ಟೆಸ್ಲಾ ಖ್ಯಾತಿಯ ಉದ್ಯಮಿ ಇಲಾನ್ ಮಸ್ಕ್ ಅವರು ಟ್ವಿಟರ್ ತಾಣವನ್ನು ಖರೀದಿಸುತ್ತಿದ್ದಾರೆ. ಈ ಕುರಿತಾದ ಒಪ್ಪಂದ ಅಂತಿಮವಾಗುವುದಕ್ಕೂ ಮೊದಲು ಅವರು ನಕಲಿ ಖಾತೆಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ.

ಆದರೆ, ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಉದ್ಯಮಿ ಇಲಾನ್ ಮಸ್ಕ್ ಅವರ ನಡುವೆ ಎಲ್ಲವೂ ಸರಿಯಿದ್ದಂತಿಲ್ಲ ಎನ್ನುವುದಕ್ಕೆ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿಯಾಗಿವೆ.

ಟ್ವಿಟರ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜ್ಮೆಂಟ್ನಲ್ಲಿ ಉಪಾಧ್ಯಕ್ಷರಾಗಿದ್ದ ಇಲಿಯಾ ಬ್ರೌನ್, ಟ್ವಿಟರ್ ಸರ್ವೀಸ್ನ ಉಪಾಧ್ಯಕ್ಷೆ ಕತ್ರೀನಾ ಲೇನ್ ಮತ್ತು ಡಾಟಾ ಸೈನ್ಸ್ ಹೆಡ್ ಮ್ಯಾಕ್ಸ್ ಶ್ಮಿಸರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತೆರಳಿದ್ದಾರೆ.

ಈ ಕುರಿತು ಟೆಕ್ಕ್ರಂಚ್ ವರದಿ ಪ್ರಕಟಿಸಿದೆ ಎಂದು ಸುದ್ದಿಸಂಸ್ಥೆ ಐಎಎನ್ಎಸ್ ಹೇಳಿದೆ.

ನಕಲಿ ಫೇಸ್ಬುಕ್ ಪೇಜ್ಗಳ ಹಾವಳಿ: ಎಚ್ಚರಿಕೆ ಕೊಟ್ಟ ಉದ್ಯಮಿ ರತನ್ ಟಾಟಾ

ಈ ಮೊದಲು ಕೂಡ, ಟ್ವಿಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಉದ್ಯೋಗಿಗಳು ಕಂಪನಿ ಬಿಟ್ಟು ಹೋಗಿದ್ದರೆ, ಮತ್ತೆ ಕೆಲವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಟ್ವಿಟರ್ ಸ್ಪಾಮ್ ಖಾತೆ ಕುರಿತು ಸ್ಪಷ್ಟಪಡಿಸಿ: ಇಲಾನ್ ಮಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.