ಬೆಂಗಳೂರು: ಬಿಗ್ ಬಾಸ್ನಲ್ಲಿ ಒಬ್ಬ ಚಾಣಾಕ್ಷ ಆಟಗಾರನಾಗಿ ಡ್ರೋನ್ ಪ್ರತಾಪ್ ಗುರುತಿಸಿಕೊಂಡಿದ್ದಾರೆ. ನಟಿ ತಾರಾ ಅವರು ಮನೆಗೆ ಹೋದಾಗ ಈ ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಮನಬಿಚ್ಚಿನ ಮಾತನಾಡಿದ್ದಾರೆ.

ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಪ್ರತಾಪ್ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ಚಿತ್ರವೊಂದು ಹರಿದಾಡಿತ್ತು. ಈ ಕುರಿತು ಜಗ್ಗೇಶ್ ಸ್ಪಷ್ಟನೆ ನೀಡಿದ್ದು, ತಿರುಚಲಾದ ಪೋಸ್ಟ್ಗಳನ್ನು ಶೇರ್ ಮಾಡಲಾಗಿದೆ ಎಂದಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ‘ಮಿತ್ರರೆ ನನ್ನ ಇನ್ಸ್ಟಾಗ್ರಾಂ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ..ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು!

ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ. ಒಂದು ವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ!

ನನಗೀಗ 61. ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ!

ನನ್ನ ಮೇಲೆ ನಂಬಿಕೆಯಿರಲಿ. ಅಂಥಹ post ಗಳು ಬಂದರೆ share ಮಾಡಿ I will handle thankyou’ ಎಂದು ಬರೆದುಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಪ್ರತಾಪ್ ಅವರು ಡ್ರೋನ್ ತಯಾರಿಸಿ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ ಎಂದು ನಂಬಿ ಹಣ ನೀಡಿ ಮೋಸ ಹೋಗಿರುವುದಾಗಿ ಜಗ್ಗೇಶ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.