ಬೆಂಗಳೂರು: ನಗರದ ಟೆಕ್ಕಿಯೊಬ್ಬರು ಸ್ಟಾರ್‌ಬಕ್ಸ್‌ನಲ್ಲಿ ಕುಳಿತು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ ಲ್ಯಾಪ್‌ಟಾಪ್ ಕೇವಲ 15 ನಿಮಿಷದಲ್ಲಿ ಕೈ ಸೇರಿದೆ. ಫ್ಲಿಪ್‌ಕಾರ್ಟ್‌ನ ಈ ವೇಗದ ಡೆಲಿವರಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ವಸ್ತುಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ‘ಫ್ಲಿಕ್‌ಕಾರ್ಟ್ ಮಿನಿಟ್ಸ್’ ಅನ್ನು ಫ್ಲಿಪ್‌ಕಾರ್ಟ್ ಪರಿಚಯಿಸಿದೆ. ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿ ವಿವಿಧ ವಸ್ತುಗಳನ್ನು 15 ನಿಮಿಷದಲ್ಲಿ ಡೆಲಿವರಿ ಮಾಡುತ್ತೇವೆ ಎಂದು ಸಂಸ್ಥೆ ಹೇಳಿತ್ತು.

‘ಸ್ಟಾರ್‌ಬಕ್ಸ್‌ನಲ್ಲಿ ಕುಳಿತು ಆರ್ಡರ್ ಮಾಡಿದ ಲ್ಯಾಪ್‌ಟಾಪ್ ಸರಿಯಾಗಿ 13 ನಿಮಿಷದಲ್ಲೇ ಕೈಗೆ ಸಿಕ್ಕಿತು’ ಎಂದು ಟೆಕ್ಕಿ ಸನ್ನಿ ಗುಪ್ತ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಇದು ಪೈಡ್ ಪ್ರಮೋಶನ್ ಅಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ. ಡೆಲಿವಾರಿ ಬಾಯ್ ಲ್ಯಾಪ್‌ಟಾಪ್ ತೆಗೆದುಕೊಂಡು ಬರುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಸ್ಟಾರ್‌ಬಕ್ಸ್‌ನಲ್ಲಿಯೇ ಕುಳಿತು ಲ್ಯಾಪ್‌ಟಾಪ್ ಬಾಕ್ಸನ್ನು ತೆರೆದಿದ್ದಾರೆ ಕೂಡ.

ಅವರ ಈ ವಿಡಿಯೊಗೆ ಥರಹೇವಾರಿ ಕಮೆಂಟ್‌ಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.