ಬೆಂಗಳೂರು: ವಿಡಿಯೊ ಮಾಡಲು ಸಂಭವಿಸಿರುವ ದುರಂತ, ಸಾವುಗಳಿಂದ ಹಾಗೂ ಚೀನಾ ವಿಚಾರ ಬಂದಾಗ, ಮಕ್ಕಳು ಆ್ಯಪ್ ಬಳಕೆಯ ಚಟಕ್ಕೆ ಒಳಗಾಗಿರುವ ಚರ್ಚೆಗಳಲ್ಲಿ ಟಿಕ್ಟಾಕ್ ಮುನ್ನೆಯಲ್ಲಿರುತ್ತದೆ. ಪುಟ್ಟ ವಿಡಿಯೊ ಪ್ರಕಟಿಸಿಕೊಳ್ಳುವ ವೇದಿಕೆಯಾಗಿರುವ ಟಿಕ್ಟಾಕ್ ಇದೀಗ ಕನ್ನಡದ ಹೊಸ ಸಂಗೀತಗಾರರು, ಕಲಾವಿದರು ಹಾಗೂ ಹಾಡುಗಾರರ ಹುಡುಕಾಟ ನಡೆಸುತ್ತಿದೆ.

ಇನ್-ಆ್ಯಪ್ ಪ್ರಾದೇಶಿಕ ಮ್ಯೂಸಿಕ್ ಟ್ಯಾಲೆಂಟ್ ಹಂಟ್ #ಮ್ಯೂಸಿಕ್ಸ್ಟಾರ್ಕನ್ನಡ ಪ್ರಾರಂಭಿಸಿದ್ದು, ಹೊಸ ಸಂಗೀತ ಪ್ರತಿಭೆಗಳನ್ನು ಪರಿಚಯಿಸುವ ಪ್ರಯತ್ನ ನಡೆಸಿದೆ. ಜೂನ್ 7ರಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಶುರುವಾಗಿದೆ. ಈ ಪ್ರತಿಭಾ ಸ್ಪರ್ಧೆಯ ವಿಜೇತರನ್ನು ಜೂನ್ 21ರಂದು ವಿಶ್ವ ಸಂಗೀತ ದಿನದಂದು ಪ್ರಕಟಿಸಲಾಗುತ್ತದೆ. ಆಕರ್ಷಕ ನಗದು ಬಹುಮಾನ ಗೆಲ್ಲುವುದಲ್ಲದೆ ವಿಜೇತರು ರೆಸ್ಸೊ ಟು ರೆಕಾರ್ಡ್ ಅವಕಾಶ ಪಡೆಯಲಿದ್ದಾರೆ. ಮುಂಚೂಣಿ ಮ್ಯೂಸಿಕ್ ಲೇಬಲ್ನೊಂದಿಗೆ ಸಾಮಾಜಿಕ ಸ್ಟ್ರೀಮಿಂಗ್ ಪ್ಲಾಟ್ಫಾರಂನಲ್ಲಿ ಸಂಗೀತ ಬಿಡುಗಡೆ ಮಾಡಲು ಅವಕಾಶ ಪಡೆಯಲಿದ್ದಾರೆ.

ಖ್ಯಾತ ಕಲಾವಿದರು ಮತ್ತು ಜನಪ್ರಿಯ ಸಂಗೀತಗಾರರು ಪ್ರಾದೇಶಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳ ಪ್ರತಿಭೆಗಳನ್ನು ಜಿ.ವಿ.ಪ್ರಕಾಶ್, ಸಂಗೀತಾ ರಾಜೀವ್, ಅನುಪ್ ರುಬೆನ್ಸ್, ಕೆ.ಎಸ್.ಚೈತ್ರ ಇದ್ದಾರೆ. ಬಳಕೆದಾರರು ಅವರನ್ನು ಲೈವ್ನಲ್ಲಿ ವೀಕ್ಷಿಸಬಹುದು ಮತ್ತು ಹಿಟ್ ಗೀತೆಗಳ ಹಾಡುವುದನ್ನೂ ಕಾಣಬಹುದು.

#ಮ್ಯೂಸಿಕ್ಸ್ಟಾರ್ ಮೂಲಕ ವೀಕ್ಷಕರಿಗೆ ದೇಶದ ಹಲವು ಪ್ರದೇಶದ ಪ್ರತಿಭೆಗಳು, ಸಂಗೀತ ಬಳಕೆದಾರರನ್ನು ತಲುಪುತ್ತದೆ.

'ಸಮುದಾಯ ಮತ್ತು ಹೊಸ ಸಂಗೀತ ಸೃಷ್ಟಿಕರ್ತರು ಹಾಗೂ ಕಲಾವಿದರು ಹೊಸ ಧ್ವನಿಯನ್ನು ಟಿಕ್ಟಾಕ್ ಮೂಲಕ ಪಡೆದಿದ್ದಾರೆ. ಟಿಕ್ಟಾಕ್ನ #ಮ್ಯೂಸಿಕ್ಸ್ಟಾರ್ಕನ್ನಡ ಮುಖೇನ ಪ್ರತಿಭೆಯನ್ನು ಪರಿಚಯಿಸುವುದು ಉತ್ಸಾಹ ತಂದಿದೆ' ಎಂದು ಹಾಡುಗಾರ್ತಿ ಸಂಗೀತಾ ರಾಜೀವ್ ಹೇಳಿದ್ದಾರೆ.

#ಮ್ಯೂಸಿಕ್ಸ್ಟಾರ್ ಕನ್ನಡ ಅಭಿಯಾನದ ಹಂತಗಳು:

1ನೇ ಹಂತ- ಜೂನ್ 7-14: ಪ್ರತಿ ಭಾಷೆಯಿಂದ 10 ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ. ಅತ್ಯಂತ ಹೆಚ್ಚು ಲೈಕ್ಸ್, ಗುಣಮಟ್ಟ ಮತ್ತು ಮ್ಯೂಸಿಕ್ ಕಂಟೆಂಟ್ ಆಧರಿಸಿ ವಿಜೇತರ ಆಯ್ಕೆಯಾಗುತ್ತದೆ.
2ನೇ ಹಂತ- ಜೂನ್ 15: ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಹಾಗೂ ಬಳಕೆದಾರರಿಗೆ ಮತ ನೀಡಲು ಉತ್ತೇಜಿಸಲಾಗುತ್ತದೆ. ಎಲ್ಲ ಪ್ರದೇಶಗಳ 60 ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಅವರ ಅಚ್ಚುಮೆಚ್ಚಿನ ಸ್ವತಂತ್ರ ಸಂಗೀತಗಾರರನ್ನು ಬೆಂಬಲಿಸಲು ಉತ್ತೇಜಿಸಲಾಗುತ್ತದೆ.
3ನೇ ಹಂತ- ಜೂನ್ 21: ಅತ್ಯಂತ ಹೆಚ್ಚಿನ ಸಂಖ್ಯೆಯ ಮತಗಳನ್ನು ಆಧರಿಸಿ, ಪ್ರತಿ ಭಾಷೆಯಲ್ಲಿ 5 ಜನರನ್ನು ಅಂತಿಮ ಸ್ಪರ್ಧೆಯ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.