ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧನ ಪತ್ನಿಗೆ ಫೋನ್ ಕರೆ ಮಾಡಿ ಸಾಂತ್ವನ ನೀಡುತ್ತಿದ್ದಾರೆ. ಈ ವಿಡಿಯೊ ನಿಮ್ಮ ಕಣ್ಣಲ್ಲಿಯೂ ನೀರು ತರಿಸುತ್ತದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ಈ ವಿಡಿಯೊ6 ವರ್ಷ ಹಿಂದಿನ ವಿಡಿಯೊ ಆಗಿದ್ದು ಈ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

2.20 ಅವಧಿಯ ಈ ವಿಡಿಯೊದಲ್ಲಿ ಮಹಿಳೆಯೊಂದಿಗೆ ಮೋದಿ ಮಾತನಾಡುತ್ತಿರುವುದನ್ನು ಕೇಳಬಹುದು.ಆ ಕಡೆಯಿಂದ ಮೋದಿ, ನಾನು ನಿಮ್ಮಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡಬೇಕೆಂದು ಬಯಸಿದ್ದೆ.ಆದರೆ ನಮ್ಮ ಹವಾಮಾನ ಸರಿಯಿಲ್ಲದ ಕಾರಣ ನಮ್ಮ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ.ನಮ್ಮ ಪಕ್ಷದ ವ್ಯಕ್ತಿಯೊಬ್ಬರು ನಾಳೆ ಅಥವಾ ನಾಡಿದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಮ್ಮ ಪಕ್ಷ ನಿಮ್ಮ ಕುಟುಂಬವನ್ನು ನೋಡಿಕೊಳ್ಳುತ್ತದೆ.ಈ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲಯನಿಮ್ಮ ಕುಟುಂಬದ ಪಾಲಿಗೆ ಇದೊಂದು ಕೆಟ್ಟ ಗಳಿಗೆ.ದೇವರು ನಿಮಗೆ ಧೈರ್ಯ ನೀಡಲಿ.
ಮೋದಿ ಇಷ್ಟು ಹೇಳಿದಾಗ ಆ ಮಹಿಳೆ, ನೀವು ನನ್ನನ್ನು ಮತ್ತು ಕುಟುಂಬವನ್ನು ಹರಸಿ. ನನ್ನ ಮಗಳನ್ನು ನೋಡಿಕೊಳ್ಳುವುದಾಗಿ ಮಾತು ಕೊಡಿ ಅಂತಾರೆ.

ಇದಕ್ಕೆ ಆ ಕಡೆಯಿಂದ ಮೋದಿ. ನಾವು ಧೈರ್ಯದಿಂದಿರಬೇಕು, ಉಗ್ರರಿಗೆ ನಾವು ನೀಡುವ ಉತ್ತರ ಇದೇ ಅಂತಾರೆ.

ಫೋನ್ ಕರೆ ಕಟ್ ಆಗುವ ಮುನ್ನ ಅವರಿಬ್ಬರೂ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಾರೆ.

ಪುಲ್ವಾಮ ಭಯೋತ್ಪಾದನಾ ದಾಳಿ ನಡೆದ ಬೆನ್ನಲ್ಲೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದೆ. ಆದಾಗ್ಯೂ 2017ರಲ್ಲಿಯೂ ಇದೇ ವಿಡಿಯೊ ಶೇರ್ ಆಗಿತ್ತು, ಪ್ರಧಾನಿ ಮೋದಿ ಹುತಾತ್ಮ ಯೋಧನ ಪತ್ನಿಗೆ ಕರೆ ಮಾಡಿ ಸಂತೈಸುತ್ತಿರುವ ವಿಡಿಯೊ ಎಂದು ಈ ವಿಡಿಯೊ ಆಗ ಶೇರ್ ಆಗಿತ್ತು.

