ಬೆಂಗಳೂರು: ಜನಪ್ರಿಯ ಸಾಮಾಜಿಕ ತಾಣ ಫೇಸ್ಬುಕ್, ಕೊನೆಗೂ ಲೈವ್ ಆಡಿಯೊ ರೂಮ್ ಸೇವೆಯನ್ನು ಆರಂಭಿಸಿದೆ. ಆರಂಭದಲ್ಲಿ ಅಮೆರಿಕದಲ್ಲಿ ಮಾತ್ರ ಸೇವೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ರಾಷ್ಟ್ರಗಳಲ್ಲಿ ದೊರೆಯಲಿದೆ.

ಕ್ಲಬ್ ಹೌಸ್ ಮಾದರಿಯ ಸೇವೆ ಇದಾಗಿದ್ದು, ಜತೆಗೆ ಫೇಸ್ಬುಕ್ ಪಾಡ್ಕಾಸ್ಟ್ ಕೂಡ ಬಿಡುಗಡೆಯಾಗಿದೆ.

ಈಗಾಗಲೇ ಕ್ಲಬ್ ಹೌಸ್ ಜನಪ್ರಿಯವಾಗಿದ್ದು, ಟ್ವಿಟರ್ ಸ್ಪೇಸಸ್ ಮತ್ತು ಸ್ಪಾಟಿಫೈ ಗ್ರೀನ್ ರೂಮ್ ಮಾದರಿಯಲ್ಲೇ ಫೇಸ್ಬುಕ್ ಲೈವ್ ಆಡಿಯೊ ರೂಮ್ ಕಾರ್ಯನಿರ್ವಹಿಸಲಿದೆ.

ಪ್ರಸ್ತುತ ಅಮೆರಿಕದಲ್ಲಿ ಐಫೋನ್ ಬಳಕೆದಾರರಿಗೆ ಲೈವ್ ಆಡಿಯೊ ರೂಮ್ ದೊರೆಯುತ್ತಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನಷ್ಟೇ ಲಭ್ಯವಾಗಬೇಕಿದೆ.

Explainer: ಇಂಟರ್ನೆಟ್ ಸ್ಲೋ ಆಗಿದೆಯೇ? ಗಾಳಿ ಮಳೆಯೂ ಕಾರಣವಿರಬಹುದು..

ಜತೆಗೆ ಆಯ್ದ ಫೇಸ್ಬುಕ್ ಗ್ರೂಪ್ಗಳಿಗೆ ಮತ್ತು ಪಬ್ಲಿಕ್ ಫಿಗರ್ ಎಂದು ಗುರುತಿಸಿಕೊಂಡವರಿಗೆ ಮಾತ್ರ ಫೇಸ್ಬುಕ್ ಲೈವ್ ಆಡಿಯೊ ರೂಮ್ ರಚಿಸುವ ಅವಕಾಶ ಕಲ್ಪಿಸಿದೆ. ಮುಂದಿನ ಹಂತದಲ್ಲಿ ಜನಸಾಮಾನ್ಯರಿಗೆ ಕೂಡ ಆಡಿಯೊ ರೂಮ್ ರಚಿಸುವ ಅವಕಾಶ ನೀಡುವುದಾಗಿ ಫೇಸ್ಬುಕ್ ಬ್ಲಾಗ್ನಲ್ಲಿ ತಿಳಿಸಿದೆ.

iOS 15: ಮತ್ತಷ್ಟು ಹೊಸ ಫೀಚರ್ ಜತೆಗೆ ಖಾಸಗಿತನದ ಆಯ್ಕೆ ಪರಿಚಯಿಸಿದ ಆ್ಯಪಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.