ನವದೆಹಲಿ: ಟ್ವಿಟರ್ ಕಂಪನಿಯನ್ನು ಖರೀದಿಸಿದ ನಂತರ ‘ಹಕ್ಕಿ ಸ್ವತಂತ್ರವಾಗಿದೆ’ ಎಂದು ಹೇಳಿದ್ದ ಇಲಾನ್ ಮಸ್ಕ್ ಅವರು, ವಿಷಯ ನಿಯಂತ್ರಣ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

ವಿಷಯ ನಿಯಂತ್ರಣ ನೀತಿಗೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಮಸ್ಕ್, ‘ವೈವಿಧ್ಯಮಯ ದೃಷ್ಟಿಕೋನಗಳೊಂದಿಗೆ ವಿಷಯ ನಿಯಂತ್ರಣ ನೀತಿಗಳ ಸಮಿತಿಯೊಂದನ್ನು ರಚಿಸಲಾಗುತ್ತದೆ. ಸಮಿತಿ ರಚನೆಯಾಗುವುದಕ್ಕೆ ಮುನ್ನ ಯಾವುದೇ ಪ್ರಮುಖ ನಿರ್ಧಾರಗಳು ಅಥವಾ ಖಾತೆ ಮರುಸ್ಥಾಪನೆಗಳು ನಡೆಯುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

‘ಟ್ವಿಟರ್ನಲ್ಲಿ ಈಗ ಹಾಸ್ಯಕ್ಕೂ ಸಮ್ಮಿತಿ ಇದೆ’ ಎಂದು ಮಸ್ಕ್ಮಾರ್ಮಿಕವಾಗಿಟ್ವೀಟ್ ಮಾಡಿದ್ದಾರೆ.

ಒಪ್ಪಂದದಂತೆ ₹3.60 ಲಕ್ಷ ಕೋಟಿ ಮೊತ್ತಕ್ಕೆ ಟ್ವಿಟರ್ ಕಂಪನಿಯನ್ನು ಮಸ್ಕ್ ಖರೀದಿ ಮಾಡಿದ್ದಾರೆ.

ಮಸ್ಕ್ ಅವರು ಏಪ್ರಿಲ್ನಲ್ಲಿ ಟ್ವಿಟರ್ ಅನ್ನು ಖರೀದಿಸುವ ಸಂಬಂಧ ಆರಂಭಿಕ ಹಂತದ ಒಪ್ಪಂದ ಮಾಡಿಕೊಂಡಿದ್ದರು. ಆ ಬಳಿಕ ನಕಲಿ ಖಾತೆಗಳ ಮಾಹಿತಿಯನ್ನು ಟ್ವಿಟರ್ ನೀಡುತ್ತಿಲ್ಲ ಎಂದು ಆರೋಪಿಸಿ ಖರೀದಿ ಒಪ್ಪಂದದಿಂದ ಹಿಂದೆ ಸರಿಯುವ ಪ್ರಯತ್ನ ನಡೆಸಿದ್ದರು. ಹೀಗಾಗಿ ಟ್ವಿಟರ್ ಕಂಪನಿಯು ಮಸ್ಕ್ ವಿರುದ್ಧ ಕಾನೂನು ಹೋರಾಟ ಕೈಗೊಂಡಿತ್ತು. ಖರೀದಿ ಒಪ್ಪಂದ ಅಂತಿಮಗೊಳಿಸಲು ಅಮೆರಿಕ ನ್ಯಾಯಾಲಯವು ಅಕ್ಟೋಬರ್ 28ರ ಗಡುವು ನೀಡಿತ್ತು. ಈ ಬೆನ್ನಲ್ಲೇ ಗುರುವಾರ ತಡರಾತ್ರಿಯೇ ಮಸ್ಕ್ ಅವರು ಖರೀದಿ ಒಪ್ಪಂದ ಪೂರ್ಣಗೊಳಿಸಿದ್ದಾರೆ.

ವಿಶ್ವದ ಸಿರಿವಂತ ವ್ಯಕ್ತಿಯು ಟ್ವಿಟರ್ ಖರೀದಿ ಒಪ್ಪಂದವನ್ನು ಗುರುವಾರ ಪೂರ್ಣಗೊಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ ಹೇಳಿದೆ. ಟ್ವಿಟರ್ನ ವಹಿವಾಟು, ಅದರ ಉದ್ಯೋಗಿಗಳು ಮತ್ತು ಷೇರುದಾರರಲ್ಲಿ ಮೂಡಿದ್ದ ಅನಿಶ್ಚಿತತೆಯು ದೂರವಾಗಿದೆ ಎಂದು ಸಿಎನ್ಎನ್ ಪ್ರತಿಕ್ರಿಯೆ ನೀಡಿದೆ.

ಓದಿ...ಟ್ವಿಟರ್ ಮಾರಾಟ: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.