ಬೆಂಗಳೂರು:ಆನ್ಲೈನ್ ಶಾಪಿಂಗ್ ತಾಣ ಅಮೆಜಾನ್ನಲ್ಲಿ ದನದ ಸೆಗಣಿಯಿಂದ ಮಾಡಿದ ಬೆರಣಿಯನ್ನು ಕೇಕ್ ಎಂದು ಭಾವಿಸಿ ಖರೀದಿಸಿದ ವ್ಯಕ್ತಿಯೋರ್ವ ಮಾಡಿದ ಕಾಮೆಂಟ್ ವೈರಲ್ ಆಗಿದೆ. ಅಮೆಜಾನ್ ಶಾಪಿಂಗ್ನಲ್ಲಿ ಶುದ್ಧ ದನದ ಸೆಗಣಿಯ ಬೆರಣಿ ಲಭ್ಯವಿದ್ದು, ₹600ಬೆಲೆ ಹೊಂದಿದೆ. ಆದರೆ ಆಫರ್ ದರದಲ್ಲಿ ₹299 ದರಕ್ಕೆ ಲಭ್ಯವಿದೆ. ಆದರೆ ಉತ್ಪನ್ನದ ಹೆಸರು ಮಾತ್ರ ಒರಿಜಿನಲ್ ಹೋಲಿ ಕೌ ಡಂಗ್ ಕೇಕ್ ಎಂದಿದೆ. ಇದನ್ನು ಗಮನಿಸಿದ ಬಳಕೆದಾರನೋರ್ವ, ತಿನ್ನುವ ಕೇಕ್ ಎಂದು ಭಾವಿಸಿ ಖರೀದಿಸಿದ್ದಾನೆ.

ನಂತರ ಏನಾಯ್ತು?

ದನದ ಸೆಗಣಿಯ ಬೆರಣಿ ಖರೀದಿಸಿದ ವ್ಯಕ್ತಿಅದನ್ನು ತಿಂದ ಬಳಿಕ ಅಮೆಜಾನ್ ಶಾಪಿಂಗ್ ಪೇಜ್ನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಇದನ್ನು ನಾನು ತಿಂದಾಗ ಅದರ ರುಚಿ ತುಂಬಾ ಕೆಟ್ಟದಾಗಿತ್ತು. ಅದು ಹುಲ್ಲಿನ ಹಾಗಿದ್ದು, ಅದರಲ್ಲಿ ಮಣ್ಣಿನ ಸ್ವಾದವಿತ್ತು, ತಿಂದಾದ ಬಳಿಕ ಹೊಟ್ಟೆ ಕೆಟ್ಟುಹೋಯಿತು. ಅದನ್ನು ತಯಾರಿಸುವಾಗ ಸ್ವಲ್ಪ ಶುದ್ಧತೆ ಕಡೆ ಗಮನ ಕೊಡಿ, ಅಲ್ಲದೆ, ರುಚಿ ಮತ್ತು ಕುರುಕುರು ಅನ್ನಿಸುವಂತೆ ತಯಾರಿಸಿ ಎನ್ನುವ ಸಲಹೆ ನೀಡಿದ್ದಾನೆ.

ಈ ಬಳಕೆದಾರನ ಅನಿಸಿಕೆ ವೈರಲ್ ಆಗಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಅದಕ್ಕೆ ಸಹಮತ ಸೂಚಿಸಿದ್ದಾರೆ. ದನದ ಸೆಗಣಿಗೆ ಕೌ ಡಂಗ್ ಎಂದೂ, ಸೆಗಣಿಯಲ್ಲಿ ತಯಾರಿಸಿದ ಬೆರಣಿಗೆ ಕೇಕ್ ಎಂದೂ ಹೇಳಲಾಗುತ್ತದೆ. ಇದರಿಂದ ಆತ ಗೊಂದಲಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.