಬ್ಲೇಝ್ ಒಡೆತನದ ಬ್ಲೂ ಒರಿಜಿನ್ ಕಂಪನಿ. ಇದುವರೆಗೆ ಭೂಬಾಹ್ಯ ಪ್ರಪಂಚಕ್ಕೆ ಹಾರಾಡುವ ಅದರ ಯೋಜನೆ ಯಶ ಪಡೆದಿಲ್ಲವಾದರೂ ಬರುವ ಜುಲೈ ಇಪ್ಪತ್ತಕ್ಕೆ ಸ್ವತಃ ಜೆಫ್ ತನ್ನ ಸೋದರ ಹಾಗೂ ಇತರ ಕೆಲವರೊಡನೆ ಬಾಹ್ಯಾಕಾಶದ ಅಂಚನ್ನು ತಲುಪಿ ಮರಳುವ ವಿಶ್ವಾಸ ಹೊಂದಿದ್ದಾರೆ. ನ್ಯೂಶಪರ್ಡ್ ಹೆಸರಿನ ರಾಕೆಟ್ಟಿನ ಅವರ ಪಯಣದಲ್ಲಿ ಜೊತೆಗೂಡುವವರಲ್ಲಿ ಒಬ್ಬರು 82 ವರ್ಷದ ಗಟ್ಟಿಮುಟ್ಟು ಮಹಿಳೆ ವ್ಯಾಲಿ ಫಂಕ್! ಈಕೆ ಹಿಂದೆ ನಾಸಾದಲ್ಲಿ ಉದ್ಯೋಗಿಯಾಗಿದ್ದು ಗಗನಯಾನಿಯಾಗಲು ಸಾಕಷ್ಟು ತರಬೇತಿ ಪಡೆದು ಪರಿಣತರಾಗಿದ್ದರೂ ಮಹಿಳೆ ಎಂಬ ಒಂದೇ ಕಾರಣಕ್ಕಾಗಿ ಹಾರಾಟಗಳಲ್ಲಿ ಪ್ರವೇಶ ವಂಚಿತರಾಗಿದ್ದವರು. 60 ಅಡಿ ಎತ್ತರದ ತಮ್ಮ ರಾಕೆಟ್ಟಿನಲ್ಲಿ 6 ಜನರು ಕುಳಿತುಕೊಂಡು ಹಾರಾಟ ಮಾಡಬಹುದು ಎಂದು ಜೆಫ್ ಕಳೆದ ವರ್ಷವೇ ಘೋಷಿಸಿದ್ದಾರೆ. ಅದಕ್ಕೆ ನೀವು ಒಂದು ದಿನದ ತರಬೇತಿಯಷ್ಟೇ ಪಡೆದರೆ ಸಾಕು ಎಂದಿದ್ದಾರೆ. ಅವರ ಪ್ರಯೋಗಾಲಯಗಳಲ್ಲಿ ಮುಂದೆ ಚಂದ್ರನಲ್ಲಿಗೆ ಹೋಗುವುದಕ್ಕೂ ಭರದಿಂದ ಸಂಶೋಧನೆಗಳು ನಡೆದಿವೆ.

ಪ್ರಸಕ್ತವಾಗಿ ಅಮೆರಿಕ ಮಾತ್ರವೇ ಬಾನ ಪಯಣದ ನಿಯಮಾವಳಿಗಳನ್ನು ಹೊಂದಿದ ರಾಷ್ಟ್ರವಾಗಿದೆ. ಅದು ರೂಪಿಸಿರುವ ನಿಯಮಗಳನ್ನು ಪಾಲಿಸುವ ಬಾನಗಾಡಿಗಳಿಗೆ ಮಾತ್ರವೇ ಹಾರಾಟಕ್ಕೆ ಅನುಮತಿ ದೊರೆಯುತ್ತದೆ.

ಬಾಹ್ಯಾಕಾಶ ಪ್ರವಾಸದಲ್ಲಿ ದುಡ್ಡು ಒಂದೇ ಮುಖ್ಯವಲ್ಲ. ಸುರಕ್ಷಿತವಾದ ರಾಕೆಟ್ ಉಡಾವಣೆಯೇ ಅತ್ಯಂತ ಸವಾಲಿನದು. ಹೊರ ಜಗತ್ತಿನಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಏರುಪೇರುಗಳು, ವಿಕಿರಣದ ಭಯ ಇವೆಲ್ಲವನ್ನು ಎದುರಿಸಲು ಪ್ರವಾಸಿಗರು ತಯಾರಿರಬೇಕಾಗುತ್ತದೆ. ವಿಜ್ಞಾನ ತಂತ್ರಜ್ಞಾನಗಳನ್ನು ಅತ್ಯದ್ಭುತವಾಗಿ ಬಳಸಿಕೊಂಡು ವಿಧವಿಧದ ಬಾನಗಾಡಿಗಳನ್ನು ತಯಾರಿಸುತ್ತಿರುವ ಸ್ಪೇಸ್ ಟೂರಿಸಂನ ಪ್ರಗತಿಯನ್ನು ಇದು ಮಾನವನ ಸಾಹಸ ಪ್ರವೃತ್ತಿಯೇ ಸೈ ಎಂದು ಅಚ್ಚರಿಯಿಂದ ನೋಡುತ್ತಿರುವವರು ಒಂದಿಷ್ಟು ಜನರಾದರೆ, ಅಲ್ಲಿ ವ್ಯಯವಾಗುವ ಅಪಾರ ಪ್ರಮಾಣದ ಸಂಪನ್ಮೂಲಗಳನ್ನು, ಕನಿಷ್ಠ ವಾಹನಗಳ ಸೌಕರ್ಯವೂ ಇಲ್ಲದ ಜನರಿಗೆ ಹಾಗೂ ಈ ಕೊರೊನಾ ಸಂಕಷ್ಟ ಕಾಲದಲ್ಲಿ ಇಲ್ಲಿ ಜನಪರ ಕಾರ್ಯಕ್ರಮಗಳಿಗೆ ಬಳಸಬಹುದಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸುವವರೂ ಇದ್ದಾರೆ. ಅಂದಹಾಗೆ, ನೀವು ಯಾರ ಪರ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.