ಬೆಂಗಳೂರು: ಗೂಗಲ್ ಹುಡುಕಾಟದಲ್ಲಿ'ಕನ್ನಡ ಕೊಳಕು ಭಾಷೆ' ಎಂದು ತೋರಿಸಿ ಗೂಗಲ್ ಕಂಪನಿ ಕನ್ನಡಕ್ಕೆ ಅವಮಾನ ಮಾಡಿದ ಬೆನ್ನಲ್ಲೇ, ಇದೀಗ ಇ ಕಾಮರ್ಸ್ ದೈತ್ಯ ಅಮೆಜಾನ್ಕೂಡ ಕನ್ನಡಕ್ಕೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್ ವೆಬ್ಸೈಟ್ನಲ್ಲಿ (Amazon.ca) ಇಂತಹದೊಂದು ಪ್ರಮಾದ ನಡೆದಿದೆ. ಕರ್ನಾಟಕ ಬಾವುಟಹೋಲುವ ಮತ್ತು ಕರ್ನಾಟಕದ ಲಾಂಛನವಿರುವ ಒಳ ಉಡುಪನ್ನು ಮಾರಾಟಕ್ಕೆ ಪ್ರದರ್ಶಿಸಿದೆ.

ಇದರಿಂದ ಕುಪಿತಗೊಂಡಿರುವ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ. ಕ್ರಮ ಕೈಗೊಳ್ಳಲುಅಮೆಜಾನ್ ಕಂಪನಿಗೆ ಆಗ್ರಹಿಸಿದ್ದಾರೆ.

ವಿವಾದಿತ ಪುಟದ ನೋಡಲು ಇಲ್ಲಿ ಕ್ಲಿಕ್ ಮಾಡಿ

ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಕೆಲವರು ಒಳ ಉಡುಪು ಇರುವ ವೆಬ್ ಪುಟದ ಲಿಂಕ್ ಶೇರ್ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಕ್ ನೋಡಿದಾಗ, ಕರ್ನಾಟಕದ ಭಾವುಟ ಮತ್ತು ಲಾಂಛನವಿರುವ ಒಳ ಉಡುಪು ನೋಡಲು ಸಿಗುತ್ತದೆ.BKDMHHH ಎಂಬ ಬ್ರಾಂಡ್ನ ಬಿಕಿನಿ ರೀತಿಯ ಒಳ ಉಡುಪು ಇದಾಗಿದೆ. ಅದು ಸದ್ಯ ಲಭ್ಯವಿಲ್ಲ ಎಂದು ತೋರಿಸುತ್ತದೆ.

ಆದರೆ, ಈ ಬಗ್ಗೆ ‘ಪ್ರಜಾವಾಣಿ‘ ಪರಿಶೀಲಿಸಿದಾಗ, ಕೆನಡಾದ ಅಮೆಜಾನ್ತಾಣದಲ್ಲಿ ವಿವಾದಿತ ಒಳ ಉಡುಪು ಇರುವ ಪುಟ ಸಿಗುವುದಿಲ್ಲ. ಅಲ್ಲದೇ ಭಾರತದ ಅಮೆಜಾನ್ ಪುಟದಲ್ಲೂ ಅಂತಹ ಯಾವುದೇ ಉತ್ಪನ್ನ ಮಾರಾಟಕ್ಕೆ ಲಭ್ಯವಿಲ್ಲ. ಈ ಬಗ್ಗೆ ಅಮೆಜಾನ್ಕಂಪನಿ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

ಆದರೆ, ಇಂತಹದೊಂದು ವಿವಾದಿತ ಪುಟ ಇರುವುದರ ಬಗ್ಗೆ ಕನ್ನಡಾಭಿಮಾನಿಗಳು ಅಮೆಜಾನ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಸರ್ಚ್ ಎಂಜಿನ್ನಲ್ಲಿ ಕನ್ನಡಕ್ಕೆ ಕೆಟ್ಟ ಭಾಷೆಯ ಪಟ್ಟಿ: ಕ್ಷಮೆಯಾಚಿಸಿದ ಗೂಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.