ಕೇಪ್ ಕ್ಯಾನವೆರಲ್: ಸ್ಪೇಸ್ ಎಕ್ಸ್‌ನ ‘ಡ್ಯ್ರಾಗನ್’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ್ದು, ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ತಿಳಿಸಿದೆ.

ಇದೇ ವರ್ಷ ಜೂನ್‌ನಲ್ಲಿ ಬೋಯಿಂಗ್‌ನ ‘ಸ್ಟಾರ್ ಲೈನರ್’ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ಸುನಿತಾ ಮತ್ತು ಬುಚ್, ತಾಂತ್ರಿಕ ದೋಷದಿಂದ ಭೂಮಿಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿ ಒಂದು ವಾರದಲ್ಲೇ ಹಿಂತಿರುಗಬೇಕಾದ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು.

ಸುನಿತಾ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುವ ಕಾರ್ಯಾಚರಣೆ ಪ್ರಾರಂಭಿಸಿರುವ ನಾಸಾ ಮತ್ತು ಸ್ಪೇಸ್ ಎಕ್ಸ್, ಶನಿವಾರ ಕ್ರೂ-9 ಮಿಷನ್ ಪ್ರಾರಂಭಿಸಿತ್ತು. ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್ ಕೇಂದ್ರದಿಂದ ಸ್ಪೇಸ್ ಎಕ್ಸ್‌ನ ‘ಡ್ಯ್ರಾಗನ್’ ವ್ಯೋಮ ನೌಕೆಯನ್ನು ಉಡ್ಡಯನ ಮಾಡಿತ್ತು.

ನಾಸಾದ ನಿಕ್ ಹೇಗ್ ಮತ್ತು ರಷ್ಯಾ ಬಾಹ್ಯಾಕಾಶ ಏಜೆನ್ಸಿಯ ಅಲೆಕ್ಸಾಂಡರ್ ಗೋರ್ಬುನೊವ್ ಅವರನ್ನು ಹೊತ್ತ ಡ್ರ್ಯಾಗನ್, ಮುಂದಿನ ವರ್ಷ ಫೆಬ್ರುವರಿ ತನಕ ಬಾಹ್ಯಕಾಶ ನಿಲ್ದಾಣದಲ್ಲಿ ಉಳಿಯಲಿದೆ. ನೌಕೆಯಲ್ಲಿ ಎರಡು ಖಾಲಿ ಆಸನಗಳನ್ನು ಸುನಿತಾ–ಬುಚ್ ಅವರಿಗೆ ಕಾಯ್ದಿರಿಸಲಾಗಿದೆ.

ಕ್ರೂ-8 ಮಿಷನ್‌ನ ನಾಲ್ವರು ಗಗನಯಾತ್ರಿಗಳು ಅಕ್ಟೋಬರ್ ಮೊದಲ ವಾರದಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.