ನ್ಯೂಯಾರ್ಕ್: ಹಿಂಸೆಗೆ ಪ್ರಚೋದಿಸುವ ಟ್ವೀಟ್ ಮಾಡಿದ್ದ ಆರೋಪದಡಿ ಅಮೆರಿಕದ ರ್ಯಾಪರ್ ಯೇ (ಕಾನ್ಯೆ ವೆಸ್ಟ್) ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದೆ ಎಂದು ಟ್ವಿಟರ್ ಮಾಲೀಕ ಇಲಾನ್ ಮಸ್ಕ್ ಶುಕ್ರವಾರ ಹೇಳಿದ್ದಾರೆ.

ಯಹೂದಿಗಳ ಚಿಹ್ನೆಯಾದ ಸ್ಟಾರ್ ಆಫ್ ಡೇವಿಡ್ ಮತ್ತು ಹಿಟ್ಲರ್ ನಾಜಿ ಪಕ್ಷದ ಚಿಹ್ನೆ ಸ್ವಸ್ತಿಕಾವನ್ನು ಜೋಡಿಸಿದ ಚಿತ್ರವನ್ನು ತಮ್ಮ ಪ್ರಚಾರದ ಲೋಗೊ ಆಗಿ ಕಾನ್ಯೆ ವೆಸ್ಟ್ ಟ್ವೀಟ್ನಲ್ಲಿ ಬಳಸಿದ್ದರು. ಅವರ ಖಾತೆ ಅಮಾನತಿಗೂ ಕೆಲ ಗಂಟೆಗಳ ಮುನ್ನ ಕಾನ್ಯೆ ವೆಸ್ಟ್ ಈ ಚಿತ್ರವನ್ನು ಡಿಲೀಟ್ ಮಾಡಿದ್ದಾರೆ.

ಗುರುವಾರ ಕ್ಯಾನೆ ವೆಸ್ಟ್ ಅವರ ಟ್ವೀಟ್ಗಳನ್ನು ನಿರ್ಬಂಧಿಸಲಾಗಿದ್ದು, ಖಾತೆಯನ್ನು ಅಮಾನತು ಮಾಡಲಾಗಿದೆ. ‘ಇಲಾನ್ ದಯವಿಟ್ಟು ಕ್ಯಾನೆ ತಪ್ಪನ್ನು ಸರಿಪಡಿಸಿ’ಎಂದು ಟ್ವಿಟರ್ ಬಳಕೆದಾರರೊಬ್ಬರು ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿದ ಒಂದೇ ಗಂಟೆಯಲ್ಲಿ ಮಸ್ಕ್ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆಯೂ ಯಹೂದಿ ವಿರೋಧಿ ಟ್ವೀಟ್ಗಾಗಿ ಅವರ ಖಾತೆಯನ್ನು ಅಮಾನತು ಮಾಡಲಾಗಿತ್ತು. ನವೆಂಬರ್ ಅಂತ್ಯದಲ್ಲಿ ಯೆ ಅವರು ಮತ್ತೆ ಸಾಮಾಜಿಕ ಮಾಧ್ಯಮ ವೇದಿಕೆಗೆ ಮರಳಿದ್ದರು. ಆಗ ಮಸ್ಕ್, ಕ್ಯಾನೆ ಅವರಿಗೆ ಸ್ವಾಗತ ಕೋರಿದ್ದರು.

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲೇ ರ್ಯಾಪರ್ ಖಾತೆಯನ್ನು ಟ್ವಿಟರ್ ಮರುಸ್ಥಾಪಿಸಿತ್ತು. ಆದರೆ, ಯೇ ಅವರನ್ನು ಮತ್ತೆ ಟ್ವಿಟರ್ಗೆ ಕರೆತರುವಲ್ಲಿ ತಮ್ಮ ಪಾತ್ರವಿಲ್ಲ ಎಂದು ಮಸ್ಕ್ ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.