ಬೆಂಗಳೂರು: ವ್ಯಕ್ತಿಯೊಬ್ಬ ಮೂರು ಜನನಾಂಗಗಳನ್ನು ಹೊಂದಿದ್ದ ವಿರಳಾತಿ ವಿರಳ ಪ್ರಕರಣವೊಂದು ವರದಿಯಾಗಿದೆ.

ಇಂಗ್ಲೆಂಡ್ನ 78 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನರಾಗಿದ್ದಾಗ ಅವರ ದೇಹವನ್ನು ‘ಯುನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್’ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು.

ಈ ವೇಳೆ ಆ ವ್ಯಕ್ತಿಗೆ ಬಾಹ್ಯದಲ್ಲಿದ್ದ ಒಂದು ಜನನಾಂಗದ (ಶಿಶ್ನ) ಜೊತೆ ಆಂತರಿಕವಾಗಿ ಇನ್ನೆರಡು ಜನನಾಂಗ ಇರುವುದು ಕಂಡು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಂಶವನ್ನು ಸಂಶೋಧಕರು ಕಾಲೇಜಿನ ‘ದಿ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್’ನಲ್ಲಿ ದಾಖಲಿಸಿದ್ದಾರೆ.

ಇನ್ನೂ ವಿಚಿತ್ರವೆಂದರೆ ತಮ್ಮ ಜನನಾಂಗದ ಜೊತೆ ತಮ್ಮದೇ ದೇಹದಲ್ಲಿ ಇನ್ನೆರಡು ಜನನಾಂಗ ಇರುವುದು ಆ ವ್ಯಕ್ತಿಗೆ ತಿಳಿದೇ ಇರಲಿಲ್ಲವಂತೆ!

ಪುರುಷನ ದೇಹದ ಈ ಪರಿಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ‘ಟ್ರಿಫಲಿಯಾ’ ಎನ್ನುವರು ಎಂದು ಸಂಶೋಧಕರು ಹೇಳಿದ್ದಾರೆ.

ಈ ಮೊದಲು ಟ್ರಿಫಲಿಯಾ ಪ್ರಕರಣ 2020 ರಲ್ಲಿ ಯುರೋಪ್ನಲ್ಲಿ ವರದಿಯಾಗಿತ್ತು. ಮಗುವೊಂದು ಮೂರು ಜನನಾಂಗಗಳೊಂದಿಗೆ ಜನಿಸಿತ್ತು. ಸುಧಾರಿತ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಸರಿಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಮಗು ಹುಟ್ಟುವಾಗ ಬಾಹ್ಯ ಜನನಾಂಗ ಜೊತೆ ಆಂತರಿಕವಾಗಿ ಇನ್ನೊಂದು ಜನನಾಂಗ ಅಪರೂಪ ಎಂಬಂತೆ ಕಂಡು ಬರುತ್ತದೆ. ಆ ಸಮಸ್ಯೆಯನ್ನು ಚಿಕಿತ್ಸೆ ಮೂಲಕ ಸರಿ ಮಾಡಬಹುದು. ಆದರೆ, ಟ್ರಿಫಲಿಯಾ ಪ್ರಕರಣಗಳು ಇದುವರೆಗೆ ಜಗತ್ತಿನಲ್ಲಿ ಎರಡೇ ಕಂಡು ಬಂದಿರುವುದು ಎಂದು ಹೇಳಿದ್ದಾರೆ.

ಈ ರೀತಿಯ ಟ್ರಿಫಲಿಯಾ ಪ್ರಕರಣ ಯುನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್ನ ಮೆಡಿಕಲ್ ಕಾಲೇಜಿನ ಸಂಶೋಧಕರಿಗೆ ತೀವ್ರ ಅಚ್ಚರಿ ತರಿಸಿದ್ದು, ಸದ್ಯ ಬದುಕಿರುವ ಕೆಲ ವ್ಯಕ್ತಿಗಳಲ್ಲಿಯೂ ಟ್ರಿಫಲಿಯಾ ಇರಬಹುದು. ಅದು ಅವರಿಗೆ ಗೊತ್ತಾಗದೇ ಇರಬಹುದು ಎಂದು ಶಂಕಿಸಿದ್ದಾರೆ.
.ನಿರ್ದೇಶಕ, ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ.ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆ: ನೇತನ್ಯಾಹುಗೆ ಕರೆ ಮಾಡಿ ಅಭಿನಂದಿಸಿದ ಬೈಡನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.