ಲಂಡನ್ (ಎಪಿ): ಸೈಬರ್ ಸುರಕ್ಷತಾ ಕ್ರಮವಾಗಿ ಉದ್ಯೋಗಿಗಳು ಬಳಸುವ ಫೋನ್ಗಳಿಂದ ಟಿಕ್ಟಾಕ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಯುರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ಶಾಖೆ ಗುರುವಾರ ತಿಳಿಸಿದೆ. ಇದು ಚೀನಾದ ಒಡೆತನದ ವೀಡಿಯೊ ಹಂಚಿಕೆ ಅಪ್ಲಿಕೇಶನ್ ಆಗಿದ್ದು, ಇದರ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ.

ಸ್ಪೈ ಬಲೂನ್ಗಳಿಂದ ಕಂಪ್ಯೂಟರ್ ಚಿಪ್ಗಳವರೆಗೆ ತಂತ್ರಜ್ಞಾನದ ಮೇಲೆ ಚೀನಾ ಮತ್ತು ಪಶ್ಚಿಮ ರಾಷ್ಟ್ರಗಳು ವ್ಯಾಪಕವಾದ ಹಗ್ಗಜಗ್ಗಾಟ ಮಾಡುತ್ತಿರುವುದರಿಂದ, ಯುರೋಪಿಯನ್ ಕಮಿಷನ್ ಮೊದಲ ಬಾರಿಗೆ ಅದರ ಕಾರ್ಪೊರೇಟ್ ಮ್ಯಾನೇಜ್ಮೆಂಟ್ ಬೋರ್ಡ್ ಸಿಬ್ಬಂದಿಗೆ ನೀಡಲಾದ ಸಾಧನಗಳಲ್ಲಿ ಅಥವಾ ಸಿಬ್ಬಂದಿ ಕೆಲಸಕ್ಕಾಗಿ ಬಳಸುವ ವೈಯಕ್ತಿಕ ಸಾಧನಗಳಲ್ಲಿ ಟಿಕ್ಟಾಕ್ ಬಳಕೆಯನ್ನು ಸ್ಥಗಿತಗೊಳಿಸಿದೆ.

ಮಾರ್ಚ್ 15 ರೊಳಗೆ ಸಿಬ್ಬಂದಿ ವೃತ್ತಿಪರ ವ್ಯವಹಾರಕ್ಕಾಗಿ ಬಳಸುವ ಖಾಸಗಿ ಸಾಧನಗಳಿಂದ ಟಿಕ್ಟಾಕ್ ಅನ್ನು ಅಳಿಸಬೇಕಾಗುತ್ತದೆ ಎಂದು ಇಯು ಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಅದನ್ನು ಹೇಗೆ ಜಾರಿಗೊಳಿಸಲಾಗುವುದು ಎಂಬುದರ ಕುರಿತು ಯಾವುದೇ ವಿವರಗಳನ್ನು ನೀಡಲಿಲ್ಲ. ಅಮೆರಿಕದಲ್ಲೂ ಇದೇ ರೀತಿಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.