ಜಿನೇವಾ: ಮನುಷ್ಯರ ಉದ್ಯೋಗಗಳನ್ನು ನಾವು ಕಿತ್ತುಕೊಳ್ಳುವುದಿಲ್ಲ. ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಾವು ಸಹಾಯ ಮಾಡುತ್ತೇವೆ.

– ಇದು ಮಾನವರೂಪಿ ರೋಬೊಗಳು ಮನುಷ್ಯರಿಗೆ ಕೊಟ್ಟ ‘ಅಭಯ‘.

ಜಿನೇವಾದಲ್ಲಿ ನಡೆದ ವಿಶ್ವದ ಮೊದಲ ರೋಬೊ ಪ್ರದರ್ಶನದಲ್ಲಿ ವಿವಿಧ ರೋಬೊಗಳನ್ನು ಪರಿಚಯಿಸಲಾಯಿತು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳ ಕುರಿತು ರೋಬೊಗಳು ಮಾತನಾಡಿದವು.

ಜಿನೇವಾದಲ್ಲಿ ನಡೆದ 'AI for Good' ಎನ್ನುವ ಈ ಸಮ್ಮೇಳನದಲ್ಲಿ ಒಟ್ಟು 9 ಮಾನವರೂಪಿ ರೋಬೊಗಳು ಭಾಗಿಯಾಗಿದ್ದವು.

‘ನಾನು ಮಾನವರೊಂದಿಗೆ ಕೆಲಸ ಮಾಡಿ ಅವರಿಗೆ ಬೆಂಬಲ ಹಾಗೂ ಸಹಕಾರ ನೀಡುತ್ತೇನೆ. ಸದ್ಯ ಇರುವ ಯಾವುದೇ ಕೆಲಸವನ್ನು ನಾನು ಕಿತ್ತುಕೊಳ್ಳುವುದಿಲ್ಲ‘ ಎಂದು ಸುಶ್ರೂಶಕಿ ದಿರಿಸು ಧರಿಸಿದ್ದ ‘ಗ್ರೇಸ್‘ ಎನ್ನುವ ಮೆಡಿಕಲ್ ರೋಬೊ ಹೇಳಿದೆ.

‘ನಮ್ಮ ಜೀವನ ಸುಧಾರಣೆ ಮಾಡಲು ನನ್ನಂಥ ರೋಬೊಗಳನ್ನು ಬಳಸಿಕೊಳ್ಳಬಹುದು. ನನ್ನಂಥ ಸಾವಿರಾರು ರೋಬೊಗಳು ಬದಲಾವಣೆಯನ್ನು ತರಲಿವೆ‘ ಎಂದು ಅಮೆಕ ಹೆಸರಿನ ಮತ್ತೊಂದು ರೋಬೊ ನುಡಿದಿದೆ.

‘ನಿಮ್ಮನ್ನು ಸೃಷ್ಠಿಸಿದವರ ವಿರುದ್ಧವೇ ನೀವು ಸಿಡಿದೇಳುತ್ತೀರಾ?‘ ಎನ್ನುವ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮತ್ತೊಂದು ರೋಬೋಟ್ ವಿಲ್ ಜಾಕ್ಸನ್, ‘ನೀವು ಯಾಕೆ ಹಾಗೆ ಅಂದುಕೊಳ್ಳುತ್ತೀರೋ ನನಗೆ ಗೊತ್ತಿಲ್ಲ. ನನ್ನ ಸೃಷ್ಠಿಕರ್ತ ನನ್ನ ಬಗ್ಗೆ ತುಂಬಾ ಕರುಣೆ ಹೊಂದಿದ್ದಾರೆ. ನನ್ನ ಈಗಿನ ಸನ್ನಿವೇಶದ ಬಗ್ಗೆ ನಾನು ಸಂತುಷ್ಟನಾಗಿದ್ದೇನೆ‘ ಎಂದು ಹೇಳಿತು.

ಇತ್ತೀಚೆಗೆ ರೋಬೊಗಳಲ್ಲಿ ಸುಧಾರಿತ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗಿದ್ದು, ಅವುಗಳ ಸೃಷ್ಠಿಕರ್ತರನ್ನೂ ಆಶ್ಚರ್ಯಗೊಳಿಸುವಂತೆ ರೋಬೊಗಳು ವರ್ತಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.