ಕೇಪ್ ಕೆನವೆರಲ್ (ಅಮೆರಿಕ): ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ ಸುಮಾರು 40 ಉಪಗ್ರಹಗಳು ಕಕ್ಷೆಯಿಂದ ಪತನಗೊಂಡಿವೆ ಎಂದು ವರದಿಯಾಗಿದೆ.

ಕಳೆದ ವಾರ ಉಡಾವಣೆಗೊಂಡ 49 ಸಣ್ಣ ಉಪಗ್ರಹಗಳ ಪೈಕಿ 40ರಷ್ಟು ಉಪಗ್ರಹಗಳು ವಾತಾವರಣಕ್ಕೆ ಮರುಪ್ರವೇಶಿಸಿ ಸುಟ್ಟು ಹೋಗಿವೆ ಅಥವಾ ಪತನದ ಅಂಚಿನಲ್ಲಿವೆ ಎಂದು ಕಂಪನಿಯು ತಿಳಿಸಿದೆ.

ಇದನ್ನೂ ಓದಿ:100 ವರ್ಷಗಳ ಹಿಂದೆಯೇ ಪ್ಲೂಟೊ ಗ್ರಹದ ಸ್ಥಾನ ವಿವರ ಪ್ರಕಟಿಸಿದ್ದ ಧಾರವಾಡದ ಶಿಕ್ಷಕ

ಕಳೆದ ಶುಕ್ರವಾರ ಸೌರ ಮಾರುತದಿಂದ ಉಂಟಾದ ಭೂಕಾಂತೀಯ ಮಾರುತವುಸ್ಟಾರ್ಲಿಂಕ್ ಉಪಗ್ರಹಗಳನ್ನು ನಾಶಗೊಳಿಸಿದೆ ಎಂದು ಹೇಳಿದೆ.

ಈ ನಡುವೆ ಸ್ಪೇಸ್ ಎಕ್ಸ್ ಉಪಗ್ರಹಗಳನ್ನು ಸಂರಕ್ಷಿಸಲು ನಡೆಸಿದ ಎಲ್ಲ ಯತ್ನಗಳು ವಿಫಲಗೊಂಡಿವೆ.

ಭೂಮಿಯ ಕಕ್ಷೆಯಲ್ಲಿ ಸ್ಪೇಸ್ ಎಕ್ಸ್ ಇನ್ನೂ ಸುಮಾರು 2,000 ಸ್ಟಾರ್ ಲಿಂಕ್ ಉಪಗ್ರಹಗಳನ್ನು ಹೊಂದಿದೆ. ಅಲ್ಲದೆ ಪ್ರಪಂಚದ ಮೂಲೆ ಮೂಲೆಗೂ ಇಂಟರ್‌ನೆಟ್ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.

ಕಕ್ಷೆಯಲ್ಲಿ ಅಥವಾ ನೆಲದ ಮೇಲೆ ಬೀಳುವ ಉಪಗ್ರಹಗಳಿಂದ ಯಾವುದೇ ಅಪಾಯವಿಲ್ಲ. ಪ್ರತಿ ಉಪಗ್ರಹವು 260 ಕೆ.ಜಿಗಿಂತಲೂ ಕಡಿಮೆ ಭಾರವನ್ನು ಹೊಂದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.