ನಿಜ ಸಂಗತಿ ಏನು?
ಈ ವಿಡಿಯೊದಲ್ಲಿ ಮಹಿಳೆಯ ಜತೆ ಮಾತನಾಡುವಾಗ ಮೋದಿ ಕನಿಷ್ಟ ಎರಡು ಬಾರಿ ಟೆರರಿಸ್ಟ್ಎಂಬ ಪದ ಬಳಸಿದ್ದಾರೆ.ಈ ವಿಡಿಯೊದ ಮೂಲ ಪತ್ತೆ ಮಾಡಲು ಬೂಮ್ ಟೀಮ್ ಹಲವಾರು ಕೀವರ್ಡ್ ಗಳನ್ನು ಬಳಸಿ ಗೂಗಲಿಸಿದಾಗ ಬೇರೆ ಬೇರೆ ಶೀರ್ಷಿಕೆಯಲ್ಲಿ ಈ ವಿಡಿಯೊ ಅಪ್ಲೋಡ್ ಆಗಿದ್ದು ಪತ್ತೆಯಾಗಿದೆ.

ಇದೇ ವಿಡಿಯೊ ನವೆಂಬರ್ 2, 2013ರಂದು ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಅಪ್ಲೋಡ್ ಆಗಿದೆ.ಅಂದರೆ ಮೋದಿ ಈ ಮಹಿಳೆ ಜತೆ ಮಾತನಾಡಿದ್ದು ಪ್ರಧಾನಿಯಾಗಿದ್ದಾಗ ಅಲ್ಲ, ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಬುದು ಸ್ಪಷ್ಟ.

ಈ ಘಟನೆ ಏನಾಗಿರಬಹುದು ಎಂದು ಅಂತರ್ಜಾಲದಲ್ಲಿ ಸರ್ಚ್ ಮಾಡಿದಾಗ ಈ ಬಗ್ಗೆ ಹಲವಾರು ಮಾಧ್ಯಮ ವರದಿಗಳು ಸಿಕ್ಕಿವೆ.ಮೋದಿ ಕೂಡಾ ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೊದಲ್ಲಿರುವ ಮಹಿಳೆ ಯಾರು?

ಕಣ್ಣೀರಿಡುತ್ತಾಮೋದಿ ಜತೆ ಫೋನ್ನಲ್ಲಿ ಮಾತನಾಡುತ್ತಿರುವ ಈ ಮಹಿಳೆ ಪ್ರಿಯಾ ಶ್ರೀವಾಸ್ತವ. ಬಿಹಾರದ ಗೋಪಾಲ್ಗಂಜ್ ನಿವಾಸಿ ಮುನ್ನಾ ಶ್ರೀವಾಸ್ತವ್ ಅವರ ಪತ್ನಿ.2013 ಅಕ್ಟೋಬರ್ 27ರಂದು ಪಟ್ನಾದಲ್ಲಿ ನಡೆದ ಬಿಜೆಪಿ ರ್ಯಾಲಿ ವೇಳೆಸಂಭವಿಸಿದ ಸ್ಫೋಟದಲ್ಲಿ ಶ್ರೀವಾಸ್ತವ್ ಸಾವಿಗೀಡಾಗಿದ್ದರು.

2013ರಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ಪಟ್ನಾದಲ್ಲಿ ಹೂಂಕಾರ್ ರ್ಯಾಲಿ ಕೈಗೊಂಡಿದ್ದರು. ಈ ಬಗ್ಗೆ ಇರುವ ಮಾಧ್ಯಮ ವರದಿಗಳು ಇಲ್ಲಿವೆ.

ಬಿಜೆಪಿ ರ್ಯಾಲಿಯ ವೇಳೆ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದವರನ್ನು ಬಿಜೆಪಿ ಶಹೀದ್ (ಹುತಾತ್ಮ) ಎಂದು ಉಲ್ಲೇಖಿಸಿದೆ.ಹಾಗಾಗಿ ಮೋದಿ,ಹುತಾತ್ಮನ ಪತ್ನಿ ಜತೆ ಮಾತನಾಡುತ್ತಿದ್ದಾರೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿತ್ತು. ಅಂದರೆ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧನ ಪತ್ನಿಗೆ ಮೋದಿ ಫೋನ್ ಕರೆ ಮಾಡಿ ಸಂತೈಸುತ್ತಿರುವ ವಿಡಿಯೊ ಎಂದು ಹೇಳುತ್ತಿರುವ ಈ ವಿಡಿಯೊ 6 ವರ್ಷ ಹಿಂದಿನದ್ದು ಎಂದು ಇಲ್ಲಿ ಸ್ಪಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.